ರಾಜಕೀಯ

'ಕುಮಾರಸ್ವಾಮಿಗೆ ಸರ್ಕಾರ ನಡೆಸುವ ಯೋಗ್ಯತೆ ಇರಲಿಲ್ಲ ಹೀಗಾಗಿ ಸಮ್ಮಿಶ್ರ ಸರ್ಕಾರ ಬಿದ್ದೋಯ್ತು: ಎಚ್.ಡಿಕೆಯಿಂದ ದಲಿತರ ಭೂಮಿ ಕಬಳಿಕೆ'

Shilpa D

ರಾಮನಗರ:  ಜೆಡಿಎಸ್ ಮುಖಂಡ ಎಚ್ .ಡಿ ಕುಮಾರಸ್ವಾಮಿಗೆ ಸರ್ಕಾರ ನಡೆಸುವ ಯೋಗ್ಯತೆ  ಇರಲಿಲ್ಲ ಹೀಗಾಗಿ ಸಮ್ಮಿಶ್ರ ಸರ್ಕಾರ ಪತನವಾಯಿತು. ಹತಾಶೆಯಿಂದ ಅವರಿವರ ಮೇಲೆ ಆರೋಪ ಮಾಡುತ್ತಿದ್ದಾರೆ, ಇದು ಮೂರ್ಖತನ‌ ಎಂದು ಮಾಜಿ ಸಚಿವ ಬಿಜೆಪಿ ಎಂಎಲ್ ಸಿ ಸಿ.ಪಿ ಯೋಗೇಶ್ವರ್ ಟಾಂಗ್ ನೀಡಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಿಂದಲೇ ಸ್ಪರ್ಧಿಸುತ್ತೇನೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಪಿ ಯೋಗೇಶ್ವರ್, ಎಚ್.ಡಿಕೆ ಸವಾಲನ್ನು ನಾನು ಸ್ಪೋರ್ಟೀವ್ ಆಗಿ ಸ್ವೀಕರಿಸಿದ್ದೇನೆ, ನಾನು ಚನ್ನಪಟ್ಟಣ ‌ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದೇನೆ. ಮುಂದಿನ ಚುನಾವಣೆಗೆ ಚನ್ನಪಟ್ಟಣ ಕ್ಷೇತ್ರದಿಂದ ಸ್ವರ್ಧೆ ಮಾಡುವುದಾಗಿ ಹೇಳಿದ್ದಾರೆ. ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.

ಇನ್ನೂ ಭೂ ಕಬಳಿಕೆ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಪಿವೈ, ಕುಮಾರಸ್ವಾಮಿ ‌ಕೇತಗಾನಹಳ್ಳಿ ಬಳಿ ಕಟ್ಟುತ್ತಿದ್ದಾನಲ್ಲ ಜಮೀನು ಅದು ದಲಿತರ ಭೂಮಿ. ಅವನು ದಲಿತರ ಭೂಮಿ‌ ಕಬಳಿಸಿದ್ದಾನೆ, ಯಾರಿಗೂ ಕಾಣಬಾರದು ಎಂಬ ಕಾರಣಕ್ಕೆ ಕೇತಗಾನಹಳ್ಳಿ ಬಳಿ ದೊಡ್ಡ ಗೋಡೆ ಕಟ್ಟುತ್ತಿದ್ದಾನೆ ಎಂದು ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.

SCROLL FOR NEXT