ಕೆ ಎಸ್ ಈಶ್ವರಪ್ಪ 
ರಾಜಕೀಯ

ನಮಗೆ ಮುಸ್ಲಿಮರ ವೋಟು ಬೇಕಾಗಿಲ್ಲ, ಮುಸ್ಲಿಮರ ಮನೆ ಬೀದಿಗೆ ಹೋಗಿ ಮತ ಹಾಕಿ ಎಂದು ಕೇಳಲ್ಲ: ಕೆ ಎಸ್ ಈಶ್ವರಪ್ಪ

ನನಗೆ ಮುಸ್ಲಿಮರ ವೋಟ್​ ಬೇಕಾಗಿಲ್ಲ, ಮುಸ್ಲಿಮರ ಮನೆ ಬಾಗಿಲಿಗೆ ಹೋಗಿ ಮತ ಕೇಳಲ್ಲ ಎಂದು ಮಾಜಿ ಸಚಿವ ಶಾಸಕ ಕೆ ಎಸ್ ಈಶ್ವರಪ್ಪ ಗುಡುಗಿದ್ದಾರೆ. 

ಶಿವಮೊಗ್ಗ: ನನಗೆ ಮುಸ್ಲಿಮರ ವೋಟ್​ ಬೇಕಾಗಿಲ್ಲ, ಮುಸ್ಲಿಮರ ಮನೆ ಬಾಗಿಲಿಗೆ ಹೋಗಿ ಮತ ಕೇಳಲ್ಲ ಎಂದು ಮಾಜಿ ಸಚಿವ ಶಾಸಕ ಕೆ ಎಸ್ ಈಶ್ವರಪ್ಪ ಗುಡುಗಿದ್ದಾರೆ. 

ನಿನ್ನೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿಯಂಥವರು ಸುಖಾ ಸುಮ್ಮನೆ ಆರ್​ಎಸ್​ಎಸ್ ಟೀಕಿಸ್ತಾರೆ. ಬಹುತೇಕ ಕಡೆ ನಮಗೆ ಮುಸ್ಲಿಂ ವೋಟ್ ಅಗತ್ಯ ಇಲ್ಲ, ನಾವು ಆ ವೋಟ್​ಗಳನ್ನೇ ರಾಜಕಾರಣದಲ್ಲಿ ನೆಚ್ಚಿಕೊಂಡಿಲ್ಲ. ಹಾಗಂತ ಅವರ ಅಭಿವೃದ್ಧಿ ಕೆಲಸಗಳನ್ನು ಮರೆತಿಲ್ಲ, ಮುಸ್ಲಿಂರ ಪರವಾಗಿಯೂ ನಾವು ಕೆಲಸ ಮಾಡುತ್ತೇವೆ. ಆರ್​ಎಸ್​ಎಸ್​ ಟೀಕಿಸಿದ್ರೆ ಸ್ವರ್ಗ ಸಿಗುತ್ತೆ ಅನ್ಕೊಂಡಿದ್ದಾರೆ ಎಂದು ಕಾಂಗ್ರೆಸ್​, ಜೆಡಿಎಸ್ ಮೇಲೆ ಈಶ್ವರಪ್ಪ ಗುಡುಗಿದ್ದಾರೆ.

ಆರ್ ಎಸ್ಎಸ್ ನ್ನು ಟೀಕಿಸಿದರೆ, ಬೈದರೆ ಮುಸ್ಲಿಮರ ವೋಟುಗಳು ನಮಗೆ ಬಂದುಬಿಡುತ್ತವೆ ಎಂದು ಕಾಂಗ್ರೆಸ್  ಮತ್ತು ಜೆಡಿಎಸ್ ನವರು ಅಂದುಕೊಂಡಿದ್ದಾರೆ. ಅವರ ಲೆಕ್ಕದಲ್ಲಿ ಇರಬಹುದು. ನಾವು ಬಹಳ ಕಡೆ ಮುಸ್ಲಿಮ್ ವೋಟ್ ಗಳನ್ನು ನಂಬಿಕೊಂಡಿಲ್ಲ, ಶಿವಮೊಗ್ಗದಲ್ಲಂತೂ ಇಲ್ಲವೇ ಇಲ್ಲ, ನಮ್ಮ ಅಭಿವೃದ್ಧಿ ಕೆಲಸಗಳಿಗೆ ಜನ ವೋಟ್ ಕೊಡುತ್ತಾರೆ, ಹಾಗೆಂದು ನಾವು ಮುಸ್ಲಿಮರಿಗೂ ಕೆಲಸ ಮಾಡಿಕೊಡುತ್ತೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!