ಧವನ್ ಮತ್ತು ಸಿದ್ದರಾಮಯ್ಯ 
ರಾಜಕೀಯ

3ನೇ ತಲೆಮಾರಿನ ರಾಜಕಾರಣಕ್ಕೆ ಸಿದ್ದರಾಮಯ್ಯ ಕುಟುಂಬ ಸಜ್ಜು: ತಾತನ ಪರ ಪ್ರಚಾರದಲ್ಲಿ ಮೊಮ್ಮಗ ಧವನ್ ರಾಕೇಶ್ ಭಾಗಿ!

ಮೂರನೇ ತಲೆಮಾರಿನ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಂಬ ಸಿದ್ಧವಾಗುತ್ತಿದೆಯೇ? ಇಂತಹದ್ದೊಂದು ಪ್ರಶ್ನೆ ಈಗ ಸಿದ್ದರಾಮಯ್ಯ ಅಭಿಮಾನಿಗಳನ್ನು ಕಾಡಲಾರಂಭಿಸಿದೆ.

ಮೈಸೂರು: ಮೂರನೇ ತಲೆಮಾರಿನ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಂಬ ಸಿದ್ಧವಾಗುತ್ತಿದೆಯೇ? ಇಂತಹದ್ದೊಂದು ಪ್ರಶ್ನೆ ಈಗ ಸಿದ್ದರಾಮಯ್ಯ ಅಭಿಮಾನಿಗಳನ್ನು ಕಾಡಲಾರಂಭಿಸಿದೆ.

ಇದಕ್ಕೆ ಪೂರಕವೆನ್ನುವಂತೆ ಅವರ ಮೊಮ್ಮಗ ದಿವಂಗತ ರಾಕೇಶ್ ಸಿದ್ದರಾಮಯ್ಯ ಪುತ್ರ ಧವನ್ ತಾತ ಸಿದ್ದರಾಮಯ್ಯ ಜೊತೆ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿದ್ದಾನೆ. ಮೈಸೂರಿನಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿದ್ದರಾಮಯ್ಯ ಜೊತೆ ಧವನ್ ಕೂಡ ಓಡಾಟ ಆರಂಭಿಸಿದ್ದಾನೆ. ಈತನಿಗೆ ಚಿಕ್ಕಪ್ಪ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾರ್ಗದರ್ಶಿಯಾಗಿದ್ದಾರೆ.

ತಾತ ಹಾಗೂ ಚಿಕ್ಕಪ್ಪನ ಜೊತೆ ಚುನಾವಣಾ ಕಣದೊಳಗೆ ತಿರುಗುತ್ತಿರುವ ಧವನ್ ಗೆ ಎಲೆಕ್ಷನ್ ವಿಚಾರದ ಬಗ್ಗೆ ಬಹಳ ಕುತೂಹಲವಂತೆ. ಚುನಾವಣೆ ಎಂದರೇನು? ಅದು ಹೇಗಿರುತ್ತೆ? ಪ್ರಚಾರ ಶೈಲಿ ಮತ್ತು ಕಾರ್ಯ, ಜನರ ಒಡನಾಟ ಇವುಗಳೆಲ್ಲವನ್ನೂ ಹತ್ತಿರದಿಂದ ನೋಡಿ ತಿಳಿದುಕೊಳ್ಳುವ ಕುತೂಹಲ ಆತನದ್ದು. ಹೀಗಾಗಿ ಬಿರುಬೇಸಿಗೆಯಲ್ಲೂ ಆತ ಪ್ರಚಾರ ಕಾರ್ಯದ ವೇಳೆ ಮನೆಯ ಹಿರಿಯರೊಂದಿಗೆ ಉಪಸ್ಥಿತನಿದ್ದಾನೆ.

ಧವನ್‌ಗೆ ಅವರ ಅಪ್ಪನಂತೆ ರಾಜಕೀಯದಲ್ಲಿ ಆಸಕ್ತಿ ಜಾಸ್ತಿ ಹಾಗಾಗಿ ನಮ್ಮ ಜೊತೆ ಬಂದಿದ್ದಾನೆ. ಹುಡುಗ ನೋಡಿ ತಿಳ್ಕೋತೀನಿ ಅಂದ ಅದಕ್ಕೆ ನಾವೂ ಕರ್ಕೊಂಡು ಬಂದಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರೂ ಮೊಮ್ಮಗನ ಉಪಸ್ಥಿತಿ ಬಗ್ಗೆ ಹೆಮ್ಮೆಯಿಂದ ಮಾಧ್ಯಮದವರಿಗೆ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT