ರಾಜಕೀಯ

ಮುಂದಿನ ಬಾರಿಯೂ ಬಸವರಾಜ ಬೊಮ್ಮಾಯಿ ಸಿಎಂ: ಆರ್.ಅಶೋಕ್

Lingaraj Badiger

ಬೆಂಗಳೂರು: ರಾಜ್ಯ ಭಾರತಿಯ ಜನತಾ ಪಾರ್ಟಿಯಲ್ಲಿ ಬಸವರಾಜ ಬೊಮ್ಮಾಯಿ ನಾಯಕತ್ವದ ಕುರಿತು ಯಾವುದೇ ಸಮಸ್ಯೆಯಿಲ್ಲ, ಗೊಂದಲಗಳಿಲ್ಲ. ಪಕ್ಷ, ಬರುವ ವಿಧಾನಸಭಾ ಚುನಾವಣೆಯನ್ನು ಅವರ ನೇತೃತ್ವದಲ್ಲಿಯೇ ಎದುರಿಸಲಿದೆ. ಮತ್ತೆ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಗುರುವಾರ ಪ್ರತಿಪಾದಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅಶೋಕ್, ಸಿಎಂ ಅವರು ವಿರೊಧಪಕ್ಷದವರನ್ನೇ ಓಲೈಸುತ್ತಿದ್ದಾರೆ ಎಂಬ ಅಸಮಾಧಾನ ಸ್ವಪಕ್ಷದ ಶಾಸಕರಲ್ಲಿದೆಯೇ ಎಂಬ ಪ್ರಶ್ನೆಗೆ, ಕಾಂಗ್ರೆಸಿನವರಿಗೆ ಜಾತಿ, ಧರ್ಮ‌ ಒಡೆಯುವುದೇ ಕೆಲಸವಾಗಿದೆ. ಮತಗಳಿಕೆಗಾಗಿ ಅವರೇನೇ ಮಾಡಿದರೂ ಪ್ರಯೋಜನವಾಗುವುದಿಲ್ಲ. ಅವರದು ಯುದ್ಧಕಾಲೇ ಶಸ್ತ್ರಭ್ಯಾಸ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಅನ್ನು ಜನತೆ ಮತ್ತೆ ತಿರಸ್ಕರಿಸುತ್ತಾರೆ ಎಂದು‌ ವಿಶ್ವಾಸ ವ್ಯಕ್ತಪಡಿಸಿದ ಅವರು, ನಮ್ಮದು ಚುನಾವಣಾ ದೃಷ್ಟಿಯ ಸಿದ್ಧತೆಯಲ್ಲ. ನಿರಂತರ ಸಿದ್ಧತೆ ನಡೆಯುತ್ತಲೇ ಇರುತ್ತದೆ ಎಂದರು.

ಕಾಂಗ್ರೆಸ್ ಒಕ್ಕಲಿಗರ ಸಮಾವೇಶ ಮಾಡಲು ಹೊರಟಿದೆ. ಅದಕ್ಕೆ ನಿಮ್ಮ ಪ್ರತಿಕ್ರಿಯೇನು ಎಂದು ಕೇಳಿದ ಪ್ರಶ್ನೆಗೆ, ಬಿಜೆಪಿ ಎಂದೂ ಜಾತಿ ರಾಜಕಾರಣ ಮಾಡುವುದಿಲ್ಲ. ನಮ್ಮದು ಧರ್ಮರಾಜಕಾರಣ. ಇದನ್ನು ಸ್ಪಷ್ಟವಾಗಿಯೇ ಹೇಳುತ್ತೇನೆ ಎಂದರು.

ಬೆಳಗಾವಿ, ಕಲ್ಪರ್ಗಿ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿಯವರೇ ಮೇಯರ್ ಆಗುತ್ತಾರೆ. ಈಗಾಗಲೇ ಕಲ್ಪುರ್ಗಿಯಲ್ಲಿ ಪಕ್ಷೇತರ ಸದಸ್ಯರೊಬ್ಬರು ನಮಗೆ ಬೆಂಬಲ ಕೊಟ್ಟಿದ್ದಾರೆ. ಜೆಡಿಎಸ್ ಬೆಂಬಲ ಪಡೆಯುವ ನಿಟ್ಟಿನಲ್ಲಿ ಆ ಪಕ್ಷದ ಮುಖಂಡರಾದ ಹೆಚ್.ಡಿ.ರೇವಣ್ಣ, ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.

SCROLL FOR NEXT