ರಾಜಕೀಯ

ರಾಜ್ಯದಲ್ಲಿ 6 ತಿಂಗಳಲ್ಲಿ 5,000ಕ್ಕೂ ಹೆಚ್ಚು ಮಕ್ಕಳ ಸಾವು, ಸರ್ಕಾರದ ಅಯೋಗ್ಯತನಕ್ಕೆ ಹಿಡಿದ ಕನ್ನಡಿ- ಕಾಂಗ್ರೆಸ್ ಟೀಕೆ

Nagaraja AB

ಬೆಂಗಳೂರು: ರಾಜ್ಯದಲ್ಲಿ ಕೇವಲ 6 ತಿಂಗಳ ಅವಧಿಯಲ್ಲಿ 5,000ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವುದು ಈ ಸರ್ಕಾರದ ಅಯೋಗ್ಯತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್,  ಅಪೌಷ್ಟಿಕತೆ, ವೈದ್ಯಕೀಯ ಸೌಲಭ್ಯಗಳ ಕೊರತೆಗಳೇ ಈ ಸಾವುಗಳಿಗೆ ಕಾರಣ. ಕಾಂಗ್ರೆಸ್ ಸರ್ಕಾರ ಆಪೌಷ್ಟಿಕತೆ ನೀಗಿಸಲು ಜರಿಗೊಳಿಸಿದ್ದ ಯೋಜನೆಗಳನ್ನು ಹಳ್ಳ ಹಿಡಿಸಿದ ಬಿಜೆಪಿ ಸರ್ಕಾರವೇ  ಈ ಸಾವುಗಳಿಗೆ ಹೊಣೆ ಎಂದು ಹೇಳಿದೆ.

ಶಾಸಕ ತನ್ವೀರ್ ಸೇಠ್ ಗೆ  ಜೀವ ಬೆದರಿಕೆ ಕುರಿತು ಮತ್ತೊಂದು ಟ್ವೀಟ್ ನಲ್ಲಿ ಪ್ರಸ್ತಾಪಿಸಲಾಗಿದ್ದು, ಜನಪ್ರತಿನಿಧಿಗಳಿಗೆ ಕೊಲೆ ಬೆದರಿಕೆ ಹಾಕಿ ರಾಜಾರೋಷವಾಗಿ ತಿರುಗಿಕೊಂಡಿರಲು ಸರ್ಕಾರ ಬಿಟ್ಟಿದೆ ಎಂದರೆ ಗೃಹ ಇಲಾಖೆ ಸತ್ತಿದೆ ಎಂದರ್ಥ ಅಲ್ಲವೇ 
ಎಂದು ಗೃಹ ಸಚಿವರನ್ನು ಪ್ರಶ್ನಿಸಿದೆ.

ಕರ್ನಾಟಕವನ್ನು ನೀವು ಆಳುತ್ತಿದ್ದೀರೋ ಅಥವಾ ಗೂಂಡಾಗಳು ಆಳುತ್ತಿದ್ದಾರೋ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೇಳುವ ಮೂಲಕ ತೀವ್ರ ಟೀಕಾ ಪ್ರಹಾರ ನಡೆಸಿದೆ.

SCROLL FOR NEXT