ರಾಜಕೀಯ

ಕುತೂಹಲ ಕೆರಳಿಸಿದ ಹೆಚ್.ಸಿ.ಮಹದೇವಪ್ಪ-ಡಾ.ಜಿ.ಪರಮೇಶ್ವರ್ ಭೇಟಿ!

Manjula VN

ಮೈಸೂರು: ಕಾಂಗ್ರೆಸ್ ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕ ಡಾ.ಜಿ.ಪರಮೇಶ್ವರ್ ಅವರು ಮಾಜಿ ಸಚಿವ ಹಾಗೂ ದಲಿತ ನಾಯಕ ಎಚ್ ಸಿ ಮಹಾದೇವಪ್ಪರ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಪಕ್ಷದ ದಲಿತ ಮುಖಂಡರಿಗೆ ಹೊಸ ಚೇತನ ದೊರೆತಂದಾಗಿದ್ದು, ಖರ್ಗೆಯವರು ಪಕ್ಷದ ಅಧ್ಯಕ್ಷರಾದ ಬಳಿಕ ಇಬ್ಬರು ದಲಿತ ನಾಯಕರು ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ.

ಇಬ್ಬರೂ ನಾಯಕರು ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಮಾತಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದ್ದು, ಎಸ್‌ಸಿಗಳೊಳಗಿನ ಎಲ್ಲಾ ಜಾತಿಗಳು ಮತ್ತು ಉಪಜಾತಿಗಳನ್ನು ಒಂದೇ ವೇದಿಕೆಯಡಿ ತರಲು ಎಸ್‌ಸಿ ಸಮಾವೇಶವನ್ನು ನಡೆಸುವ ಕುರಿತಂತೆಯೂ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಮಹದೇವಪ್ಪ ಅವರು ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದು, ಪರಮೇಶ್ವರ್ ಅವರನ್ನು ಭೇಟಿ ಮಾಡಿರುವುದು ಇಬ್ಬರೂ ನಾಯಕರು ದಲಿತ ಸಿಎಂ ವಿಚಾರ ಕುರಿತು ಚರ್ಚೆ ನಡೆಸಿದ್ದಾರೆಂಯೇ ಎಂಬ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

SCROLL FOR NEXT