ರಾಜಕೀಯ

ಡಾ. ಕೆ.ಸುಧಾಕರ್ ಕಮಿಷನ್ ಲೂಟಿ ಜೊತೆಗೆ ಕಾಂಪ್ರಮೈಸ್ ಹಗರಣ? ಕಾಂಗ್ರೆಸ್ ಆರೋಪ

Nagaraja AB

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದ ಆಖಾಡದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವಣ ಆರೋಪ, ಪ್ರತ್ಯಾರೋಪಗಳು ಜೋರಾಗಿ ನಡೆಯುತ್ತಿದ್ದು, ಕೆಲವೊಂದು ಹಗರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಕಾಂಗ್ರೆಸ್  ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಕಮಿಷನ್ ಲೂಟಿ ಜೊತೆಗೆ ಕಾಂಪ್ರಮೈಸ್ ಹಗರಣ? ಆರೋಪ ಮಾಡಿದೆ.

ಈ ಕುರಿತು ವಾಹಿನಿಯೊಂದರ ವರದಿಯೊಂದನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, "ಯಾರೂ ಏಕಪತ್ನಿ ವ್ರತಸ್ಥರಲ್ಲ" ಎಂದು ತಮ್ಮ ಲೀಲಾವಿನೋಧವನ್ನು ಇತರರ ಮೇಲೂ ಆರೋಪಿಸಿದ್ದ ಸುಧಾಕರ್ ಅವರೇ, ತಾವು ಸಿಡಿಗೆ ತಡೆಯಾಜ್ಞೆ ತಂದಿದ್ದರ ಹಿಂದಿನ ರಹಸ್ಯಗಳು ತೆರೆದುಕೊಳ್ಳುತ್ತಿವೆಯಲ್ಲ. ನೆರವು ಕೇಳಿ ಬಂದ ಹೆಣ್ಣುಮಕ್ಕಳು ಮಾಡಿಕೊಳ್ಳಬೇಕಾದ "ಅಡ್ಜಸ್ಟ್ಮೆಂಟ್" ಏನು? ಎಂದು ಪ್ರಶ್ನಿಸಿದೆ. 

ಮತ್ತೊಂದು ಟ್ವೀಟ್ ನಲ್ಲಿ ರಾಜ್ಯ ಬಿಜೆಪಿಯದ್ದು ಲಂಚ ಮಂಚದ ಸರ್ಕಾರ ಎಂಬುದು ಮೊದಲಿಂದಲೂ ಸಾಭೀತಾಗಿದೆ. ಹೀಗಾಗಿಯೇ ಸಾಲು ಸಾಲು ಹಗರಣಗಳು, ಸಾಲು ಸಾಲು ಸಿಡಿ ತಡೆಯಾಜ್ಞೆ ತರಲಾಗಿದೆ ಎಂದು ಕಿಡಿಕಾರಿದೆ.

SCROLL FOR NEXT