ಕುಮಾರಸ್ವಾಮಿ 
ರಾಜಕೀಯ

ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ: ಟಿಕೆಟ್ ಘೋಷಣೆಗೂ ಮುನ್ನವೇ ಸ್ವರೂಪ್​ಗೆ ಬಿ ಫಾರಂ

ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೈತಪ್ಪಿದೆ.

ಬೆಂಗಳೂರೂ: ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೈತಪ್ಪಿದೆ.

ಇಂದು ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು 49 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಕುಮಾರಸ್ವಾಮಿ ಅವರು ಹಾಸನ ಕ್ಷೇತ್ರದಲ್ಲಿ ತಾವು ಬಯಸಿದಂತೆ ಎಚ್.ಪಿ.ಸ್ವರೂಪ್ ಅವರಿ​ಗೆ ಜೆಡಿಎಸ್​ ಟಿಕೆಟ್​ ನೀಡಿದ್ದಾರೆ. ಅಲ್ಲದೆ ಅಧಿಕೃತವಾಗಿ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಿಸುವ ಮುನ್ನವೇ ಕುಮಾರಸ್ವಾಮಿ ಅವರು ಸ್ವರೂಪ್ ಗೆ ಬಿ ಫಾರಂ ನೀಡಿದ್ದಾರೆ. 

ಈ ವೇಳೆ ಮಾತನಾಡಿದ ಎಚ್ ಡಿ ರೇವಣ್ಣ ಅವರು, ಹಾಸನ ಕ್ಷೇತ್ರದ ಟಿಕೆಟ್​ ಬಗ್ಗೆ ದೇವೇಗೌಡರೇ ತೀರ್ಮಾನ ಮಾಡಿದ್ದಾರೆ. ಹಾಸನ ಕ್ಷೇತ್ರದಲ್ಲಿ ಭವಾನಿ ಅವರನ್ನು ಕಣಕ್ಕಿಳಿಸಬೇಕೆಂದು ಹೇಳುತ್ತಿದ್ದೆ. ಕಳೆದ 2 ವರ್ಷಗಳಿಂದ ಭವಾನಿ ನಿಲ್ಲಿಸಬೇಕೆಂದು ಚರ್ಚೆ ನಡೆಯುತ್ತಿತ್ತು. ಪ್ರೀತಂಗೌಡ 50,000 ಮತಗಳ ಅಂತರದಿಂದ ಗೆಲ್ಲುವೆ ಅಂತಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿ ಭವಾನಿ ಕಣಕ್ಕಿಳಿಸಲು ನಿರ್ಧರಿಸಿದ್ದೆವು ಎಂದು ಹೇಳಿದ್ದಾರೆ.

ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ
ಕುಡಚಿ-ಆನಂದ ಮಾಳಗಿ
ಸವದತ್ತಿ ಯಲ್ಲಮ್ಮ-ಸೌರಬ್ ಆನಂದ್​ ಚೋಪ್ರಾ
ಅಥಣಿ-ಶಶಿಕಾಂತ್ ಪಡಸಲಗಿ
ಯಲ್ಲಾಪುರ-ಡಾ.ನಾಗೇಶ್ ನಾಯ್ಕ್​
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ- ಕಡಬೂರು ಮಂಜುನಾಥ್
ಯಲಹಂಕ-ಮುನೇಗೌಡ
ಯಶವಂತಪುರ-ಜವರಾಯಿಗೌಡ
ತಿಪಟೂರು-ಶಾಂತಕುಮಾರ್
ಶಿರಾ-ಆರ್.ಉಗ್ರೇಶ್
ಹಾನಗಲ್-ಮನೋಹರ ತಹಶೀಲ್ದಾರ್​
ಸಿಂದಗಿ-ವಿಶಾಲಾಕ್ಷಿ ಶಿವಾನಂದ್​
ಗಂಗಾವತಿ-ಎಚ್.ಆರ್.ಚನ್ನಕೇಶವ
ಜೇವರ್ಗಿ-ದೊಡ್ಡಪ್ಪಗೌಡ
ಶಹಾಪುರ – ಗುರುಲಿಂಗಪ್ಪಗೌಡ
ಕಡೂರು – ವೈಎಸ್​ವಿ ದತ್ತಾ
ಹೊಳೆನರಸೀಪುರ – ಹೆಚ್.ಡಿ.ರೇವಣ್ಣ
ಸಕಲೇಶಪುರ – ಹೆಚ್.ಕೆ.ಕುಮಾರಸ್ವಾಮಿ
ಅರಕಲಗೂಡು – ಎ.ಮಂಜು
ಶ್ರವಣಬೆಳಗೊಳ – ಬಾಲಕೃಷ್ಣ
ಮಹಾಲಕ್ಷ್ಮೀ ಲೇಔಟ್ – ರಾಜಣ್ಣ
ಮಾಯಕೊಂಡ – ಆನಂದಪ್ಪ
ಹುಬ್ಬಳ್ಳಿ ಪೂರ್ವ – ವೀರಭದ್ರಪ್ಪಯ್ಯ
ಕುಮಟ – ಸೂರಜ್ ಸೋನಿ ನಾಯಕ್
ಹಳಿಯಾಳ – ಎಸ್ ಎಲ್ ಘೋಟ್ನೆಸ್ಕರ್
ಭಟ್ಕಳ – ನಾಗೇಂದ್ರ ನಾಯಕ್
ಶಿರಸಿ – ಉಪೇಂದ್ರ ಪೈ
ಚಿತ್ತಪುರ – ನ್ಯಾಯದೀಶ ಸುಭಾಷ್ ಚಂದ್ರ ರಾಥೋಡ್
ಕಲಬುರಗಿ ಉತ್ತರ – ನಾಸೀರ್ ಹುಸೇನ್
ಬಳ್ಳಾರಿ – ಅಲ್ಲಬಕ್ಸ್ ಮುನ್ನ
ಹರಪ್ಪನ ಹಳ್ಳಿ – ನೂರ್ ಅಹಮದ್
ಕೊಳ್ಳೆಗಾಲ – ನಿವೃತ್ತ ಪೊಲೀಸ್ ಪುಟ್ಟ ಸ್ವಾಮಿ
ಗುಂಡ್ಲುಪೇಟೆ – ಕಡಬುರು ಮಂಜುನಾಥ್
ಕಾರ್ಕಳ – ಶ್ರೀಕಾಂತ್ ಕೊಚ್ಚುರ್
ಉಡುಪಿ – ದಕ್ಷತ್ವ ಆರ್ ಶೆಟ್ಟಿ
ಕುಂದಾಪುರ – ರಮೇಶ್ ಕುಂದಾಪುರ
ಕನಕಪುರ – ನಾಗರಾಜ್ಯ
ಲಹಂಕ – ಮುನೇಗೌಡ
ಯಶವಂತಪುರ – ಜವರಾಯಿಗೌಡ
ತಿಪಟೂರು – ಶಾಂತ ಕುಮಾರ್ಶಿ
ರಾ – ಆರ್ ಉಗ್ರೇಶ್
ಸಿಂದಗಿ – ವಿಶಾಲಕ್ಷಿ ಶಿವಾನಂದ್
ಹೆಚ್ ಡಿ ಕೋಟೆ – ಜಯಪ್ರಕಾಶ್
ಕಾರವಾರ – ಚೈತ್ರಾ ಕೋಟಾಕರ್
ಪುತ್ತೂರು – ದಿವ್ಯಾ ಪ್ರಭ
ಅರಕಲಗೂಡು – ಎ ಮಂಜು
ಸಕಲೇಶಪುರ – ಹೆಚ್ ಕೆ ಕುಮಾರಸ್ವಾಮಿ
ಮಹಾಲಕ್ಷ್ಮಿ ಲೇಔಟ್ – ರಾಜಣ್ಣ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT