ಯಡಿಯೂರಪ್ಪ 
ರಾಜಕೀಯ

ಕೌರವನಂತೆ ವೈಶಂಪಾಯನ ಸರೋವರದಲ್ಲೇಕೆ ಅಡಗಿದ್ದೀರಿ: ಪಾಂಡವರಂತೆ ಬಿಕ್ಕಟ್ಟು ಬಗೆಹರಿಸಿ! ಅಯೋಗ್ಯತನಕ್ಕೆ ಮಂತ್ರಿಗಿರಿ ಏಕೆ?

ರೈತರೆದುರು ಸಮಸ್ಯೆಗಳನ್ನಿಟ್ಟು ಕೌರವನಂತೆ ವೈಶಂಪಾಯನ ಸರೋವರದಲ್ಲೇಕೆ ಅಡಗಿದ್ದೀರಿ, ಪಾಂಡವರಂತೆ ಬಿಕ್ಕಟ್ಟುಗಳನ್ನ ಬಗೆಹರಿಸಿ ಎಂದು ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ತಿವಿದಿದೆ.

ಬೆಂಗಳೂರು: ರೈತರೆದುರು ಸಮಸ್ಯೆಗಳನ್ನಿಟ್ಟು ಕೌರವನಂತೆ ವೈಶಂಪಾಯನ ಸರೋವರದಲ್ಲೇಕೆ ಅಡಗಿದ್ದೀರಿ, ಪಾಂಡವರಂತೆ ಬಿಕ್ಕಟ್ಟುಗಳನ್ನ ಬಗೆಹರಿಸಿ ಎಂದು ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ತಿವಿದಿದೆ. 

ಈ ಸಂಬಂಧ ಟ್ವಿಟ್ಟರ್ ನಲ್ಲಿ ಹರಿಹಾಯ್ದಿರುವ ರಾಜ್ಯ ಕಾಂಗ್ರೆಸ್ ಬಿತ್ತನೆ ಬೀಜ, ಗೊಬ್ಬರ ಸಿಗದೆ ರೈತರು ಪರದಾಡುತ್ತಿರುವ ಸಮಯದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಚಾದರ ಹೊದ್ದು ಮಲಗಿದ್ದಾರೆ. ಈ ಅಯೋಗ್ಯತನಕ್ಕೆ ಏಕೆ ಮಂತ್ರಿಗಿರಿ ಎಂದು ಪ್ರಶ್ನಿಸಿದೆ. 

ಅಯೋಗ್ಯತನ ಯಾರದ್ದು ಎನ್ನುವುದನ್ನ ರಾಜ್ಯ ಕಂಡಿದೆ ಸಚಿವರೇ,ಬಿತ್ತನೆ ಬೀಜ ಸಿಗದಿರುವುದೇಕೆ?  ಡಿವಿ ಸದಾನಂದಗೌಡ ಅವರು ರಾಜ್ಯದವರಾಗಿದ್ದರೂ ರೈತರಿಗೆ ರಸಗೊಬ್ಬರ ಏಕೆ ಸಿಗ್ತಿಲ್ಲ? ಬೆಳೆ ವಿಮೆ ಹಣ ಏಕೆ ಸಿಗ್ತಿಲ್ಲ? 'ಆಕ್ಸಿಜನ್, ಲಸಿಕೆಗಳ ನಂತರ ಈ ಸರ್ಕಾರದ 'ಇಲ್ಲ'ಗಳ ಪಟ್ಟಿಗೆ  ಹೊಸ ಸೇರ್ಪಡೆಯಾಗಿರುವುದು ಗೊಬ್ಬರ, ಬಿತ್ತನೆ ಬೀಜ ಎಂದು ಆರೋಪಿಸಿದೆ.

ಬಿಎಸ್ ಯಡಿಯೂರಪ್ಪ ಅವರೇ, ರೈತರನ್ನ ಮೆಚ್ಚಿಸಲು ಹಸಿರು ಶಾಲಿನ ಪ್ರಮಾಣ ವಚನದ ನಾಟಕವಾಡಿದ ನೀವು ಈಗ ರೈತರ ಬೆನ್ನಿಗೆ ಚೂರಿ ಹಾಕುತ್ತಿದ್ದೀರಿ. ಕಳೆದ ಬಾರಿ ಗೊಬ್ಬರ ಕೇಳಿದ ರೈತರಿಗೆ ಗುಂಡೇಟು, ಈ ಬಾರಿ ಬಿತ್ತನೆ ಬೀಜ ಕೇಳಿದವರಿಗೆ ಲಾಠಿ ಏಟು. ಕನಿಷ್ಠ ಬೀಜ, ಗೊಬ್ಬರ ನೀಡಲಾಗದ ಬಿಜೆಪಿ ಸರ್ಕಾರ ರೈತರ ಉದ್ದಾರಕ್ಕೆ ಇನ್ಯಾವ ಸಾಧನೆ ಮಾಡಬಲ್ಲದು? ಟೀಕಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

SCROLL FOR NEXT