ಡಿ.ವಿ.ಸದಾನಂದ ಗೌಡ 
ರಾಜಕೀಯ

ಕೋವಿಡ್ ವ್ಯಾಕ್ಸಿನ್ ಉತ್ಪಾದನೆಯಾಗದೇ ಹೋದರೆ ನಾವೇನು ನೇಣು ಹಾಕ್ಕೊಳಕಾಗುತ್ತಾ?: ಡಿವಿಎಸ್ ಅಸಾಹಯಕತೆ

ಅಗತ್ಯಕ್ಕನುಸಾರವಾಗಿ ಸಾಕಷ್ಟು ಪ್ರಮಾಣದಲ್ಲಿ ಕೋವಿಡ್ ವ್ಯಾಕ್ಸಿನ್ ಉತ್ಪಾದನೆಯಾಗದೇ ಹೋದರೆ ನಾವೇನು ನೇಣುಹಾಕಿಕೊಳ್ಳಲಾಗುತ್ತದೆಯೇ? ಎಂದು ಕೇಂದ್ರ ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅಸಹಾಯಕತೆಯ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ಅಗತ್ಯಕ್ಕನುಸಾರವಾಗಿ ಸಾಕಷ್ಟು ಪ್ರಮಾಣದಲ್ಲಿ ಕೋವಿಡ್ ವ್ಯಾಕ್ಸಿನ್ ಉತ್ಪಾದನೆಯಾಗದೇ ಹೋದರೆ ನಾವೇನು ನೇಣುಹಾಕಿಕೊಳ್ಳಲಾಗುತ್ತದೆಯೇ? ಎಂದು ಕೇಂದ್ರ ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅಸಹಾಯಕತೆಯ ಹೇಳಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ವೇಳೆ ಸುದ್ದಿಗಾರರು ಹೈಕೋರ್ಟ್ ಆದೇಶದಂತೆ ಕೇಂದ್ರವಿನ್ನೂ ಪೂರ್ತಿಯಾಗಿ ಕರ್ನಾಟಕಕ್ಕೆ ವ್ಯಾಕ್ಸಿನ್ ಪೂರೈಸಿಲ್ಲವಲ್ಲ ಎಂಬ ಪ್ರಶ್ನೆಗೆಮಾತನಾಡಿದ ಡಿವಿಎಸ್, ನ್ಯಾಯಾಲಯ ಇಷ್ಟು ವ್ಯಾಕ್ಸಿನ್ ಕೊಡಿ ಅಷ್ಟು ಕೊಡಿ ಎಂದು ಹೇಳುತ್ತದೆ. ಕೋರ್ಟ್ ಹೇಳಿದೆಯೆಂದ ಮಾತ್ರಕ್ಕೆ ವ್ಯಾಕ್ಸಿನ್ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ಮಾಡಲಾಗದಿದ್ದರೆ ನೇಣುಹಾಕಿಕೊಳ್ಳಬೇಕೇ?ಎಂದರು.

ರಾಜಕೀಯ ಲಾಭಕ್ಕಾಗಿ ನಾವು ಪ್ಲಾನ್ ಆಫ್ ಆಕ್ಷನ್ ಮಾಡಿಲ್ಲ. ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ‌.ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆ ಆಗಲಿಲ್ಲ. ಅದು ನಮ್ಮ‌ ಪ್ರಯತ್ನ ಮೀರಿದ್ದಾಗಿದೆ.ಕಳೆದ ಬುಧವಾರದವರೆಗೆ ಕರ್ನಾಟಕದಲ್ಲಿ ಇನ್ನು 98,000ಡೋಸ್ ವ್ಯಾಕ್ಸಿನ್ ಸಂಗ್ರಹವಿದೆ.ಕೇಂದ್ರದಿಂದ ಇನ್ನು 75,000ಡೋಸ್ ಬರಬೇಕಾಗಿದೆ.ಇದುವರೆ ಒಂದು ಕೋಟಿ ಹದಿನೆಂಟು ಲಕ್ಷಕ್ಕು ಹೆಚ್ಚು ವ್ಯಾಕ್ಸಿನ ಕೊಡಲಾಗಿದೆ. ನೇರವಾಗಿ ಪ್ರಧಾನಿಯವರೇ ವ್ಯಾಕ್ಸಿನೇಷನ್ ಅಭಿಯಾನದ ಉಸ್ತುವಾರಿ ವಹಿಸಿದ್ದಾರೆ. ಇನ್ನು ಒಂದು ವಾರದೊಳಗೆ ಗೊಂದಲಗಳು ಬಗೆ ಹರಿಯುತ್ತದೆ. ಅದಕ್ಕಾಗಿಯೇ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನಿಲ್ಲಿಸಲಾಗಿದೆ‌. ನಲವತ್ತೈದು ವರ್ಷ ಮೇಲ್ಪಟ್ಟವರಿಗೆ ಈಗ ವ್ಯಾಕ್ಸಿನೇಷನ್ ಮುಂದುವರಿಸಲಾಗಿದೆ ಎಂದು ಡಿ.ವಿ.ಸದಾನಂದಗೌಡ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video