ಬೆಂಗಳೂರು: ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಕೆಲವೇ ತಿಂಗಳುಗಳು ಮಾತ್ರ ಬಾಕಿ. ಈ ಹೊತ್ತಿನಲ್ಲಿ ವರ್ಷಾಂತ್ಯಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಸಮಾವೇಶ ನಡೆಯುತ್ತಿದೆ. ರಾಜ್ಯದ ಪ್ರಮುಖ ಪಕ್ಷಗಳಾದ ಆಡಳಿತ ಪಕ್ಷ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಗೆ ಈ ಸಮಾವೇಶ ಅತಿ ಮುಖ್ಯವಾಗಿದೆ.
ಮಹಾಸಭಾದ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ನ ಹಿರಿಯ ನಾಯಕ, ವಿರೋಧ ಪಕ್ಷದ 14 ಮಂದಿ ಸದಸ್ಯರು ಮಹಾಸಭಾದ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ನಿಂದ ಇಬ್ಬರು ಶಾಸಕರಾಗಿದ್ದ ಬಿ ಸಿ ಪಾಟೀಲ್ ಮತ್ತು ಮಹೇಶ್ ಕುಮಟಳ್ಳಿ ಬಿಜೆಪಿ ಸೇರಿದ್ದಾರೆ. 2018ರಲ್ಲಿ ಜೆಡಿಎಸ್ ನ ನಾಲ್ವರು ಶಾಸಕರು ಮಹಾಸಭಾದ ಸದಸ್ಯರಾಗಿದ್ದರು. ಎಂ ಸಿ ಮನಗುಳಿಯವರು ಜೆಡಿಎಸ್ ತೊರೆದ ನಂತರ ಈಗ ಮೂವರು ಶಾಸಕರಿದ್ದಾರೆ. ಬಿಜೆಪಿ ಈ ಎರಡೂ ಪಕ್ಷಗಳಿಗಿಂತ ಬಹಳ ಮುಂದಿದ್ದು 40 ಶಾಸಕರಿದ್ದಾರೆ.
ಡಿಸೆಂಬರ್ 24ರಂದು ಸಮಾವೇಶವನ್ನು ಲಿಂಗಾಯತ ನಾಯಕರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಮತ್ತೊಬ್ಬ ಪ್ರಬಲ ಲಿಂಗಾಯತ ನಾಯಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಡಿಸೆಂಬರ್ 26ರಂದು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಲಿಂಗಾಯತರಲ್ಲಿ ಪ್ರಬಲ ಪಂಚಮಸಾಲಿ ಸಮುದಾಯದವರು ಶೇಕಡಾ 50ರಷ್ಟಿರುವುದರಿಂದ ಅವರು 2ಎ ಮೀಸಲಾತಿಗಾಗಿ ಒತ್ತಾಯಿಸುತ್ತಲೇ ಬಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ ಅಂಟಿರುವ ಕಳಂಕ ನಿವಾರಣೆಗೆ ಯತ್ನ: ಡಿಸೆಂಬರ್ ಕೊನೆಯ ವಾರದಲ್ಲಿ ವೀರಶೈವ-ಲಿಂಗಾಯತ ಸಭೆ!
ರಾಜಕೀಯ ವಿಶ್ಲೇಷಕ ಬಿ ಎಸ್ ಮೂರ್ತಿ, ಪಂಚಮಸಾಲಿ ಸಮುದಾಯದ ಬಾಕಿ ಇರುವ ಬೇಡಿಕೆಯ ಬಗ್ಗೆ ಸಮಾವೇಶದಲ್ಲಿ ಧಾರ್ಮಿಕ ಮುಖಂಡರು ಮತ್ತು ನಾಯಕರು ಏನು ಹೇಳುತ್ತಾರೆ ಎಂದು ನೋಡಬೇಕಿದೆ. ಬೊಮ್ಮಾಯಿಯವರು ಈ ಸಂದರ್ಭದಲ್ಲಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರುವಂತೆ ಕಂಡುಬರುತ್ತಿದೆ ಎನ್ನುತ್ತಾರೆ.
ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಬೆಂಬಲ ಹೊಂದಿರುವ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲುತ್ತಾ ಬಂದಿವೆ. 1989ರಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸೋತರೆ, 1983-88ರಲ್ಲಿ ಸಮುದಾಯ ಜನತಾ ಪಕ್ಷಕ್ಕೆ ಒಲವು ತೋರಿ ಗೆಲ್ಲಲು ನೆರವಾಯಿತು. ವೀರಶೈವ ಮಹಾಸಭಾದ ಪದಾಧಿಕಾರಿಯೊಬ್ಬರು ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(New Indian Express) ಜೊತೆ ಮಾತನಾಡಿ, “ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿದ ನಂತರ ಅವಮಾನವಾದ ನಂತರ ಲಿಂಗಾಯತರು ನಿಧಾನವಾಗಿ ಬಿಜೆಪಿಯಿಂದ ದೂರ ಸರಿಯುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ಲಾಭವಾಗಬಹುದೇ ಎಂದು ಕೇಳುತ್ತಾರೆ.