ಸತೀಶ್ ಜಾರಕಿಹೊಳಿ 
ರಾಜಕೀಯ

ಹಿಂದು ಎಂಬುದು ಅಶ್ಲೀಲ ಪದ: ಹೇಳಿಕೆ ಸಮರ್ಥಿಸಿಕೊಂಡ ಸತೀಶ್ ಜಾರಕಿಹೊಳಿ

ಹಿಂದು ಎಂಬುದು ಅಶ್ಲೀಲ ಪದ ಎಂಬ ವಿವಾದಾತ್ಮಕ ಹೇಳಿಕೆ ತೀವ್ರ ವಿರೋಧಕ್ಕೆ ಗುರಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬೆಳಗಾವಿ: ಹಿಂದು ಎಂಬುದು ಅಶ್ಲೀಲ ಪದ ಎಂಬ ವಿವಾದಾತ್ಮಕ ಹೇಳಿಕೆ ತೀವ್ರ ವಿರೋಧಕ್ಕೆ ಗುರಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಸತೀಶ್ ಜಾರಕಿಹೊಳಿಯವರು ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.

ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದು ಶಬ್ಧದ ಮೇಲೆ ಮಾತನಾಡಿದ್ದೇನೆ. ಈ ಬಗ್ಗೆ ರಾಜ್ಯ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ನಾನು ಭಾಷಣದಲ್ಲಿ ಹೇಳಿದ್ದು ಹಿಂದು ಶಬ್ಧ ಪರ್ಷಿಯನ್ ನಿಂದ ಬಂದಿದೆ ಎಂದು ಹೇಳಿದ್ದು ನಿಜ. ಈ ಬಗ್ಗೆ ಚರ್ಚೆ ಆಗಬೇಕು ಎಂದು ನಾನು ಹೇಳಿದ್ದೇನೆ. ಹಿಂದೂ ಶಬ್ಧದ ಬಗ್ಗೆ ನಿಂದನೆ ಕೆಲವು  ಪದಗಳು ದಾಖಲೆಯಲ್ಲಿ ಸಿಗುತ್ತೆ ಈ ಬಗ್ಗೆ ಕೋಟ್ ಮಾಡಿ‌ ಹೇಳಿದ್ದೇನೆ. ಇದು ಸತೀಶ್ ಜಾರಕಿಹೊಳಿ ವೈಯಕ್ತಿಕ ಹೇಳಿಕೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದಲ್ಲಿ ಚರ್ಚೆ ಹಿನ್ನೆಲೆ ಸ್ಪಷ್ಟನೆ ನೀಡುವುದು ನನ್ನ ಕರ್ತವ್ಯ. ಜಾತಿ, ಧರ್ಮ ಮೀರಿ ಕೆಲಸ ಮಾಡುವ ಉದ್ದೇಶ ನನ್ನದು. ಪರ್ಷಿಯನ್​​ನಿಂದ ಹಿಂದೂ ಪದ ಬಂದಿದ್ದ ಬಗ್ಗೆ ನೂರಾರು ದಾಖಲೆ ಇವೆ. ಅನೇಕ ಪುಸ್ತಕಗಳಲ್ಲಿ ಈ ಬಗ್ಗೆ ಉಲ್ಲೇಖಗಳು ಇವೆ. ಮಾಧ್ಯಮಗಳು ಉಕ್ರೇನ್, ರಷ್ಯಾ ಯುದ್ಧ ಮಾದರಿಯಲ್ಲಿ ವಿಶ್ಲೇಷಣೆ ಮಾಡುತ್ತಿವೆ. ಈ ಸಮಯ ಬೇರೆ ವಿಷಯಕ್ಕೆ ಕೊಟ್ಟಿದರೇ ಒಳ್ಳೆಯದಾಗುತ್ತಿದೆ ಎಂದು ಹೇಳಿದ್ದಾರೆ.

ಮಾಧ್ಯಮಗಳು ಅನೇಕ ಸುಳ್ಳುಗಳನ್ನ ವಿಜೃಂಭಣೆ ಮಾಡಿವೆ. ಹಿಂದೂ ಧರ್ಮದ ವಿಚಾರ ಬಂದಾಗ ವಿಶೇಷ ಸ್ಥಾನಮಾನ. ದಯವಿಟ್ಟು ನೈಜ್ಯವಾದ ಸುದ್ದಿ ತೋರಿಸುವ ಪ್ರಯತ್ನ ಮಾಡಿ. ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ವಿಶೇಷ ಸ್ಥಾನಮಾನ. ದಲಿತ ಮೃತಪಟ್ಟರೇ ಯಾವುದೇ ಸುದ್ದಿ ಇಲ್ಲ. ಹಿಂದೂ ಧರ್ಮದ ಅಟಲ್ ಬಿಹಾರಿ ವಾಜಪೇಯಿ ಭಾಷಣ ಕೇಳಬೇಕು. ಹಿಂದೂ ಎಂಬುದು ಜೀವನ ಪದ್ಧತಿ ಎಷ್ಟೇ ಎಂದು ಹೇಳಿದ್ದಾರೆ.

ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಲಾಗಿದೆ. ನಾನೇನು ಯಾರನ್ನು ಅಪಮಾನ ಮಾಡುವ ಉದ್ದೇಶ ಇಲ್ಲ. ಜಾತಿ, ಧರ್ಮದಿಂದ ನಾನು ದೂರ ಇರೋ ವ್ಯಕ್ತಿ. ಈ ರೀತಿ ನಮ್ಮ ಮೇಲೆ ಅಪರಾಧ ಮಾಡಿರೋ ಬಿಂಬಿಸಬೇಡಿ. ವಿದ್ವಾಂಸರನ್ನು ಯಾರಿಗೋ ಲಾಭ ಮಾಡಲು ನೀವು ಚರ್ಚೆ ಮಾಡಬೇಡಿ. ನನ್ನ ಭಾಷಣ ಇನ್ನೂ ಹತ್ತು ಸಲ ನೋಡಿ. ತಪ್ಪಿದ್ರೆ ಚರ್ಚೆ ಮುಂದುವರಿಸಿ ಎಂದು ತಿಳಿಸಿದ್ದಾರೆ.

ಇದೇ ರೀತಿ ಚರ್ಚೆ ಮುಂದುವರಿದರೆ ಮಾನಹಾನಿ ಕ್ರಮ ಕೈಗೊಳ್ಳಬೇಕಾಗುತ್ತದೆ. ನಾನು ಯಾವುದೇ ಧರ್ಮ, ಭಾಷೆ ಮಾಡುವ ಪ್ರಶ್ನೆಯೆ ಇಲ್ಲ. ಮೂವತ್ತು ವರ್ಷಗಳಿಂದ ಇದೇ ಕೆಲಸ ಮಾಡುತ್ತೇನೆ. ವಿಕಿಪೀಡಿಯಾದಲ್ಲಿ ಇರೋದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT