ಬಿಜೆಪಿ ಅಭ್ಯರ್ಥಿಗಳ ಬಡಿದಾಟಕ್ಕಿಂತ ಬಣ ಬಡಿದಾಟವೇ ಪಟ್ಟಿ ಬಿಡುಗಡೆಗೆ ತಡೆಯೊಡ್ಡಿದೆ: ಕಾಂಗ್ರೆಸ್
ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಜೆಡಿಎಸ್ ಕೂಡಾ ಎರಡನೇ ಪಟ್ಟಿ ಬಿಡುಗಡೆಗೆ ಸಜ್ಜಾಗುತ್ತಿದೆ.
ಬೆಂಗಳೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಜೆಡಿಎಸ್ ಕೂಡಾ ಎರಡನೇ ಪಟ್ಟಿ ಬಿಡುಗಡೆಗೆ ಸಜ್ಜಾಗುತ್ತಿದೆ. ಆದರೆ, ಆಡಳಿತಾರೂಢ ಬಿಜೆಪಿ ಮಾತ್ರ ಇನ್ನೂ ಮೊದಲ ಪಟ್ಟಿ ಬಿಡುಗಡೆ ಮಾಡಿಲ್ಲ. ಇದಕ್ಕೆ ಅದರ ಅಭ್ಯರ್ಥಿಗಳ ಬಡಿದಾಟಕ್ಕಿಂತ ಬಣ ಬಡಿದಾಟವೇ ಪಟ್ಟಿ ಬಿಡುಗಡೆಗೆ ತಡೆಯೊಡ್ಡಿದೆ ಎಂದು ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ: ಅಥಣಿಗಾಗಿ ಲಕ್ಷ್ಮಣ ಸವದಿ ಫೈಟ್; ಕುಮಟಳ್ಳಿ ಸೇರಿದಂತೆ ಬಿಜೆಪಿ ಸೇರಿದ ಎಲ್ಲ 17 ಶಾಸಕರಿಗೂ ಟಿಕೆಟ್: ರಮೇಶ್ ಜಾರಕಿಹೊಳಿ ಬಾಂಬ್
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಎಸ್ ಯಡಿಯೂರಪ್ಪ ಬಣ, ಬೊಮ್ಮಾಯಿ ಬಣ, ಆರ್ ಎಸ್ ಸ್ ಬಣ, ವಲಸಿಗರ ಬಣ, ಸಂತೋಷ್ ಬಣ, ಹೈಕಮಾಂಡ್ ಬಣಗಳ ಮೇಲಾಟದಲ್ಲಿ ಕನಿಷ್ಠ ಒಂದು ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿಲ್ಲ. ಇದು ಬಿಜೆಪಿ "ಮುಳುಗಿದ ಹಡಗು" ಎಂಬುದಕ್ಕೆ ನಿದರ್ಶನ ಎಂದು ಕುಹಕವಾಡಿದೆ.
ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನೇ ಘೋಷಿಸಲು ತಿಣುಕಾಡುತ್ತಿರುವ ರಾಜ್ಯ ಬಿಜೆಪಿಗೆ ಚುನಾವಣೆ ಎದುರಿಸುವ ಶಕ್ತಿ ಇದೆಯೇ. ಇಂದೇ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಬಿಎಸ್ ವೈ ಹೇಳಿದರೆ, ಇನ್ನೆರಡು ದಿನ ತಡ ಎಂದು ಬೊಮ್ಮಾಯಿ ಹೇಳುತ್ತಾರೆ. ಪಟ್ಟಿ ಬಿಡುಗಡೆಯ ದಿನಾಂಕದಲ್ಲೆ ಒಮ್ಮತ ಇಲ್ಲದವರು ಅಭ್ಯರ್ಥಿಗಳಲ್ಲಿ ಒಮ್ಮತ ಇರಲು ಸಾಧ್ಯವೇ! ಎಂದು ಪ್ರಶ್ನಿಸಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.