ರಾಜಕೀಯ

ಕರ್ನಾಟಕ ಗೆಲ್ಲಲು 1.5 ಕೋಟಿ ಮತ ತನ್ನಿ: ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಕಟ್ಟಿಹಾಕಲು ಬಿಜೆಪಿ ಪ್ಲಾನ್!

Shilpa D

ಮೈಸೂರು: 2024ರ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ ಕಟ್ಟಿ ಹಾಕಿ ರಾಜ್ಯದಲ್ಲಿ ಮತ್ತೆ  ಅಧಿಕಾರಕ್ಕೆ ಬರಲು ಬಯಸಿರುವ ಬಿಜೆಪಿ, ರಾಜ್ಯದಲ್ಲಿ ಹಿಡಿತ ಸಾಧಿಸಲು ಹಳೇ ಮೈಸೂರಿನಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಗಮನ ಹರಿಸಲು ನಿರ್ಧರಿಸಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಹಳೇ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡುವ ಚಿಕ್ಕಮಗಳೂರು, ಉಡುಪಿ, ಮಡಿಕೇರಿ ಮತ್ತು ಮಂಗಳೂರಿಗಿಂತ  ಈ  ಭಾಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಆದರೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಹಳೇ ಮೈಸೂರು ಭಾಗವು ಬಿಜೆಪಿಗೆ 103 ಸ್ಥಾನಗಳನ್ನು ನೀಡಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿರುವಂತೆ  ಹೆಚ್ಚಿನ ಸ್ಥಾನಗಳನ್ನುಗೆಲ್ಲುನ ನಿಟ್ಟಿನಲ್ಲಿ ಕೆಲಸ ಮಾಡಬೇಕು.

ಕಾಂಗ್ರೆಸ್‌  130 ಸ್ಥಾನ  ಪಡೆಯಲಿದೆ ಎಂಬ ಸಮೀಕ್ಷೆಯನ್ನು ಲೇವಡಿ ಮಾಡಿದ ಸಂತೋಷ್, ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 130 ಕ್ಕೂ ಹೆಚ್ಚು ಸ್ಥಾನಗಳನ್ನು ನೀಡುವುದಾಗಿ ಭವಿಷ್ಯ ನುಡಿದಿದ್ದ ಸಮೀಕ್ಷೆಗಳು ತಪ್ಪಾಗಿತ್ತು.  ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಎಂದು ಸ್ಮರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 29 ರಂದು ತಮ್ಮ ಪ್ರಚಾರ ಪ್ರಾರಂಭಿಸಿದಾಗ ಈ ನೆಲದ ಪರಿಸ್ಥಿತಿ ಬದಲಾಗಲಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ 133 ಸ್ಥಾನಗಳನ್ನು ಗೆಲ್ಲಲು ಪಕ್ಷಕ್ಕೆ 1.5 ಕೋಟಿ ಮತಗಳ ಅಗತ್ಯವಿದೆ . ಲೋಕಸಭೆ ಚುನಾವಣೆಯಲ್ಲಿ ಪಕ್ಷವು 1.80 ಕೋಟಿ ಮತ ಗಳಿಸಿರುವುದರಿಂದ ಅದು ದೊಡ್ಡ ಕೆಲಸವಲ್ಲ ಎಂದು ಬಿಜೆಪಿ ಡಿಜಿಟಲ್ ಕಾರ್ಯಕರ್ತರ ಸಭೆಯಲ್ಲಿ ಸಂತೋಷ್ ಹೇಳಿದರು.

ಒಕ್ಕಲಿಗರು, ಲಿಂಗಾಯತರು ಮತ್ತು ಎಸ್‌ಸಿ/ಎಸ್‌ಟಿಗಳ ಕೋಟಾವನ್ನು ಹೆಚ್ಚಿಸುವ ಹೊಸ ಮೀಸಲಾತಿ ನೀತಿಯನ್ನು ರದ್ದುಗೊಳಿಸುವ ಕಾಂಗ್ರೆಸ್ ನಿರ್ಧಾರದ ಕುರಿತು, ಕಾಂಗ್ರೆಸ್ ಮುಸ್ಲಿಮರಿಗೆ 4% ಕೋಟಾವನ್ನು ಮರುಸ್ಥಾಪಿಸುತ್ತದೆಯೇ ಎಂದು ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರನ್ನು ಸಂತೋಷ್ ಪ್ರಶ್ನಿಸಿದ್ದಾರೆ.

 ಸಿಎಂ ಬಸವರಾಜ ಬೊಮ್ಮಾಯಿ  ಶಿಗ್ಗಾಂವಿಯಿಂದ ಸ್ಪರ್ಧಿಸುವ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಂತೋಷ್ ಹೇಳಿದರು. ಆದರೆ, ಬಾದಾಮಿ, ಕೋಲಾರಕ್ಕೆ ಹೋಗಿದ್ದ ಮೈಸೂರು (ನಾಯಕ)ಯೊಬ್ಬರು ಸುರಕ್ಷಿತ ಸೀಟು ಸಿಗದ ಕಾರಣ ಕೊನೆಗೂ ವರುಣಾಕ್ಕೆ ಮರಳಿದ್ದಾರೆ ಎಂದು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಹೇಳಿದರು.

SCROLL FOR NEXT