ಬೆಂಗಳೂರು: ಬಿಜೆಪಿ ಪರ ನಟ ಕಿಚ್ಚ ಸುದೀಪ್ ಪ್ರಚಾರದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ನಟ ಸುದೀಪ್ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ನಟ ಸುದೀಪ್ ಪ್ರಚಾರ ವಿಚಾರಕ್ಕೆ ಕಾಂಗ್ರೆಸ್ ಲೇವಡಿ ಬಗ್ಗೆ ಮಾತನಾಡಿರುವ ಬಿಎಸ್ವೈ, ಅವ್ರು ತಲೆ ಕೆಟ್ಟು ಏನು ಬೇಕಾದ್ರೂ ಮಾತಾಡ್ತಾರೆ ಎಂದರು.
ಸುದೀಪ್ ಅವರಂಥ ಜನಪ್ರಿಯ ನಟ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನವರಿಗೆ ಚಿಂತೆಯಾಗಿದೆ. ತಲೆಕೆಟ್ಟು ಏನೇನೋ ಮಾತನಾಡುತ್ತಿದ್ದಾರೆ ಎಂದರು.
ನಾಳೆ ಮುಖ್ಯಮಂತ್ರಿ ಮತ್ತು ನಾನು ದೆಹಲಿಗೆ ಹೋಗುತ್ತೇವೆ. ನಂತರ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಟಿಕೆಟ್ ಘೋಷಣೆ ಮಾಡಲಿದ್ದೇವೆ ಎಂದರು.
ವಿ ಸೋಮಣ್ಣ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಎಂದು ಕೇಳಿದ್ದಕ್ಕೆ ಸೋಮಣ್ಣ ಅವರ ಇಚ್ಛೆಯಂತೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಿಟ್ಟಿದ್ದು. ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿಯವರ ಬೆಂಬಲಿಗರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆಯಾಡುತ್ತಿದ್ದೇವೆ ಎಂದರು.