ಡಿಕೆ ಶಿವಕುಮಾರ್ 
ರಾಜಕೀಯ

10-ಜನಪಥ್: ನಿಮ್ಮ ಪಕ್ಷದ ಉಪ್ಪಿನ ಅಂಗಡಿ ಹೆಡ್ ಕ್ವಾಟ್ರರ್ಸ್ ಇದೇ ತಾನೇ? ಅಲಿಬಾಬಾ ಮತ್ತು ಕಾಂಗ್ರೆಸ್ ಕಳ್ಳರ ಕಪ್ಪು ಹಣ ಸೇರುವುದು ಇಲ್ಲಿಗೆ ತಾನೇ?

10-ಜನಪಥ್ ಇದು ಕಾಂಗ್ರೆಸ್ ಭ್ರಷ್ಟರ, ಲೂಟಿಕೋರರ, ತೆರಿಗೆ ವಂಚಕರ, ಹಗರಣ ಸೃಷ್ಟಿಕರ್ತರ ರಕ್ಷಣಾ ತಾಣ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಬೆಂಗಳೂರು: 10-ಜನಪಥ್ ಇದು ಕಾಂಗ್ರೆಸ್ ಭ್ರಷ್ಟರ, ಲೂಟಿಕೋರರ, ತೆರಿಗೆ ವಂಚಕರ, ಹಗರಣ ಸೃಷ್ಟಿಕರ್ತರ ರಕ್ಷಣಾ ತಾಣ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಭ್ರಷ್ಟಾಚಾರದ ಕಪ್ಪು ಹಣ ಕೊನೆಗೆ ಸೇರುವುದು ಇದೇ ಸ್ಥಳಕ್ಕೆ ಅಲ್ಲವೇ? ಡಿಕೆಶಿ ಅವರೇ ನಿಮ್ಮ ಪಕ್ಷದ ಉಪ್ಪಿನ ಅಂಗಡಿ ಹೆಡ್ ಕ್ವಾಟ್ರರ್ಸ್ ಇದೇ ತಾನೇ? ಅಲಿಬಾಬಾಮತ್ತು ಕಾಂಗ್ರೆಸ್‌ ಕಳ್ಳರು ‌ಎಂದು ಲೇವಡಿ ಮಾಡಿದೆ.

ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ದೇಶದಲ್ಲಿ ಅತಿ ಭಯಂಕರ ಭ್ರಷ್ಟಾಚಾರದ ಕೂಪ ಸೃಷ್ಟಿಸಿದ್ದೇ ಕಾಂಗ್ರೆಸ್. ನಕಲಿ ಗಾಂಧಿ ಕುಟುಂಬವೇ ಈ ಗಂಗೋತ್ರಿಯ ಪ್ರಧಾನ ಪಾಲುದಾರರು‌. ಹಾಗಾದರೆ,  ಅಲಿಬಾಬಾಮತ್ತು ಕಾಂಗ್ರೆಸ್‌ ಕಳ್ಳರು ಗುಂಪಿನಲ್ಲಿರುವವರು ಯಾರು? ಎಂದು ಪ್ರಶ್ನಿಸಿದೆ.

ಆಗಸ್ಟಾ ವೆಸ್ಟ್ ಲ್ಯಾಂಡ್,  2ಜಿ ಸ್ಪೆಕ್ಟ್ರಮ್ ಹಂಚಿಕೆ, ನ್ಯಾಷನಲ್ ಹೆರಾಲ್ಡ್,  ವಾದ್ರಾ-ಡಿಎಲ್‌ಎಫ್ ,ನೆಹರೂ ಕಾಲದ ಮುಂಡ್ರಾ ಹಗರಣ, ಇಂದಿರಾ ಕಾಲದ ಮಾರುತಿ ಹಗರಣಗಳ ಮೂಲಕ‌ "ನಾವು ಭ್ರಷ್ಟಾಚಾರ ಮಾಡಲೆಂದೇ ಅಧಿಕಾರದಲ್ಲಿದ್ದೇವೆ" ಎಂಬುದನ್ನು ಕಾಂಗ್ರೆಸ್ ಸೂಚ್ಯವಾಗಿ ತಿಳಿಸಿತ್ತು! ಎಂದು ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿ ಹಾಯ್ದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!