ರಾಜಕೀಯ

ಮೋದಿ ಹೆಸರನ್ನು ಮೌನೇಂದ್ರ ಮೋದಿ ಎಂದು ಬದಲಿಸಿದರೆ ಸೂಕ್ತ: ರಾಮಲಿಂಗಾರೆಡ್ಡಿ

Nagaraja AB

ಬೆಂಗಳೂರು: ಉತ್ತರ ಪ್ರದೇಶ ಲಖೀಂಪುರ್ ಖೇರಿಯಲ್ಲಿ ನಡೆದ ಪ್ರತಿಭಟನಾನಿರತ ರೈತರ ಹತ್ಯಾಕಾಂಡ ಖಂಡಿಸಿ, ರೇಸ್ ಕೋರ್ಸ್ ರಸ್ತೆಯ ಗಾಂಧಿ ಪ್ರತಿಮೆ ಮುಂಭಾಗ ಕಾಂಗ್ರೆಸ್ ನಿಂದ 'ಮೌನ ವ್ರತ ಸತ್ಯಾಗ್ರಹ' ನಡೆಸಲಾಯಿತು. ಈ ಹತ್ಯಾಕಾಂಡದಲ್ಲಿ ಆಶಿಶ್ ಮಿಶ್ರಾ ಆರೋಪಿಯಾಗಿರುವುದರಿಂದ ಕೇಂದ್ರ ಸಚಿವ  ಅಜಯ್ ಮಿಶ್ರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಪ್ರಧಾನಿ ನರೇಂದ್ರ ಮೋದಿ ತಮ್ಮ ಹೆಸರನ್ನು ಮೌನೇಂದ್ರ ಮೋದಿ ಎಂದು ಬದಲಿಸಿದರೆ ಸೂಕ್ತ ಎಂದು  ವ್ಯಂಗ್ಯವಾಡಿದರು. 

ಲಖೀಂಪುರ ಖೇರಿ ರೈತರ ಹತ್ಯಾಕಾಂಡ ಖಂಡಿಸಿ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ಇಂದು  ಹಮ್ಮಿಕೊಳ್ಳಲಾಗಿದ್ದ 'ಮೌನ ವ್ರತ' ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋವಿಡ್ ವೇಳೆ 3 ತಿಂಗಳು ಮೌನವಾಗಿದ್ದ ಪ್ರಧಾನಿ, ಬಿಹಾರ್ ಚುನಾವಣೆ ಘೋಷಣೆ ಆಗುವವರೆಗೂ ಮನೆಯಿಂದ ಹೊರಬಂದಿರಲಿಲ್ಲ , ದೇಶದಲ್ಲಿ ನಡೆದ ಯಾವುದೇ ಅಹಿತರ ಘಟನೆ ಬಗ್ಗೆಯೂ ಮಾತನಾಡಲು ಸಮಯವಿಲ್ಲದ ಮೋದಿಯಿಂದ ಯಾರಿಗೂ ನ್ಯಾಯ ಸಿಗುವುದಿಲ್ಲ ಎಂದು ಆರೋಪಿಸಿದರು.

ಜಲಿಯನ್ ವಾಲಾಬಾಗ್ ಘಟನೆ ಮೀರಿಸುವ ಹತ್ಯಾಕಾಂಡ ಲಖೀಂಪುರದಲ್ಲಿ ನಡೆದಿದೆ. ಇದರಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರನೇ ಭಾಗಿಯಾದ್ದರೂ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾ ಮಾಡಿಲ್ಲ. ಈ ಬಗ್ಗೆ ಒಂದು ಟ್ವೀಟ್ ಮಾಡಲಿಲ್ಲ. ಮನ್ ಕಿ ಬಾತ್ ಆಡಲಿಲ್ಲ. ಅವರಿಗೆ ರೈತರ ಬಗ್ಗೆ ಯಾವ ಕಾಳಜಿಯೂ ಇಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

SCROLL FOR NEXT