ಕೋಲಾರದಲ್ಲಿ ಕಳೆದ ಸೋಮವಾರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ 
ರಾಜಕೀಯ

ಸುರಕ್ಷಿತ ಕ್ಷೇತ್ರವೆಂದು ಕೋಲಾರದತ್ತ ಮುಖ ಮಾಡಿದ ಸಿದ್ದರಾಮಯ್ಯ: ಅದೇ ಹಾದಿಯಲ್ಲಿ ಕಾಂಗ್ರೆಸ್ ಘಟಾನುಘಟಿ ನಾಯಕರು!

ಈ ಬಾರಿಯ ವಿಧಾನಸಭೆ ಚುನಾವಣೆಗೆ ಕೋಲಾರ ಕ್ಷೇತ್ರ ಸುರಕ್ಷಿತ ಎಂದು ಭಾವಿಸಿಕೊಂಡು ಕಾಂಗ್ರೆಸ್ ಶಾಸಕಾಂಗ ಪಕ್ಷ (CLP)ನಾಯಕ ಸಿದ್ದರಾಮಯ್ಯ ಆಯ್ಕೆ ಮಾಡಿಕೊಳ್ಳುತ್ತಿದ್ದಂತೆ, ಕಾಂಗ್ರೆಸ್ ನ ಘಟಾನುಘಟಿ ನಾಯಕರು ಕೂಡ ಸುರಕ್ಷಿತ ಕ್ಷೇತ್ರದ ಹುಟುಕಾಟ ನಡೆಸುತ್ತಿದ್ದಾರೆ.

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಗೆ ಕೋಲಾರ ಕ್ಷೇತ್ರ ಸುರಕ್ಷಿತ ಎಂದು ಭಾವಿಸಿಕೊಂಡು ಕಾಂಗ್ರೆಸ್ ಶಾಸಕಾಂಗ ಪಕ್ಷ (CLP)ನಾಯಕ ಸಿದ್ದರಾಮಯ್ಯ ಆಯ್ಕೆ ಮಾಡಿಕೊಳ್ಳುತ್ತಿದ್ದಂತೆ, ಕಾಂಗ್ರೆಸ್ ನ ಘಟಾನುಘಟಿ ನಾಯಕರು ಕೂಡ ಸುರಕ್ಷಿತ ಕ್ಷೇತ್ರದ ಹುಟುಕಾಟ ನಡೆಸುತ್ತಿದ್ದಾರೆ.

ಅಲ್ಪಸಂಖ್ಯಾತ ಮತದಾರರು ಹೆಚ್ಚಾಗಿರುವ, ದಲಿತರು ಹೆಚ್ಚು ಇರುವ ಕ್ಷೇತ್ರಗಳು ಸಾಮಾನ್ಯವಾಗಿ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳು ಎಂದು ನಂಬಲಾಗುತ್ತಿದೆ. ಕೋಲಾರದಲ್ಲಿ ಹೆಚ್ಚು ಮುಸ್ಲಿಮರು ಇರುವುದಲ್ಲದೆ ಕುರುಬರು ಮತ್ತು ದಲಿತರು ಹೆಚ್ಚಾಗಿರುವುದು ಸಿದ್ದರಾಮಯ್ಯವರ ಪರವಾಗಿ ಹೆಚ್ಚು ಮತಗಳು ಒಲಿಯಬಹುದು ಎಂದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ ಜಿ ಪರಮೇಶ್ವರ್ ಬೆಂಗಳೂರಿನ ಪುಲಕೇಶಿ ನಗರದಲ್ಲಿ ಈ ಬಾರಿ ಚುನಾವಣೆಗೆ ನಿಂತುಕೊಳ್ಳಲು ಯೋಜನೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮೀಸಲು ಸ್ಥಾನಗಳು: ನಗರದ ಸ್ಥಾನಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು 1 ಲಕ್ಷಕ್ಕೂ ಅಧಿಕ ಮುಸ್ಲಿಂ ಮತದಾರರಿದ್ದಾರೆ. ಈಗಿನ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕಳೆದ ಆಗಸ್ಟ್ 2020ರಲ್ಲಿ ಇಲ್ಲಿ ಗಲಭೆ ನಡೆದ ನಂತರ ಅವರ ಮನೆ ಸುಟ್ಟು ಹೋಗಿ ಇಲ್ಲಿನ ಸಮುದಾಯದ ವಿರೋಧ ಎದುರಿಸುತ್ತಿದ್ದಾರೆ.

ಕೆಲವು ಮುಗ್ಧ ಜನರ ಮೇಲೆ ಪೊಲೀಸರು ಲಾಠಿ ಪ್ರಯೋಗ ಇತರ ವಿಚಾರಣೆ ಎಂದು ಎದುರಿಸಿ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಇಲ್ಲಿನ ಜನರು ಈ ಬಾರಿ ಅಖಂಡ ಶ್ರೀನಿವಾಸ ಮೂರ್ತಿಯವರನ್ನು ಬೆಂಬಲಿಸುವಂತೆ ಕಾಣುತ್ತಿಲ್ಲ. ಪರಮೇಶ್ವರ್ ಅವರು ಈಗಾಗಲೇ ಕೆಲವು ಪ್ರಭಾವಿ ಸಮುದಾಯದ ನಾಯಕರ ಜೊತೆ ಸಂಪರ್ಕದಲ್ಲಿದ್ದು ಕ್ಷೇತ್ರದ ಚರ್ಚಿನ ಪಾದ್ರಿಗಳ ಜೊತೆ ಕೂಟ ನಿಕಟ ಬಾಂಧವ್ಯ ಹೊಂದಿದ್ದಾರೆ. ಅವರ ಪರಮೇಶ್ವರ್ ಅವರನ್ನ ಬೆಂಬಲಿಸುವ ಸಾಧ್ಯತೆ ಇದೆ ಎಂದು ಮುಸ್ಲಿಂ ಮುಖಂಡರೊಬ್ಬರು ಹೇಳುತ್ತಾರೆ.

ಮಾಜಿ ವಿಧಾನಪರಿಷತ್ ಸದಸ್ಯ ಎಂ ಸಿ ವೇಣುಗೋಪಾಲ್ ಈಗಾಗಲೇ ಪುಲಕೇಶಿ ನಗರ ಮತ್ತು ಕೊರಟಗೆರೆಯಲ್ಲಿ ಈಗಾಗಲೇ ಸಮೀಕ್ಷೆ ನಡೆಸಿದ್ದಾರೆ. ಈ ಕ್ಷೇತ್ರ ಕಾಂಗ್ರೆಸ್ ಗೆ ಸುರಕ್ಷಿತವಾಗಿದೆ ಎಂದು ಗೊತ್ತಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರು ಪರಮೇಶ್ವರ್ ಅವರಿಗೆ ಯೋಚನೆ ಮಾಡಿ ಎಂದು ಹೇಳಿದ್ದಾರಂತೆ. ಹೀಗಾದರೆ ಪರಮೇಶ್ವರ್ ಅವರು ಕೊರಟಗೆರೆ ಟಿಕೆಟ್ ನ್ನು ತಮ್ಮ ಆಪ್ತರು ಅಥವಾ ತಮ್ಮ ಅಳಿಯ ಡಾ ಜಿ ಎಸ್ ಆನಂದ್ ಗೆ ಬಿಟ್ಟುಕೊಡುವ ಸಾಧ್ಯತೆಯಿದೆ.

20143ರಲ್ಲಿ ಪರಮೇಶ್ವರ್ ಕೊರಟಗೆರೆ ಕ್ಷೇತ್ರದಿಂದ ಸೋತಿದ್ದರು. ಆ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ಸಿಎಂ ಹುದ್ದೆಗೆ ಸಹ ಪರಮೇಶ್ವರ್ ಪ್ರಯತ್ನಿಸುತ್ತಿದ್ದರು. ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈ ಬಾರಿ ಸವದತ್ತಿಯಲ್ಲಿ ನಿಂತು ಯಮಕನಮರಡಿ ಕ್ಷೇತ್ರವನ್ನು ತಮ್ಮ ಪುತ್ರಿ ಪ್ರಿಯಾಂಕಗೆ ಬಿಟ್ಟುಕೊಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ಮಾಜಿ ಕೇಂದ್ರ ಸಚಿವ ಕೆ ಹೆಚ್ ಮುನಿಯಪ್ಪ ದೇವನಹಳ್ಳಿ ಮೇಲೆ ಕಣ್ಣಿಟ್ಟಿದ್ದರೆ, ಅವರ ಪುತ್ರಿ ರೂಪಕಲಾ ಎಂ ಶಶಿಧರ್ ಕೆಜಿಎಫ್ ಶಾಸಕಿಯಾಗಿದ್ದಾರೆ. ಇಲ್ಲಿ ಆಸಕ್ತಿಕರ ವಿಷಯವೆಂದರೆ ಡಿ ಕೆ ಶಿವಕುಮಾರ್ ಅವರು ಕನಕಪುರ ಕ್ಷೇತ್ರದಲ್ಲಿ ಹೆಚ್ಚು ಸುರಕ್ಷಿತವಾಗಿದ್ದಾರೆ. ಒಂದು ಬಾರಿಯ ಅವರ ರಾಜಕೀಯ ವಿರೋಧಿ ಡಿ ಎಂ ವಿಶ್ವನಾಥ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನಂತರ ಡಿ ಕೆ ಶಿವಕುಮಾರ್ ಸ್ಥಾನ ಮತ್ತಷ್ಟು ಗಟ್ಟಿಯಾಗಿದೆ. 2008ರ ವಿಧಾನಸಭೆ ಚುನಾವಣೆಯಲ್ಲಿ ವಿಶ್ವನಾಥ್ ಕನಕಪುರದಲ್ಲಿ ಡಿ ಕೆ ಶಿವಕುಮಾರ್ ವಿರುದ್ಧ ಅತ್ಯಲ್ಪ ಮತಗಳಿಂದ ಸೋಲು ಕಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT