ಆರ್. ಅಶೋಕ್, ವಿ. ಸೋಮಣ್ಣ 
ರಾಜಕೀಯ

ಪರಸ್ಪರ ಏಕವಚನದಲ್ಲಿ ಕಿತ್ತಾಡಿಕೊಂಡ ಬೆಂಗಳೂರಿನ ಬಿಜೆಪಿಯ ಹಿರಿಯ ಶಾಸಕರು!

ಮಹಾನಗರ ಬೆಂಗಳೂರಿನ ಹಿರಿಯ ಬಿಜೆಪಿ ಶಾಸಕರಾದ ಆರ್. ಅಶೋಕ್ ಮತ್ತು ವಿ. ಸೋಮಣ್ಣ ಪರಸ್ಪರ ಏಕವಚನದಲ್ಲಿ ಕಿತ್ತಾಡಿಕೊಂಡಿರುವ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.  

ಬೆಂಗಳೂರು: ಮಹಾನಗರ ಬೆಂಗಳೂರಿನ ಹಿರಿಯ ಬಿಜೆಪಿ ಶಾಸಕರಾದ ಆರ್. ಅಶೋಕ್ ಮತ್ತು ವಿ.ಸೋಮಣ್ಣ ಪರಸ್ಪರ ಏಕವಚನದಲ್ಲಿ ಕಿತ್ತಾಡಿಕೊಂಡಿರುವ ವಿಚಾರ ಇದೀಗ  ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.  

ಮೊಬೈಲ್ ನಲ್ಲಿ ಸಂಭಾಷಣೆ ವೇಳೆ ಪರಸ್ಪರ ಏಕವಚನ ಮತ್ತು ಕೆಟ್ಟ ಪದಗಳನ್ನು ಬಳಸಿ ಜಗಳವಾಡಿಕೊಂಡಿದ್ದಾರೆ. ಆಡಿಯೋ ತುಣುಕು ಕೆಲವರಿಗೆ ಲಭ್ಯವಾಗಿದ್ದು, ಪಕ್ಷದೊಳಗೆ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. 

ತಮ್ಮನ್ನು ಕರೆಯದೇ ದೆಹಲಿಗೆ ಹೋಗಿದ್ದ ಅಶೋಕ್, ಸಂಪುಟಕ್ಕೆ ತಮ್ಮನ್ನು ಸೇರಿಸದಂತೆ ವರಿಷ್ಠರಿಗೆ ದೂರು ನೀಡಿರಬಹುದೆಂದು ಸೋಮಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ. ಆಗ ಇಬ್ಬರೂ ಪರಸ್ಪರ ಪಿತೂರಿ, ಸೇಡಿನ ರಾಜಕಾರಣದ ಆರೋಪ ಮಾಡಿದ್ದು, ಕೆಲ ನಿಮಿಷಗಳ ಕಾಲ ಜಗಳವಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿ. ಸೋಮಣ್ಣ, ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪ ಇಲ್ಲ. ಯಾವುದೋ ಕಾಲದಲ್ಲಿ ನಡೆದ ಚರ್ಚೆಯನ್ನೆ ಇದೀಗ ಸಂಪುಟ ವಿಚಾರಕ್ಕೆ ತಳುಕು ಹಾಕಲಾಗುತ್ತಿದೆ. ಅಶೋಕ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ  ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ: ಅಧಿಕೃತ ಪಟ್ಟಿಗೆ ರಾಜ್ಯಪಾಲರಿಂದ ಸಹಿ; ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ

ಖಾಲಿ ನಿವೇಶನಗಳ ಸ್ವಚ್ಛಗೊಳಿಸುವ ಗಡುವು: ಮಾಲಿಕರಿಗೆ ಗುಡ್ ನ್ಯೂಸ್!

ಉಪ ಸಭಾಪತಿ ನೇಮಕದಲ್ಲಿ ಬಿಗ್ ಟ್ವೀಸ್ಟ್: ಅಸಮಾಧಾನ ತಣಿಸಲು ಮಂಕಾಳ ವೈದ್ಯಗೆ ಮಣೆ; ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಪೊನ್ನಣ್ಣ ನೇಮಕ

'ಕರ್ನಾಟಕದಿಂದ ಜಾಗ ಖಾಲಿ ಮಾಡಿಸಿಬಿಡ್ತೀವಿ': ‘ಟಾಕ್ಸಿಕ್’ ಟ್ರೇಲರ್ ಕುರಿತು Rishika Singh ಆಕ್ರೋಶ, ಯಶ್ ಅಭಿಮಾನಿಗಳ ಅಸಮಾಧಾನ! Video

ಅಮಿತ್ ಶಾ 'ಉಪನ್ಯಾಸ' ಕೇಳುವ ಆಸಕ್ತಿ ಈಗ ನಮ್ಮಲ್ಲಿ ಉಳಿದಿಲ್ಲ; ಅವರ ವರ್ಚಸ್ಸಿನ 'ಬಲೂನ್' ಟುಸ್ ಆಗಿದೆ: ರಾಹುಲ್ ಗಾಂಧಿ