ರಾಜಕೀಯ

ಕಾಂಗ್ರೆಸ್ ರಾಷ್ಟ್ರ ವಿರೋಧಿ ಚಿಂತನೆಗಳಿಗೆ ಬೆಂಬಲ ನೀಡುತ್ತಿದೆ: ಕೆ.ಎಸ್. ಈಶ್ವರಪ್ಪ

Manjula VN

ಕಾರವಾರ: ಕಾಂಗ್ರೆಸ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರು, ರಾಷ್ಟ್ರ ವಿರೋಧಿ ಚಿಂತನೆ, ಭಾವನೆಗಳಿಗೆ ಬೆಂಬಲ ನೀಡುತ್ತಿದ್ದಾರೆಂದು ಕಿಡಿಕಾರಿದ್ದಾರೆ. 

ಗೋಕರ್ಣಗೆ ಭೇಟಿ ಮಂಗಳವಾರ ಸಂಜೆ ಭೇಟಿ ನೀಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. 

ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ, ಚರ್ಚಿಸಿ ಬಗೆಹರಿಸಿಕೊಳ್ಳುವ ಸಂಪ್ರದಾಯ ನಮ್ಮಲ್ಲಿದೆ. ಕಾಂಗ್ರೆಸ್'ನಲ್ಲಿ ಆ ವ್ಯವಸ್ಥೆ ಇಲ್ಲ. ಆರ್ಟಿಕಲ್ 370 ಕುರಿತ ದಿಗ್ವಿಜಯ್ ಸಿಂಗ್ ಅವರ ರಾಷ್ಟ್ರ ದ್ರೋಹಿ ಹೇಳಿಕೆಯನ್ನು ಕಾಂಗ್ರೆಸ್'ನ ಯಾವೊಬ್ಬ ನಾಯಕನೂ ಖಂಡಿಸಿಲ್ಲ ಎಂದು ಹೇಳಿದ್ದಾರೆ. 

ಇದೇ ವೇಳೆ ಜಮೀರ್ ಅಹ್ಮದ್ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದು ರಾಷ್ಟ್ರೀಯ ಪಕ್ಷವೊಂದರ ಶಿಸ್ತಿಗೆ ಉದಾಹರಣೆ. ಆದರೆ ಕಾಂಗ್ರೆಸ್‌ನಲ್ಲಿ ಈ ಶಿಸ್ತು ಇಲ್ಲ. ಕಾಂಗ್ರೆಸ್‌ ನಾಯಕರಿಗೆ ತಾವು ಏನು ಮಾತನಾಡುತ್ತೇವೆ ಎಂಬ ಜ್ಞಾನ ಇರೋದಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಕೂಡ ಭಿನ್ನ ಅಲ್ಲ. ಮತ್ತೊಬ್ಬ ನಾಯಕ ಜಮೀರ್ ಅಹ್ಮದ್‌ ಗೂ ಕೂಡ ಜ್ಞಾನವಿಲ್ಲ. ಜಮೀರ್ ಅಹ್ಮದ್‌ ತಮ್ಮ ಚಾಮರಾಜಪೇಟೆ ಕ್ಷೇತ್ರವನ್ನ ಸಿದ್ದರಾಮಯ್ಯಗೆ ಬಿಟ್ಟು ಕೊಡುತ್ತೇನೆ. ಅವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ಇವರೇ ಸ್ಥಾನ ಬಿಡೋದು, ಇವರೇ ಟಿಕೆಟ್ ನೀಡೋದು, ಇವರೇ ಸಿಎಂ ಘೋಷಣೆ ಮಾಡೋದು ಹಾಗಾದರೆ ಕಾಂಗ್ರೆಸ್ ಹೈ ಕಮಾಂಡ್‌ ಯಾಕೆ ಬೇಕು..? ಎಂದು ಚಾಟಿ ಬೀಸಿದರು. 

ಬಳಿಕ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿ, ಕೆಲವರು ದೆಹಲಿಗೆ ಹೋಗಿ ಬಂದಿದ್ದಾರೆ, ಇನ್ನು ಕೆಲವರು ಇದು 3 ಪಕ್ಷದ ಸರ್ಕಾರ ಅಂತಿದ್ದಾರೆ. ಒಂದೆಡೆ ಸಹಿ ಸಂಗ್ರಹ ನಡೆದಿದೆ, ಆದರೆ ಕೇಂದ್ರದ ನಾಯಕರು ಇದನ್ನ ಒಪ್ಪುವುದಿಲ್ಲ. ಇದಕ್ಕಾಗಿಯೇ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರನ್ನು ರಾಜ್ಯಕ್ಕೆ ಕಳುಹಿಸುತ್ತಿದ್ದಾರೆ. ನಾನು ಪಕ್ಷದ ಒಬ್ಬ ಪ್ರಾಮಾಣಿಕ ಕಾರ್ಯಕರ್ತ. ಹೀಗಾಗಿ ನಾಯಕತ್ವ ಬದಲಾವಣೆಯ ಬಗ್ಗೆ, ಸಂಪುಟ ರಚನೆಯ ಬಗ್ಗೆ ಯಾವುದೇ ಆಗ್ರಹ ಮಾಡುವುದಿಲ್ಲ. ಶಾಸಕರು, ಸಚಿವರ ಅಭಿಪ್ರಾಯವನ್ನು ಅರುಣ್ ಸಿಂಗ್ ಅವರು ಕೇಂದ್ರಕ್ಕೆ ನೀಡುತ್ತಾರೆ. ಕೇಂದ್ರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆಂದು ತಿಳಿಸಿದ್ದಾರೆ. 

SCROLL FOR NEXT