ರಾಜಕೀಯ

ಮಿನಿ ಸಮರ: ಸಿಂದಗಿಯಲ್ಲಿ 4ನೇ ಸುತ್ತಿನಲ್ಲಿ ಬಿಜೆಪಿಯ ರಮೇಶ್ ಭೂಸನೂರ ಮುನ್ನಡೆ, ಹಾನಗಲ್ ನಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಹಣಾಹಣಿ 

Sumana Upadhyaya

ಹಾನಗಲ್/ ಸಿಂದಗಿ: ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಕ್ಷಣಕ್ಷಣಕ್ಕೂ ರೋಚಕವಾಗಿದೆ. 
ಸಿಂದಗಿ ಕ್ಷೇತ್ರದಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದ್ದು ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಮುನ್ನಡೆ ಕಾಯ್ದುಕೊಳ್ಳುತ್ತಾ ಬಂದಿದ್ದಾರೆ.

ಇತ್ತೀಚಿನ ವರದಿಯಂತೆ ಸಿಂದಗಿಯಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಪ್ರಕ್ರಿಯೆಯಲ್ಲಿ ಭೂಸನೂರು 4 ಸಾವಿರದ 850 ಮತಗಳ ಮುನ್ನಡೆ ಕಾಯ್ದುಕೊಂಡು ಇದುವರೆಗೆ 13 ಸಾವಿರದ 081 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಇದುವರೆಗೆ 8 ಸಾವಿರದ 231 ಮತಗಳನ್ನು, ಜೆಡಿಎಸ್ ಗೆ 423 ಮತಗಳು ಮತ್ತು ನೋಟಾ ಮತಗಳು 133 ಬಿದ್ದಿವೆ.

ಇನ್ನು ಹಾನಗಲ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿಯಿದೆ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆಯಾಗಿದ್ದು ಕಾಂಗ್ರೆಸ್ ಅಭ್ಯರ್ಥಿ 9 ಸಾವಿರದ 25 ಮತಗಳನ್ನು ಬಿಜೆಪಿ ಅಭ್ಯರ್ಥಿ 8 ಸಾವಿರದ 897 ಮತಗಳನ್ನು ಮತ್ತು ಜೆಡಿಎಸ್ ಅಭ್ಯರ್ಥಿ 75 ಮತಗಳನ್ನು ಗಳಿಸಿದ್ದಾರೆ.

SCROLL FOR NEXT