ರಾಜಕೀಯ

ಬಿಜೆಪಿ ಶಾಸಕರಿಂದ ಬೆಡ್ ಬ್ಲಾಕಿಂಗ್ ದಂಧೆ, ಜನರಿಗೆ ಸಂಕಷ್ಟ: ರಾಮಲಿಂಗಾರೆಡ್ಡಿ ಆರೋಪ

Nagaraja AB

ಬೆಂಗಳೂರು: ನಗರದಲ್ಲಿ ಬಿಜೆಪಿ ಶಾಸಕರು, ಬಿಜೆಪಿ ಬೆಂಬಲಿತ ಸಹಚರ ಪ್ರಭಾವದಿಂದ ಬೆಡ್ ಬ್ಲಾಕಿಂಗ್ ದಂಧೆ ಹೆಚ್ಚಾಗಿ ಜನಸಾಮಾನ್ಯರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗುವುದು ಬಹಳ ಕಷ್ಟಕರವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಬಿಟಿಎಂ ವಿಧಾನ ಸಭಾ ಕ್ಷೇತ್ರದ ಕೋರಮಂಗಲದ ಒಳಾಂಗಣ ಸ್ಟೇಡಿಯಂನಲ್ಲಿ 24x7 ತುರ್ತು ಟ್ರೈಯೇಜ್ ಸೆಂಟರ್, ಆಕ್ಸಿಜನ್ ಹಾಗೂ  ಕೋವಿಡ್ ಬೆಡ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ಬೆಡ್ ಬ್ಲಾಕಿಂಗ್ ದಂಧೆಯಿಂದಾಗಿ ಕೋವಿಡ್ ಗೆ ಚಿಕಿತ್ಸೆ ಸಿಗದೇ  ಜನರು ಸಾವನ್ನಪ್ಪುತ್ತಿದ್ದಾರೆ ಎಂದರು. 

ಎಲ್ಲ ಜನಸಾಮಾನ್ಯ ಕೋವಿಡ್ ಪೀಡಿತರಿಗೆ ಸೂಕ್ತ  ಬೆಡ್ ವ್ಯವಸ್ಥೆ ಹಾಗೂ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿ ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದಿನದ 24ಗಂಟೆಗಳು ಸೇವೆ ಓದಗಿಸಲು ಕ್ಷೇತ್ರದಲ್ಲಿ ಎರಡು ಕಡೆಗಳಲ್ಲಿ ಉಚಿತ ಬೆಡ್ ಸೆಂಟರ್ ಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು.

ಬಿಟಿಎಂ ಕ್ಷೇತ್ರದಲ್ಲಿ ನಿರಂತರ ಕಾರ್ಯನಿರ್ವಹಿಸುವ ತುರ್ತು ಟ್ರೈಯೇಜ್ ಸೆಂಟರ್, ಆಕ್ಸಿಜನ್ ಹಾಗೂ ಕೋವಿಡ್ ಬೆಡ್ ಸೆಂಟರ್ ಸಿದ್ಧವಿದೆ.ಜನರು ಭಯ ಬಿಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ನಡಿಗೆ ಜಾಗೃತಿ ಮೂಡಿಸಿದರು.                 

SCROLL FOR NEXT