ರಾಜಕೀಯ

ನಿಷ್ಠೆ ಬದಲಿಸಿದ ದಳಪತಿಗಳು: ಮಂಡ್ಯ ಜೆಡಿಎಸ್ ಕಾರ್ಯಕರ್ತರ ಯೂಟರ್ನ್; ಸ್ವಾಭಿಮಾನಿ ಪಡೆಗೆ ನೀಡಿದ್ದ ಬೆಂಬಲ ವಾಪಸ್!

Shilpa D

ಮೈಸೂರು:  ಜೆಡಿಎಸ್‌ನಲ್ಲಿ ಟಿಕೆಟ್‌ ಗೊಂದಲದಿಂದ ಬಂಡಾಯದ ಬಿಸಿ ತಟ್ಟಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಪಕ್ಷದ ವಿರುದ್ಧವೇ ತೊಡೆ ತಟ್ಟಿದ್ದಾರೆ.  

ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೈ ತಪ್ಪಿದ ಶ್ರೀನಿವಾಸ್‌ಗೆ ಸೋಮವಾರದವರೆಗೆ ಜೆಡಿಎಸ್ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದರು. ಹೀಗಾಗಿ ಮಾಜಿ ಶಾಸಕ ಎಂ ಶ್ರಿನೀವಾಸ್ ನೇತೃತ್ವದಲ್ಲಿ ‘ಸ್ವಾಭಿಮಾನಿ ಪಡೆ’ಯಿಂದ ಕೆ.ವಿ.ಶಂಕರೇಗೌಡರ ಮೊಮ್ಮಗ ಕೆ.ಎಸ್.ವಿಜಾನಂದ್ ಅವರನ್ನು ಕಣಕ್ಕಿಳಿಸಲಾಗಿತ್ತು

ಜೆಡಿಎಸ್ ಪಕ್ಷದ ಪರವಾಗಿ ರಾಮಚಂದ್ರ ಅವರನ್ನು ಪಕ್ಷದಿಂದ ಕಣಕ್ಕಿಳಿಸುವ ಹಠಾತ್ ನಿರ್ಧಾರದಿಂದ ಅಸಮಾಧಾನಗೊಂಡಿದ್ದ ಜೆಡಿಎಸ್ ಕಾರ್ಯಕರ್ತರು ಶ್ರೀನಿವಾಸ್ ಅವರಿಗೆ ಬೆಂಬಲ ಸೂಚಿಸಿದರು. ಆದರೆ, ಕೊನೆ ಗಳಿಗೆಯಲ್ಲಿ ಜೆಡಿಎಸ್ ಮುಖಂಡರ ಜತೆಗಿನ ಮಾತುಕತೆ ನಂತರ, ಶ್ರೀನಿವಾಸ್‌ಗೆ ಬೆಂಬಲ ನೀಡಿದ ಗುಂಪು ಯೂ ಟರ್ನ್‌ ಪಡೆದು ರಾಮಚಂದ್ರ ಅವರಿಗೆ ಬೆಂಬಲ ಸೂಚಿಸಿದೆ.

ಶ್ರೀನಿವಾಸ್ ಜತೆ ಗುರುತಿಸಿಕೊಂಡಿದ್ದ ಮಂಡ್ಯ ನಗರಸಭೆ ಅಧ್ಯಕ್ಷ ಎಚ್‌ಎಸ್‌ ಮಂಜು, ಎಸ್‌ಪಿ ಗಿರೀಶ್‌ ಸೇರಿದಂತೆ ಜೆಡಿಎಸ್‌ ಮುಖಂಡರು ಪಕ್ಷದ ಅಭ್ಯರ್ಥಿ ರಾಮಚಂದ್ರ ಪರ ಪ್ರಚಾರ ನಡೆಸಿದರು.

SCROLL FOR NEXT