ಡಿಕೆ ಶಿವಕುಮಾರ್, ಬಸವರಾಜ ಬೊಮ್ಮಾಯಿ ಮತ್ತು ಕುಮಾರಸ್ವಾಮಿ 
ರಾಜಕೀಯ

ರಾಜ್ಯ ವಿಧಾನಸಭೆ ಚುನಾವಣಾ ವಿಶ್ಲೇಷಣೆ: ಕಾಂಗ್ರೆಸ್ ಪಕ್ಷಕ್ಕೆ 55-60 ಸ್ಥಾನ ಖಚಿತ; ಬಿಜೆಪಿ 70-75 ಕ್ಷೇತ್ರ ಗೆಲ್ಲಲು ಶಕ್ತ; 15-20ಕ್ಕೆ ಜೆಡಿಎಸ್ ತೃಪ್ತ!

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷದ ಕನಸು ನನಸಾಗುವುದಿಲ್ಲ. ಏಕೆಂದರೆ ಕಾಂಗ್ರೆಸ್ ಕೇವಲ 55 ರಿಂದ 60 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯ ಎಂದು ವಿಶ್ಲೇಷಣೆ ತಿಳಿಸಿದೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷದ ಕನಸು ನನಸಾಗುವುದಿಲ್ಲ. ಏಕೆಂದರೆ ಕಾಂಗ್ರೆಸ್ ಕೇವಲ 55 ರಿಂದ 60 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯ ಎಂದು ವಿಶ್ಲೇಷಣೆ ತಿಳಿಸಿದೆ.

ಇನ್ನೂ ಬಿಜೆಪಿ ಕೂಡ ಕೇವಲ 70 ರಿಂದ 75 ಸ್ಥಾನ ಗೆಲ್ಲಲು ಶಕ್ತವಾಗಿದೆ, ಇದರ ಜೊತೆಗೆ ಜೆಡಿಎಸ್ 15 ರಿಂದ 20 ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದು ತೃಪ್ತಿ ಪಟ್ಟುಕೊಳ್ಳಲಿದೆ ಎಂದು ವಿಶ್ಲೇಷಿಸಲಾಗಿದೆ. ಇನ್ನೂ ಉಳಿದ 75 ರಿಂದ 80 ಸೀಟುಗಳಿಗೆ ನಿಜವಾದ ಫೈಟ್ ನಡೆಯಲಿದೆ.

ಮೂರು ಪಕ್ಷಗಳು ಇಷ್ಟು ಕ್ಷೇತ್ರಗಳಲ್ಲಿ ಸೋಲಲು ಸಾಧ್ಯವಿಲ್ಲ ಎಂದು ಮೌಲ್ಯಮಾಪಕರು ಹೇಳಿದ್ದಾರೆ. 175 ಸ್ಥಾನಗಳಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧಿಸುವುದರಿಂದ ಬಿಜೆಪಿ ಸ್ಟ್ರೈಕ್ ರೇಟ್ ಹೆಚ್ಚಾಗಿದೆ, ಆದರೆ ಹಳೇ ಮೈಸೂರು ಪ್ರಾಂತ್ಯದ ಹಲವು ಸ್ಥಾನಗಳಲ್ಲಿ ಅದರ ಹೋರಾಟ ನಾಮಮಾತ್ರವಾಗಿದೆ. ಅದೇ ಸಮಯದಲ್ಲಿ, ಕಾಂಗ್ರೆಸ್ ತನ್ನೊಳಗಿನ ಅನೇಕ ಸಮಸ್ಯೆಗಳನ್ನು ಸರಿಪಡಿಸಬೇಕಾಗಿದೆ ಎಂದು ಅವರು ಹೇಳಿದರು.

ಈ ಹಂತದಲ್ಲಿ 113 ಸ್ಥಾನಗಳಲ್ಲಿ ಬಹುಮತ ಗಳಿಸುವುದು ಕಾಂಗ್ರೆಸ್‌ಗೆ ಕಷ್ಟಕರವಾಗಿದೆ. ಈ ಹಿಂದೆ ಬೇರೆ ಪಕ್ಷಗಳ ಅಸಮರ್ಥತೆಯಿಂದ ಪಕ್ಷ ಉತ್ತಮ ಸಾಧನೆ ಮಾಡಿ ಮ್ಯಾಜಿಕ್ ಮಾರ್ಕ್ಸ್ ದಾಟಿತ್ತು. 1989ರಲ್ಲಿ ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ನಡುವೆ ಜನತಾ ಪಕ್ಷ ಇಬ್ಭಾಗವಾದಾಗ ವೀರೇಂದ್ರ ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ 180 ಸೀಟು ಗಳಿಸಿತ್ತು.

ಎರಡನೇ ಬಾರಿ ಅಂದರೆ 1999ರಲ್ಲಿ ಕಾಂಗ್ರೆಸ್ 132 ಸ್ಥಾನ ಗಳಿಸಿತ್ತು, ಇದೇ ವೇಳೆ ದೇವೇಗೌಡ ಮತ್ತು ಜೆಎಚ್ ಪಟೇಲರ ಜನತಾ ಪರಿವಾರ ಇಬ್ಭಾಗವಾಗಿತ್ತು. ಅದಾದ ನಂತರ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಪಕ್ಷ ಸ್ಥಾಪಿಸಿದ ವೇಳೆಯಲ್ಲಿ ಕಾಂಗ್ರೆಸ್ 120 ಸ್ಥಾನದಲ್ಲಿ ಜಯ ಗಳಿಸಿತ್ತು. ಇದಾದ ನಂತರ ಜನಾರ್ದನ ರೆಡ್ಡಿ ಮತ್ತು ಬಿ ಶ್ರೀರಾಮುಲು ಬಿಎಸ್ ಆರ್ ಪಕ್ಷ ಪ್ರಾರಂಭಿಸಿದ್ದರು.

ಈ ವಾದವನ್ನು ಮುಂದಿಟ್ಟುಕೊಂಡು ಮೌಲ್ಯಮಾಪನ ನಡೆಸಿದವರು, ಬಿಜೆಪಿಯೊಂದಿಗೆ ಯಾವುದೇ ಗಂಭೀರವಾದ ಒಗ್ಗಟ್ಟಿನ ಸಮಸ್ಯೆಗಳಿಲ್ಲದಿರುವಾಗ ಕಾಂಗ್ರೆಸ್ ಬಹುಮತ ಗಳಿಸುವುದು ಹೇಗೆ ಎಂದು ಕೇಳಿದ್ದಾರೆ.

ಗುಜರಾತ್‌ನಲ್ಲಿ ಭಾರಿ ಗೆಲುವಿನ ನಂತರ, ಬಿಜೆಪಿ ತನ್ನದೇ ಆದ ಚಾಣಕ್ಯತೆಯಿಂದ ಗೆಲ್ಲುವ ಅಥವಾ ಇತರ ಸಣ್ಣ ಪಕ್ಷಗಳ ಸಹಾಯದಿಂದ ಸರ್ಕಾರ ರಚಿಸುವ ಹೆಚ್ಚಿನ ಅವಕಾಶವಿದೆ ಎಂದು ಮೌಲ್ಯಮಾಪನ ಹೇಳಿದೆ.

113 ಸ್ಥಾನಗಳನ್ನು ಗೆಲ್ಲುವ ಕಾಂಗ್ರೆಸ್‌ನ ಕನಸು ಈ ಹಂತದಲ್ಲಿ ಅವಾಸ್ತವಿಕವಾಗಿದೆ, ಏಕೆಂದರೆ ವಿರೋಧ ಪಕ್ಷವು ನಾಯಕತ್ವ ಮತ್ತು ಏಕತೆಯ ಸಮಸ್ಯೆಗಳಿಂದ ಬಳಲುತ್ತಿದೆ. ಎಸ್‌ಸಿ ಎಡ, ಎಸ್‌ಟಿ ವಾಲ್ಮೀಕಿ ನಾಯಕರು ಮತ್ತು ಕುರುಬೇತರ ಒಬಿಸಿಗಳ ಬೆಂಬಲವನ್ನು ಪಡೆಯಲು ಆಡಳಿತ ಪಕ್ಷದ ಸೋಷಿಯಲ್ ಎಂಜಿನಿಯರಿಂಗ್ ಪ್ರಯತ್ನಗಳನ್ನು ಮೌಲ್ಯಮಾಪನವು ನೋಡಿದೆ.

ಕಾಂಗ್ರೆಸ್ ಸುಮಾರು 15 ಸ್ಥಾನಗಳಲ್ಲಿ ಕಳಪೆ ಗುಣಮಟ್ಟದ ಅಭ್ಯರ್ಥಿಗಳನ್ನು ಹೊಂದಿದೆ ಎಂದು ಒಪ್ಪಿಕೊಂಡಿದೆ. ಆದರೆ ಪಕ್ಷದ ನಾಯಕರಿಗೆ ಬಹುಮತ ಗಳಿಸುವುದು ಕಷ್ಟದ ಕೆಲಸ ಎಂದು ಅದು ಹೇಳಿದೆ.

ಬಿಜೆಪಿ ತನ್ನ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನ ತಗ್ಗಿಸಬಹುದು ಮತ್ತು ಗುಜರಾತ್‌ನಲ್ಲಿ ಮೋರ್ಬಿ ಸೇತುವೆ ದುರಂತವು ತನ್ನ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರದಂತೆ ನೋಡಿಕೊಳ್ಳಬಹುದು ಎಂದಾದರೆ ಕರ್ನಾಟಕ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ತನ್ನ ಬೃಹತ್ ಚುನಾವಣಾ ತಂತ್ರದಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

SCROLL FOR NEXT