ಸಾಂದರ್ಭಿಕ ಚಿತ್ರ 
ರಾಜಕೀಯ

ರಾಜ್ಯದಲ್ಲಿ ಎಸ್‌ಸಿ/ಎಸ್‌ಟಿ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಆದರೂ ಸಾಮಾನ್ಯ ಕ್ಷೇತ್ರಗಳಿಂದ ಸ್ಪರ್ಧಿಸಲ್ಲ!

ರಾಜ್ಯದಲ್ಲಿ ಹಲವು ಸಣ್ಣ ಮತ್ತು ಸೂಕ್ಷ್ಮ ಸಮುದಾಯಗಳು ವಿಧಾನಸಭೆ ಅಥವಾ ಲೋಕಸಭೆಯಲ್ಲಿ ಕನಿಷ್ಠ ಒಬ್ಬ ಚುನಾಯಿತ ಸದಸ್ಯರನ್ನು ಹೊಂದಿಲ್ಲ. ಏಕೆಂದರೆ ಅವರ ಸಂಖ್ಯೆಯು ಅತ್ಯಲ್ಪವಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಹಲವು ಸಣ್ಣ ಮತ್ತು ಸೂಕ್ಷ್ಮ ಸಮುದಾಯಗಳು ವಿಧಾನಸಭೆ ಅಥವಾ ಲೋಕಸಭೆಯಲ್ಲಿ ಕನಿಷ್ಠ ಒಬ್ಬ ಚುನಾಯಿತ ಸದಸ್ಯರನ್ನು ಹೊಂದಿಲ್ಲ. ಏಕೆಂದರೆ ಅವರ ಸಂಖ್ಯೆಯು ಅತ್ಯಲ್ಪವಾಗಿದೆ. ಆದರೆ ರಾಜ್ಯದಾದ್ಯಂತ ಸುಮಾರು 1.5 ಕೋಟಿ ಮತದಾರರನ್ನು ಹೊಂದಿರುವ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ನಾಯಕರು ಸಾಮಾನ್ಯ ಕ್ಷೇತ್ರಗಳಿಂದ ಸ್ಪರ್ಧಿಸಲು ಹಿಂಜರಿಯುತ್ತಾರೆ. ತಮ್ಮ ಸುರಕ್ಷಿತ ಕ್ಷೇತ್ರಗಳಿಂದ ಹೊರಬರಲು ಭಯಪಡುತ್ತಾರೆ. ರಾಜ್ಯದಲ್ಲಿ 35 ಎಸ್‌ಸಿ ಮೀಸಲು ಕ್ಷೇತ್ರಗಳಿದ್ದರೆ, 15 ಎಸ್‌ಟಿ ಮೀಸಲು ಕ್ಷೇತ್ರಗಳಿವೆ.

ಆದಾಗ್ಯೂ ಕೆಲವೇ ಕೆಲವು ನಾಯಕರು ಸಾಮಾನ್ಯ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಆ ಪೈಕಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿ. ಬಿ.ಪಿ.ಮೌರ್ಯ ಅವರು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಎಸ್‌ಸಿಯ ಕೆ ಚಂದ್ರಶೇಖರ್ ಬಸವನಗುಡಿಯಿಂದ ಯಶಸ್ವಿಯಾಗಿ ಸ್ಪರ್ಧಿಸಿದ್ದರು. ಚಿತ್ರದುರ್ಗದಿಂದ ಎಸ್‌ಸಿಯ ಕೆ.ಎಚ್.ರಂಗನಾಥ್, ಗೋಕಾಕ್‌ನಿಂದ ಎಸ್‌ಟಿ ಸಮುದಾಯದ ರಮೇಶ್ ಜಾರಕಿಹೊಳಿ, ಈಗ ಮೀಸಲು ಕ್ಷೇತ್ರವಾಗಿರುವ ಸುರಪುರದಿಂದ, ರಾಜಾ ವೆಂಕಟಪ್ಪ ನಾಯಕ, ನರಸಿಂಹ ನಾಯಕ(ರಾಜು ಗೌಡ), ಕೆ.ಎನ್.ರಾಜಣ್ಣ ಅವರು ಸಾಮಾನ್ಯ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದರು.

ಮೀಸಲು ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದು ಸಚಿವರಾಗಿದ್ದ ಬಿಜೆಪಿ ಹಿರಿಯ ನಾಯಕ ಬಿ ಸೋಮಶೇಖರ್ ಈ ವಿದ್ಯಮಾನವನ್ನು ವಿವರಿಸಲು ಯತ್ನಿಸಿದ್ದು, “ಹಲವರಿಗೆ ಮೀಸಲು ರಹಿತ ಕ್ಷೇತ್ರಗಳಿಂದ ಸ್ಪರ್ಧಿಸಲು ಧೈರ್ಯ ಇಲ್ಲ ಎಂಬುದು ನಿಜ. ಚುನಾವಣೆಯಲ್ಲಿ ಗೆಲ್ಲಲು ಹಣ ಅಥವಾ ಬಲದ ಕೊರತೆಯಿಂದಾಗಿ ಪಕ್ಷಗಳು ಟಿಕೆಟ್ ನೀಡುವುದಿಲ್ಲ. ದಲಿತರು 101 ಉಪಪಂಗಡಗಳನ್ನು ಹೊಂದಿದ್ದು, ಅವರು ಒಗ್ಗಟ್ಟಾಗಿಲ್ಲ ಎಂಬುದು ಕೂಡ ಕಾರಣ. ಕೆಲವು ಪಕ್ಷಗಳು ಅಸ್ಪೃಶ್ಯರಿಗಿಂತ ಭೋವಿಗಳು ಮತ್ತು ಲಂಬಾಣಿಗಳಂತಹ 'ಸ್ಪೃಶ್ಯ' ಎಸ್‌ಸಿಗಳಿಗೆ ಆದ್ಯತೆ ನೀಡುತ್ತವೆ ಎಂದಿದ್ದಾರೆ.

ಕೊರಟಗೆರೆ ಮೀಸಲು ಕ್ಷೇತ್ರದಿಂದ ಬಹುಕಾಲದಿಂದ ಗೆದ್ದು ಬಂದಿರುವ ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಜಿ.ಪರಮೇಶ್ವರ್ ಮಾತನಾಡಿ, ಜನರ ಮನಸ್ಥಿತಿ ಬದಲಾಗಬೇಕು. ಅವರು ಇನ್ನಷ್ಟು ಪ್ರಗತಿಪರರಾಗಬೇಕು. 2008 ಮತ್ತು 2018ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಹುತೇಕ ನಿರ್ಧರಿಸಿದ್ದೆ, ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ ಎಂದಿದ್ದಾರೆ.

ರಾಜ್ಯದ ಪ್ರತಿ ಕ್ಷೇತ್ರದಲ್ಲೂ ಕನಿಷ್ಠ 10,000 ಎಸ್‌ಸಿ/ಎಸ್‌ಟಿಗಳಿದ್ದಾರೆ ಮತ್ತು 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ 40,000 ರಿಂದ 50,000 ಎಂದು ಎಸ್‌ಸಿ/ಎಸ್‌ಟಿಗಳಿದ್ದಾರೆ. ಆದರೂ ಅವರು ಸಾಮಾನ್ಯ ಕ್ಷೇತ್ರಗಳಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಾರೆ ಎಂದು ತಜ್ಞರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT