ರಾಜಕೀಯ

ಮಕ್ಕಳಿಗೆ ಬೈಸಿಕಲ್, ಮೊಟ್ಟೆ ನೀಡಲು ಹಣವಿಲ್ಲದವರಿಗೆ ಶಿಕ್ಷಣ ಸಚಿವರ ಜಾಲತಾಣ ನಿರ್ವಹಣೆಗೆ ಎಲ್ಲಿಂದ ಬಂತು ಹಣ?

Shilpa D

ಬೆಂಗಳೂರು: ವೈಯಕ್ತಿಕ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸರ್ಕಾರಿ ಬೊಕ್ಕಸದಿಂದ ಖರ್ಚು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಬಿಜೆಪಿಯ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್,  ಬಡವರಿಗೆ ಅಕ್ಕಿ ನೀಡಲು ಹಣವಿಲ್ಲ ಎನ್ನುತ್ತಾರೆ. ಮಕ್ಕಳಿಗೆ ಬೈಸಿಕಲ್ ಒದಗಿಸಲು, ಮೊಟ್ಟೆ ನೀಡಲು ಹಣವಿಲ್ಲ ಎನ್ನುತ್ತಾರೆ ಮುಖ್ಯಮಂತ್ರಿಗಳು. ಶಿಕ್ಷಣ ಸಚಿವರು ತಮ್ಮ ಖಾಸಗಿ ಸಾಮಾಜಿಕ ಜಾಲತಾಣ ನಿರ್ವಹಿಸಲು ಲಕ್ಷಾಂತರ ಹಣ ಸರ್ಕಾರಿ ಬೊಕ್ಕಸದಿಂದ ಖರ್ಚು ಮಾಡುತ್ತಾರೆ ಎಂದು 'ಕೂ' ಮಾಡಿದ್ದಾರೆ.

ಬಿಜೆಪಿ ಮಾನ ಮರ್ಯಾದೆ ಬಿಟ್ಟಿದೆ ಎಂದು ಹೇಳಿರುವ ಕಾಂಗ್ರೆಸ್ ಒಂದು ವರ್ಷದವರೆಗೆ ಸುಮಾರು ೧೧, ೩೨, ೦೦೦ ರೂ. ಖರ್ಚು ಮಾಡಿದೆ. ಅಂದರೆ ತಿಂಗಳಿಗೆ ೯೪,೪೦೦ ರೂ. ಹಣ ಖರ್ಚು ಮಾಡಿದ್ದಾರೆ ಎಂದು ಹೇಳಿದೆ.

ಪರಿಷ್ಕೃತ ಪಠ್ಯಪುಸ್ತಕಗಳನ್ನು ಸಮರ್ಥಿಸುತ್ತಿದ್ದ ಸರ್ಕಾರ ಮತ್ತೊಮ್ಮೆ ಲೋಪ ಸರಿಪಡಿಸಿದ ಮತ್ತೊಂದು ಹೆಚ್ಚುವರಿ ಪುಸ್ತಕ ಹಂಚುತ್ತೇವೆ ಎಂದಿರುವುದು ತುಘಲಕ್ ದರ್ಬಾರಿನಂತಿದೆ! ಇಂತದ್ದೊಂದು ನಾಚಿಕೆಗೇಡಿನ ಬೆಳವಣಿಗೆಗೆ ಸಿಎಂ ತಲೆತಗ್ಗಿಸಿ ಕ್ಷಮೆ ಕೇಳಬೇಕು, ಶಿಕ್ಷಣ ಸಚಿವರು ರಾಜೀನಾಮೆ ಕೊಟ್ಟು ಹೊರಡಬೇಕಿತ್ತು.

SCROLL FOR NEXT