ಶಿವಕುಮಾರ್ ಉದಾಸಿ, ಶೋಬಾ ಕರಂದ್ಲಾಜೆ 
ರಾಜಕೀಯ

ಕೇಂದ್ರ ಸಂಪುಟ ಪುನರ್ರಚನೆ: ಶಿವಕುಮಾರ್ ಉದಾಸಿ, ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನ?

ಕೇಂದ್ರ ಸಚಿವ ಸಂಪುಟದ ಪುನರ್ರಚನೆಯ ಬಗ್ಗೆ ಹೆಚ್ಚಿನ ಊಹಾಪೋಹಗಳು  ಇದ್ದು ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಯಾರು ಸಚಿವರಾಗಬಹುದು ಎನ್ನುವುದರ ಬಗ್ಗೆ ಜಾತಿ ಮತ್ತು ಅಧಿಕಾರ ಸಮೀಕರಣಗಳ ಆಧಾರದ ಮೇಲೆ ಹಲವಾರು ಸಂಸದರ ಹೆಸರುಗಳು ಕೇಳಿ ಬರುತ್ತಿದೆ.

ಬೆಂಗಳೂರು/ಧಾರವಾಡ: ಕೇಂದ್ರ ಸಚಿವ ಸಂಪುಟದ ಪುನರ್ರಚನೆಯ ಬಗ್ಗೆ ಹೆಚ್ಚಿನ ಊಹಾಪೋಹಗಳು  ಇದ್ದು ಈ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಯಾರು ಸಚಿವರಾಗಬಹುದು ಎನ್ನುವುದರ ಬಗ್ಗೆ ಜಾತಿ ಮತ್ತು ಅಧಿಕಾರ ಸಮೀಕರಣಗಳ ಆಧಾರದ ಮೇಲೆ ಹಲವಾರು ಸಂಸದರ ಹೆಸರುಗಳು ಕೇಳಿ ಬರುತ್ತಿದೆ. ಹಾವೇರಿ-ಗದಗ ಸಂಸದ ಶಿವಕುಮಾರ್ ಉದಾಸಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಹೆಸರುಗಳು ಸಹ ಇದೀಗ ಮುಂದೆ ಬಂದಿದೆ.

ಕೇಂದ್ರ ಸಂಪುಟದಲ್ಲಿ ಕರ್ನಾಟಕದ ಇಬ್ಬರು ಮಂತಿಗಳಿದ್ದಾರೆ.ಡಿ.ವಿ.ಸದಾನಂದ ಗೌಡ ಮತ್ತು ಪ್ರಹ್ಲಾದ್ ಜೋಶಿ  ಅಲ್ಲದೆ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರ್ಮಲಾ ಸೀತಾರಾಮನ್ ಕೂಡ ಕರ್ನಾಟಕದ  ರಾಜ್ಯಸಭಾ ಸಂಸದರಾಗಿದ್ದಾರೆ.

ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಸುರೇಶ್ ಅಂಗಡಿ ಅವರ ಸ್ಥಾನಕ್ಕೆ ಲಿಂಗಾಯತರನ್ನು ನೇಮಿಸಲಾಗುವುದು ಎಂಬ ಮಾತಿನ ಬಗ್ಗೆ ಬಿಜೆಪಿ ವಲಯದಲ್ಲಿ ಗೊಂದಲವಿದೆ. . ದಲಿತರಿಗೆ ಸ್ಥಳಾವಕಾಶ ಕಲ್ಪಿಸುವ ಇರಾದೆ ಇದೆ ಎನ್ನುವ ಮಾತೂ ಇದೆ.

ನಾಲ್ಕು ಬಾರಿಯ ಸಂಸದ  ಅಂಗಡಿ ಅವರು ಸುಮಾರು 16 ತಿಂಗಳು ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಕಳೆದ ಸೆಪ್ಟೆಂಬರ್‌ನಲ್ಲಿ ಕೋವಿಡ್ ನಿಂದಾಗಿ ನಿಧನರಾದರು.  ಅವರ ಪತ್ನಿ ಮಂಗಳಾ ಅಂಗಡಿ ಬೆಳಗಾವಿ ಸಂಸದೆಯಾಗಿ ಆಯ್ಕೆಯಾದರು.

ಇದು ಪ್ರಧಾನಿ ನರೇಂದ್ರ ಮೋದಿಯವರ ತೀರ್ಮಾನ ಎಂದು  ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು, ಮತ್ತು ಅವರು "ಕಾದು ನೋಡಲು " ಮಾತ್ರ ಸಾಧ್ಯ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ "ಈ ಹಂತದಲ್ಲಿ ಯಾರಗೂ ಖಚಿತವಾಗಿ ತಿಳಿಯುವುದಿಲ್ಲ " ಎಂದು ಹೇಳುವ ಮೂಲಕ  ಎಲಾ ಊಹಾಪೋಹಗಳನ್ನು  ಕೊನೆಗೊಳಿಸಲು ಪ್ರಯತ್ನಿಸಿದರು. ಈ ಬಗ್ಗೆ  ಪ್ರಧಾನಿ ನಿರ್ಧರಿಸುತ್ತಾರೆ ಮತ್ತು ಅನಗತ್ಯವಾಗಿ ಊಹಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕದ ಲಿಂಗಾಯತ ಮುಖಂಡ ಶಿವಕುಮಾರ್ ಉದಾಸಿ ಸಚಿವರಾಹುವ ಭರವಸೆಯ ನಾಯಕರಲ್ಲಿ ಒಬ್ಬರು. ಉದಾಸಿ ಅವರ ತಂದೆ ಹಾನಗಲ್ ಶಾಸಕ  ಸಿಎಂ ಉದಾಸಿ ಇತ್ತೀಚೆಗೆ ನಿಧನರಾದರು. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ತಂದೆ ಬಿ.ಎಸ್.ಯಡಿಯೂರಪ್ಪ  ಮುಖ್ಯಮಂತ್ರಿ ಆಗಿರುವುದರಿಂದ ಅವರು ಸಚಿವರಾಗುವ ಸಾಧ್ಯತೆ ಇಲ್ಲವೆನ್ನಲಾಗಿದೆ.

ಸಂಪುಟದಲ್ಲಿ ದಲಿತರಿಗೆ ಸ್ಥಾನ ಸಿಗಬಹುದೆಂಬ ಊಹಾಪೂಹದೊಡನೆ ರಾಜಕೀಯ ದೈತ್ಯ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸೋಲಿಸಿದ ಕಲಬುರಗಿ ಸಂಸದ ದ ಡಾ.ಉಮೇಶ್ ಜಾಧವ್ ಹಾಗೂ ಚಿತ್ರದುರ್ಗ ಎಂಪಿ ಎ ನಾರಾಯಣಸ್ವಾಮಿ ಅವರ ಹೆಸರಿಗಳು ಸಹ ಮುನ್ನಲೆಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!