ರಾಜಕೀಯ

ಸಿಎಂ ಸ್ಥಾನದಿಂದ ಬಿಎಸ್ ವೈ ನಿರ್ಗಮನ ವಿಚಾರ: ಇನ್ನೂ ಸ್ಪಷ್ಟವಾಗಿಲ್ಲ ಹೈಕಮಾಂಡ್ ಸಂದೇಶ!

Shilpa D

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಜುಲೈ 26ಕ್ಕೆ ಎರಡು ವರ್ಷವಾಗುತ್ತಿದೆ. ಇನ್ನು ಎರಡು ದಿನಗಳು ಬಾಕಿ ದ್ದರೂ ಕೇಂದ್ರ ಬಿಜೆಪಿ ನಾಯಕರಿಂದ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಯಾವುದೇ ಸ್ಪಷ್ಟ ಸಂದೇಶ ರವಾನೆಯಾಗಿಲ್ಲ.

ಮುಂದಿನ ದಿನಗಳಲ್ಲಿ ಸಂಭವಿಸದಿದ್ದರೂ ಭಾನುವಾರ ಬಿಜೆಪಿ ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುವ ಸಾಧ್ಯತೆಯಿಜೆ ಎಂದು ಪಕ್ಷದ ಕೆಲವು ನಾಯಕರು ತಿಳಿಸಿದ್ದಾರೆ. 

ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿದ್ದು, ಅವರ ಸಂದೇಶಕ್ಕಾಗಿ ಕಾಯುತ್ತಿರುವುದಾಗಿ ಯಡಿಯೂರಪ್ಪ ತಿಳಿಸಿದ್ದರು. ಸೋಮವಾರ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಮಾರಂಭ ಆಯೋಜಿಸಿದ್ದು ವಿಧಾನಸೌಧದಲ್ಲಿ ಕಾರ್ಯಕ್ರಮ ಜರುಗಲಿದ, ಈ ವೇಳೆ ಸರ್ಕಾರದ ಸಾಧನೆ ಕುರಿತ ಪುಸ್ತಕ ಕೂಡ ಬಿಡುಗಡೆಯಾಗಲಿದೆ.

ನಾಯಕತ್ವದ ಬದಲಾವಣೆಯ ಬಗ್ಗೆ ಕೇಂದ್ರ ನಾಯಕರು ಉತ್ಸುಕರಾಗಿದ್ದರೂ, ಯಡಿಯೂರಪ್ಪ ಅವರ ಉತ್ತರಾಧಿಕಾರಿಯನ್ನು ಅವರು ಇನ್ನೂ ನಿರ್ಧರಿಸಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಲ್ಲದೆ, ಪ್ರವಾಹದಿಂದ ಸಾವಿರಾರು ಜನರು ಸ್ಥಳಾಂತರಗೊಂಡಿರುವ ಸಮಯದಲ್ಲಿ ಅವರು ಮುಖ್ಯಮಂತ್ರಿಯನ್ನು ಬದಲಾಯಿಸುವ ಅಪಾಯ ತೆಗೆದುಕೊಳ್ಳದಿರಲು ಹೈಕಮಾಂಡ್ ಬಯಸುತ್ತಿಲ್ಲ,  ಆದರೆ ಅದು ಯಾವಾಗ ಬೇಕಾದರೂ ಆಗಬಹುದು ಎಂದು ತಿಳಿದು ಬಂದಿದೆ.

ಪ್ರವಾಹದಿಂದ ಹಾನಿಗೊಳಗಾದ ಜನರಿಗೆ ಸಹಾಯ ಮಾಡಲು ಸಂಪೂರ್ಣ ಆಡಳಿತ ಯಂತ್ರಕ್ಕೆ ಒತ್ತಾಯಿಸಲಾಗಿದೆ, ಬೆಳಗಾವಿಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಸಿಎಂ ಯಡಿಯೂರಪ್ಪ ಪರಿಸ್ಥಿತ ಅವಲೋಕನಕ್ಕಾಗಿ ಬೆಳಗಾವಿಗೆ ತೆರಳಲಿದ್ದಾರೆ.

SCROLL FOR NEXT