ರಾಜಕೀಯ

ಚುನಾವಣೆಗೆ ದಿನಗಣನೆ: ಲಿಂಗಾಯತರ ಓಲೈಕೆಗೆ ಬಿಜೆಪಿ ಸಿದ್ಧತೆ

Srinivasamurthy VN

ಬೆಂಗಳೂರು: ಚುನಾವಣೆಗೆ ಇನ್ನು ಆರು ತಿಂಗಳಷ್ಟೇ ಬಾಕಿಯಿದ್ದು, ಬಿಜೆಪಿ ತನ್ನ ಪ್ರಬಲ ಲಿಂಗಾಯತ ಬೆಂಬಲದ ನೆಲೆಯನ್ನು ‘ಪುನರ್ ಗಟ್ಟಿಗೊಳಿಸಲು’ ಪ್ರಯತ್ನಿಸುತ್ತಿದೆ. 

ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಲಿಂಗಾಯತ ಬಿಜೆಪಿ ನಡುವೆ ಕಂದಕ ಹೆಚ್ಚುತ್ತಿದೆ ಎಂಬ ದೂರುಗಳ ನಂತರ ಬಿಜೆಪಿ ನಾಯಕರು ಸಿದ್ಧತೆ ಆರಂಭಿಸಿದ್ದಾರೆ ಎನ್ನಲಾಗಿದೆ. ಬಿಎಸ್ ವೈ ಸ್ಥಾನಕ್ಕೆ ಮತ್ತೊಬ್ಬ ಲಿಂಗಾಯತ ಬಸವರಾಜ ಬೊಮ್ಮಾಯಿ ಬಂದರೂ, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅದನ್ನು ಬದಿಗೊತ್ತಲಾಗುತ್ತಿದೆ ಎಂದು ಸಮುದಾಯ ಭಾವಿಸಿದೆ. ಹೀಗಾಗಿ ಬಿಜೆಪಿಗೆ ಈ ಸವಾಲನ್ನು ಹೇಗೆ ಎದುರಿಸುವುದು? ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಪ್ರಸನ್ನ ಈ ಕುರಿತು ಮಾತನಾಡಿ, ‘ಸಂಘ ಪರಿವಾರದವರದ್ದೇ ನಿಜವಾದ ಶಕ್ತಿ ಎಂಬ ಭಾವನೆ ಬಂದಿದೆ. ಸಮುದಾಯದ 40% ಏನಿದ್ದರೂ ಬಿಜೆಪಿಗೆ ಮತ ಹಾಕುತ್ತಾರೆ. ಆದರೆ ಉಳಿದ 60 ಪ್ರತಿಶತದ ಬಗ್ಗೆ ಏನು? ಪ್ರತಿಮೆಗಳನ್ನು ಸ್ಥಾಪಿಸುವುದರಿಂದ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಜಕೀಯ ವಿಶ್ಲೇಷಕ ಬಿ ಎಸ್ ಮೂರ್ತಿ ಅವರು ಮಾತನಾಡಿ, ಲಿಂಗಾಯತರು ತಮ್ಮ ಕೈಯಲ್ಲಿ ಕಡಿಮೆ ಅಧಿಕಾರ ಎಂದು ಗ್ರಹಿಸಿದ್ದಾರೆ. ರಾಜ್ಯದಲ್ಲಿ ಬೊಮ್ಮಾಯಿ ಅಲ್ಲ ಸಂಘಪರಿವಾರ ಆಡಳಿತ ನಡೆಸುತ್ತಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಸಂಘದ ಅಂಶಗಳನ್ನು ದೂರವಿಟ್ಟಿದ್ದ ಯಡಿಯೂರಪ್ಪನವರ ಕಾಲದಲ್ಲಿ ಹೀಗಾಗಲಿಲ್ಲ ಎಂಬ ಭಾವನೆ ಇದೆ. ಕೋಮುಗಲಭೆ, ಭ್ರಷ್ಟಾಚಾರ ಆರೋಪ, ದುರಾಡಳಿತ ಮತ್ತು ದುರ್ಬಲ ಆಡಳಿತ ಗ್ರಹಿಕೆ ಕೂಡ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡುತ್ತಿದೆ ಎನ್ನಲಾಗಿದೆ. ಅಲ್ಲದೆ ಪಂಚಮಸಾಲಿ ಆಂದೋಲನವನ್ನು ನಿಭಾಯಿಸಲು ಬೊಮ್ಮಾಯಿ ಸರ್ಕಾರ ಅಸಮರ್ಥವಾಯಿತು ಎಂಬ ಗ್ರಹಿಕೆ ಹೆಚ್ಚಾಗಿದೆ. ಬಿ.ವೈ.ವಿಜಯೇಂದ್ರ ಅವರನ್ನು ಸಂಪುಟಕ್ಕೆ ತೆಗೆದುಕೊಂಡರೆ ಇದನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು. ಅದು ಸಾಧ್ಯವಾಗಿಲ್ಲ. ಸಮುದಾಯದ ನಾಯಕರಿಗೆ ಅಧಿಕಾರ ನೀಡುವುದಕ್ಕಿಂತ ಪ್ರತಿಮೆಗಳು ಮತ್ತು ನಾಮಕರಣ ಸಮಾರಂಭಗಳಿಗೇ ಸೀಮಿತವಾಗಿದೆ ಎಂಬ ಆರೋಪವಿದೆ.

ಆದರೆ ಈ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅಲ್ಲಗಳೆದಿದ್ದು, ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿ ಸದಸ್ಯರನ್ನಾಗಿ ಮಾಡಲಾಗಿದೆ. ಅಲ್ಲದೆ, ಕಲ್ಯಾಣ-ಕರ್ನಾಟಕ, ಲಿಂಗಾಯತ ಬೆಲ್ಟ್‌ಗೆ `5,000 ಕೋಟಿ ವಿಶೇಷ ಪ್ಯಾಕೇಜ್ ನೀಡಲಾಗಿದೆ. ವೀರಶೈವ ಅಭಿವೃದ್ಧಿ ಮಂಡಳಿ ಸಮುದಾಯದ ಅಭಿವೃದ್ಧಿಗೆ ಹಣ ಮೀಸಲಿಟ್ಟಿದೆ. 500 ಕೋಟಿ ವೆಚ್ಚದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

SCROLL FOR NEXT