ರಾಜಕೀಯ

ಪ್ರತಿ ಮಂಗಳವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ; ಗುರುವಾರ ಸಿಎಂ ಮತ್ತು ಸಚಿವರಿಂದ ಶಾಸಕರ ಭೇಟಿ, ಸಮಸ್ಯೆ ಆಲಿಕೆ

Shilpa D

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತವರ ಸಂಪುಟ ಸದಸ್ಯರು ಇನ್ನು ಮುಂದೆ ಪ್ರತಿ ಗುರುವಾರ ಪಕ್ಷದ ಶಾಸಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ.

ಪ್ರತಿ ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಹೀಗಾಗಿ ಅದೇ ದಿನ ಸಿಎಂ ಮತ್ತು ಸಚಿವರು ವಿಧಾನ ಪರಿಷತ್ ಸದಸ್ಯರು ಮತ್ತು ಶಾಸಕರ ಸಮಸ್ಯೆಗಳನ್ನು ಆಲಿಸಬಹುದಾಗಿದೆ.

ವಿರೋಧ ಪಕ್ಷಗಳನ್ನು ಲಘುವಾಗಿ ಪರಿಗಣಿಸದಂತೆ ಸಿಎಂ ಯಡಿಯೂರಪ್ಪ  ಎಚ್ಚರಿಕೆ ನೀಡಿದ್ದರು, ಜೊತೆಗೆ ಕಾಂಗ್ರೆಸ್ ಬಿಜೆಪಿ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು. ದಾವಣಗೆರೆಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಎಲ್ಲಾ ಶಾಸಕರು ಮತ್ತು ಪರಿಷತ್ ಸದಸ್ಯರು ಸದನದಲ್ಲಿ ಹಾಜರಿರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಿಎಂ ಬೊಮ್ಮಾಯಿ ಸೂಚಿಸಿದ್ದರು.

ಸದನದ ಒಳಗೆ ಶಾಸಕರ ಹಾಜರಾತಿ ಮತ್ತು ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲಾಗುವುದು. ಆಡಳಿತ ಪಕ್ಷದ ಸದಸ್ಯರನ್ನು, ಪ್ರತಿಪಕ್ಷಗಳು ಮೂಲೆಗುಂಪು ಮಾಡಲು ಪ್ರಯತ್ನಿಸಿದಾಗ ಶಾಸಕರು ಒಗ್ಗಟ್ಟಾಗಿ ನಿಲ್ಲಬೇಕು ಮತ್ತು ಸದನದಲ್ಲಿ ಮಂತ್ರಿಗಳನ್ನು ರಕ್ಷಿಸಬೇಕು ಎಂದು ಅವರು ಹೇಳಿದ್ದಾರೆ.

ಸಂಸತ್ತಿನಲ್ಲಿರುವ ಪದ್ಧತಿಯಂತೆಯೇ ಪ್ರತಿ ಮಂಗಳವಾರವೂ ಸದನ ನಡೆಯುತ್ತಿರುವಾಗ ಶಾಸಕಾಂಗ ಪಕ್ಷದ ಸಭೆ ನಡೆಸಲು ಬಿಜೆಪಿ ನಿರ್ಧರಿಸಿದೆ.  ಶಾಸಕರಿಗೆ ಮಸೂದೆಗಳ ಬಗ್ಗೆ ಮತ್ತು ಪ್ರಸ್ತಾವಿತ ಮಸೂದೆಗಳ ಬಗ್ದೆ ವಿವರಗಳನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ನೀಡಲಾಗುವುದು, ಏಕೆಂದರೆ ಶಾಸಕರಲ್ಲಿ ಅನೇಕರಿಗೆ ಪ್ರಸ್ತಾವಿತ ಶಾಸನದ ವಿವರಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂಬ ದೂರುಗಳು ಬಂದಿವೆ. ಕೃಷ್ಣಾ ನದಿ ಯೋಜನೆಗಳಿಗೆ ಸಾಕಷ್ಟು ಹಣವಿಲ್ಲ, ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಸಕರಿಗೆ ಅನುದಾನ ಮತ್ತು ಕರಾವಳಿ ಪ್ರದೇಶಗ ಬಗ್ಗೆ ಚರ್ಚಿಸಲಾಗುವುದು.

SCROLL FOR NEXT