ರಾಜಕೀಯ

ಮೇಲೆ ಮುದ್ದಾಟ, ಒಳಗೊಳಗೆ ಗುದ್ದಾಟ: ಬಿಜೆಪಿ ನಾಯಕರ ಆಸ್ತಿಯಲ್ಲಿ ಕೆಪಿಟಿಸಿಎಲ್ ಕಚೇರಿ; ಜೆಡಿಎಸ್ ಶಾಸಕರ  ವಿರೋಧ

Shilpa D

ಬೆಂಗಳೂರು: 2024ರ ಲೋಕಸಭೆ ಚುನಾವಣೆಗಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೂ, ಎರಡೂ ಪಕ್ಷಗಳ ನಾಯಕರು ಕಿತ್ತಾಡುತ್ತಲೇ ಇದ್ದಾರೆ. ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಬಿ.ಸುರೇಶ್ ಬಾಬು ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಶಾಸಕ ಜೆ.ಸಿ.ಮಾಧು ಸ್ವಾಮಿ (ಬಿಜೆಪಿ) ಸಚಿವರಾಗಿದ್ದಾಗ ತಮ್ಮ ಪತ್ನಿಗೆ ಸೇರಿದ ಖಾಸಗಿ ಕಟ್ಟಡವನ್ನು ಕೆಪಿಟಿಸಿಎಲ್‌ಗೆ ಬಾಡಿಗೆಗೆ ನೀಡಿದ್ದಾರೆ ಎಂದು ಆರೋಪಿಸಿದರು. ಬಾಬು ಅವರ ಆರೋಪಕ್ಕೆ ಉತ್ತರಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, 2,835.10 ಚದರ ಅಡಿ ಕಟ್ಟಡವನ್ನು ಪ್ರತಿ ಚದರ ಅಡಿಗೆ 13.05 ರೂ.ಗೆ ಬಾಡಿಗೆಗೆ ತೆಗೆದುಕೊಳ್ಳಲಾಗಿದೆ ಎಂದು ಸದನಕ್ಕೆ ತಿಳಿಸಿದರು, ಇದು ಆಗಸ್ಟ್ 2022 ರಿಂದ ತಿಂಗಳಿಗೆ 37,000 ರೂ. ಪ್ರತಿ ಚದರ ಅಡಿಗೆ 14.28 ರೂ. ಅಂದರೆ 40,572 ರೂ. ಆಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಕೆಪಿಟಿಸಿಎಲ್‌ಗೆ 2.25 ಕೋಟಿ ರೂ.ಗೆ ಕಟ್ಟಡ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ ಎಂದರು.

ಮೂಲಗಳ ಪ್ರಕಾರ, ಈ ಕಟ್ಟಡವು ಈ ಹಿಂದೆ ಕಬ್ಬಿಣದ ಅದಿರು ಕಂಪನಿಯ ಕಚೇರಿಯಾಗಿತ್ತು ನಂತರ ಮಾಧು ಸ್ವಾಮಿ ಅವರ ಪತ್ನಿ ಅದನ್ನು ಖರೀದಿಸಿದರು ಎಂದು ಸ್ಥಳೀಯ ರಾಜಕಾರಣಿಯೊಬ್ಬರು ತಿಳಿಸಿದ್ದಾರೆ.

ಸುರೇಶ್ ಬಾಬು ಅವರ ಸಂಬಂಧಿಯೊಬ್ಬರಿಗೆ ಸೇರಿದ ಕಟ್ಟಡದಲ್ಲಿ ಸಬ್ ರಿಜಿಸ್ಟಾರ್ ಕಚೇರಿಯಿತ್ತು, ಅದನ್ನು ಬಾಬು ಅವರ ಸಂಬಂಧಿಕರಿಂದ ಬಾಡಿಗೆಗೆ ಪಡೆಯಲಾಗಿತ್ತು, ಆ ವೇಳೆ ಮಾಧುಸ್ವಾಮಿ ಇದನ್ನು ಪ್ರಶ್ನಿಸಿದ್ದರು, ಹೀಗಾಗಿ ಸುರೇಶ್ ಬಾಬು ಈಗ ಮಾಧು ಸ್ವಾಮಿ ವಿರದ್ಧ ಸೇಡು ತಿರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

SCROLL FOR NEXT