ರಾಜಕೀಯ

ದೇಶದಲ್ಲಿ ಸ್ವಾತಂತ್ರ್ಯ ದಂಗೆ ಆರಂಭವಾದಾಗ ಕಾಂಗ್ರೆಸ್ ಪಕ್ಷ ಹುಟ್ಟಿಯೇ ಇರಲಿಲ್ಲ, ನೆಹರೂ, ಇಂದಿರಾ ಗಾಂಧಿ ಸ್ವಾತಂತ್ರ್ಯ ಹೋರಾಟಗಾರರಲ್ಲ: ಪ್ರತಾಪ್ ಸಿಂಹ

Sumana Upadhyaya

ಬೆಂಗಳೂರು: ವಿನಾಯಕ ದಾಮೋದರ ಸಾರ್ವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಥವಾ ದೇಶಪ್ರೇಮಿ ಅಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ತೀವ್ರ ವಾಗ್ದಾಳಿ ನಡೆಸಿದ ಮೈಸೂರು ಸಂಸದ ಪ್ರತಾಪ್ ಸಿಂಹ, 1857 ರಲ್ಲಿ ಸ್ವಾತಂತ್ರ್ಯ ಚಳವಳಿ ಪ್ರಾರಂಭವಾದಾಗ ಕಾಂಗ್ರೆಸ್ ಪಕ್ಷ ಹುಟ್ಟಿರಲಿಲ್ಲ ಎಂದಿದ್ದಾರೆ.

ಭಾರತೀಯ ಜನತಾ ಯುವ ಮೋರ್ಚಾ ವತಿಯಿಂದ ನಿನ್ನೆ ಶನಿವಾರ ಮೈಸೂರು ಅರಮನೆ ಬಳಿಯ ಕೋಟೆ ಆಂಜನೇಯ ದೇವಸ್ಥಾನದಿಂದ ಮೆಟ್ರೋಪಾಲಿಟನ್ ವೃತ್ತದವರೆಗೆ ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯಲ್ಲಿ ಮಾತನಾಡಿದರು.

“ಸಾರ್ವರ್ಕರ್ ಅವರು ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದರು. ದೇಶದಲ್ಲಿ ಬಂಡಾಯ ಆರಂಭವಾದಾಗ ಕಾಂಗ್ರೆಸ್ ಪಕ್ಷ ಹುಟ್ಟಿಯೇ ಇರಲಿಲ್ಲ. ಇದು ಕೇವಲ ಒಂದು ಚಳವಳಿಯಾಗಿತ್ತು. ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಂತಹ ಕ್ರಾಂತಿಕಾರಿಗಳೇ ಹೊರತು ನೆಹರೂ ಮತ್ತು ಇಂದಿರಾ ಗಾಂಧಿ ಅಲ್ಲ ಎಂದರು.

SCROLL FOR NEXT