ಸಿದ್ದರಾಮಯ್ಯ 
ರಾಜಕೀಯ

ಸಿದ್ದರಾಮಯ್ಯ, ಪಿಎಫ್ ಐ ಉಗ್ರರ ನಡುವೆ ಭಾಯ್ ಭಾಯ್ ಸಂಬಂಧವಿತ್ತು- ಬಿಜೆಪಿ ಆರೋಪ

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪಿಎಫ್ ಐ ಉಗ್ರರ ನಡುವೆ ಭಾಯ್ ಭಾಯ್ ಸಂಬಂಧವಿತ್ತೆಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪಿಎಫ್ ಐ ಉಗ್ರರ ನಡುವೆ ಭಾಯ್ ಭಾಯ್ ಸಂಬಂಧವಿತ್ತೆಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಈ ಸಂಬಂಧ ಕ್ಯೂಆರ್ ಕೋಡ್ ಮೂಲಕ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪಿಎಫ್ ಐ ಮೇಲಿನ 175 ಕ್ರಿಮಿನಲ್ ಪ್ರಕರಣಗಳನ್ನು ಕೈ ಬಿಟ್ಟು ಪ್ರವೀಣ್ ಪೂಜಾರಿ, ರಾಜು, ರುದ್ರೇಶ್ ಹತ್ಯೆಗೆ ಕಾಂಗ್ರೆಸ್ ಕಾರಣವಾಗಿತ್ತು ಎಂದು ಆಪಾದಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಿಎಫ್ ಐ ನಿಷೇಧ ಮಾಡಿದಾಗಿನಿಂದಲೂ ಹಿಂದೂ ವಿರೋಧಿ ಸಿದ್ದರಾಮಯ್ಯ ಒಳಗೊಳಗೆ ರೋಷದಿಂದ ಕುದಿಯುತ್ತಿದ್ದಾರೆ. ಸಿದ್ದರಾಮಯ್ಯರೇ, ಜಿಹಾದಿಗಳ ಮೇಲೆ ನಿಮಗೇಕೆ ಅಷ್ಟೊಂದು ಮಮಕಾರ?  ಎಂದು ಪ್ರಶ್ನಿಸಿದೆ.

ಪಿಎಫ್ ಐ ಸ್ನೇಹಿತರು ಜೈಲಿಗೆ ಹೋದಾಗಿನಿಂದ ಸಿದ್ದರಾಮಯ್ಯ ಒಬ್ಬಂಟಿಯಾಗಿದ್ದಾರೆಯೇ? ತುಕಡೆ ತುಕಡೆ ಗ್ಯಾಂಗಿನ ನಾಯಕ ರಾಹುಲ್ ಗಾಂಧಿ ಹಾಗೂ ಜಿಹಾದಿ ಬೆಂಬಲಿಗ ಸಿದ್ದರಾಮಯ್ಯ ಅವರ ಪ್ರೀತಿ ಹಾಲು ಜೀನಿನಂತೆ. ಸೋನಿಯಾ ಆಗಮನದಿಂದ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೆ ಶಕ್ತಿ ಬಂದಿದ್ದು ಸುಳ್ಳಲ್ಲ. ಭ್ರಷ್ಟರೆಲ್ಲ ಒಂದೆಡೆ ಸೇರುವಾಗ ಹುರುಪು, ಶಕ್ತಿ ಸಹಜವಾದದ್ದೇ ಎಂದು ಟೀಕಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹದಲ್ಲಿ 8 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರದಲ್ಲಿ ಕಟ್ಟೆಚ್ಚರ!

Toxic: ಭರ್ಜರಿ ಓಪನಿಂಗ್, ಮೊದಲ ದಿನವೇ ಪಠಾಣ್, ಅನಿಮಲ್ ದಾಖಲೆ ಉಡೀಸ್, ಸಂಜೆ ವೇಳೆಗೆ 70 ಕೋಟಿ ಗೂ ಅಧಿಕ ಕಲೆಕ್ಷನ್!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

ದೇಶಾದ್ಯಂತ H1N1 ಪ್ರಕರಣಗಳ ಏರಿಕೆ: ಸೋಂಕಿನ ಲಕ್ಷಣಗಳು, ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, IMA ಸಲಹೆ ಏನು?

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!