ರಾಜಕೀಯ

ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ: ಯಡಿಯೂರಪ್ಪ ಬದ್ಧವೈರಿಗಳು ಮೌನವಾಗಿರುವುದೇಕೆ?

Shilpa D

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿದ ನಂತರವೂ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರೋಧಿ ಬಣದ ನಾಯಕರ ಹೇಳಿಕೆಗಳು ಇನ್ನೂ ನಿಂತಿಲ್ಲ. 

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ವಿರುದ್ಧ ಕಿಡಿಕಾರುವುದನ್ನು ಇನ್ನೂ ನಿಲ್ಲಿಸಿಲ್ಲ. ಶುಕ್ರವಾರ ಕೂಡ ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಆದರೆ ಕೆಲವು ಯಡಿಯೂರಪ್ಪ ವಿರೋಧಿ ಬಣದ ನಾಯಕರು ಕೂಡ ಮೌನವಾಗಿದ್ದಾರೆ. ಮುಂದಿನ ವಾರ ಸಂಪುಟ ವಿಸ್ತರಣೆ ನಡೆಯುವ ಕಾರಣದಿಂದ ಸಂಪುಟದಲ್ಲಿ ಪ್ರವೇಶ ಪಡೆಯುವ ಕಾರಣದಿಂದಾಗಿ ಇವರೆಲ್ಲಾ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಅವರ ಬದ್ಧ ವೈರಿ ಸಿಪಿ ಯೋಗೇಶ್ವರ್ ಕೂಡ ಇತ್ತೀಚೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದಾರೆ. ಶುಕ್ರವಾರ ನವದೆಹಲಿಗೆ ತೆರಳಿದ್ದ ಯೋಗೇಶ್ವರ್ ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಕೋರಿದ್ದಾರೆ.

ಇನ್ನೂ ಎಚ್.ವಿಶ್ವನಾಥ್, ಅರವಿಂದ್ ಬೆಲ್ಲದ್ ಕೂಡ ಈ ಹಿಂದೆ ಯಡಿಯೂರಪ್ಪ ವಿರುದ್ಧ ಪೋನ್ ಟ್ಯಾಪಿಂಗ್ ನಂತ ಗಂಭೀರ ಆರೋಪ ಮಾಡಿದ್ದರು. ಅವರು ಕೂಡ ಸದ್ಯದ ಪರಿಸ್ಥಿತಿಯಲ್ಲಿ ಮಗುಮ್ಮಾಗಿದ್ದಾರೆ. ಭಿನ್ನಮತೀಯ ನಾಯಕರು ಪರಸ್ಪರ ಸಂಪರ್ಕದಲ್ಲಿದ್ದಾರೆ ಮತ್ತು ಉತ್ತಮವಾಗಿ ಸಂಘಟಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಸಚಿವ ಸಂಪುಟ ರಚನೆ ಅವರಿಗೆ ತೃಪ್ತಿ ತರದಿದ್ದರೇ ಬಿಜೆಪಿಯೊಳಗೆ ಭಿನ್ನಮತವು ಮತ್ತೆ ಕಾಣಿಸಿಕೊಳ್ಳಬಹುದು ಎಂದು ಅವರು ಎಚ್ಚರಿಕೆ ರವಾನಿಸಿದ್ದಾರೆ.

SCROLL FOR NEXT