ರಾಜಕೀಯ

ಕಾಂಗ್ರೆಸ್‌ನ 200 ಯುನಿಟ್ ಉಚಿತ ವಿದ್ಯುತ್ ಭರವಸೆಯು 'ಬೇಜವಾಬ್ದಾರಿ ಮತ್ತು ತರ್ಕಹೀನ': ಬಸವರಾಜ ಬೊಮ್ಮಾಯಿ

Ramyashree GN

ಹುಬ್ಬಳ್ಳಿ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲಾ ಮನೆಗಳಿಗೆ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಪ್ರತಿಪಕ್ಷ ಕಾಂಗ್ರೆಸ್ ನೀಡಿದ ಚುನಾವಣಾ ಭರವಸೆಯನ್ನು 'ಬೇಜವಾಬ್ದಾರಿ ಮತ್ತು ತರ್ಕಹೀನ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದರು.

ಚುನಾವಣಾ ಸ್ಪರ್ಧೆಯಲ್ಲಿ ಅವರು ಎಷ್ಟು ಕೆಳಮಟ್ಟದಲ್ಲಿದ್ದಾರೆ ಎಂಬುದನ್ನು ಈ ಭರವಸೆಯು ತೋರಿಸಿದೆ ಎಂದರು.

'ಇದು ಬೇಜವಾಬ್ದಾರಿ ಮತ್ತು ತರ್ಕಹೀನ ನಿರ್ಧಾರವಾಗಿದೆ. ಅವರು (ಕಾಂಗ್ರೆಸ್) ಹತಾಶರಾಗಿದ್ದಾರೆ. ಅದಕ್ಕಾಗಿಯೇ ಅವರು ಈ ರೀತಿ ಭರವಸೆ ನೀಡುತ್ತಿದ್ದಾರೆ. ಕಾಂಗ್ರೆಸ್‌ನಿಂದ ಇಂತಹ ಇನ್ನೂ ಅನೇಕ ಘೋಷಣೆಗಳನ್ನು ನಿರೀಕ್ಷಿಸಲಾಗಿದೆ' ಎಂದು ಬೊಮ್ಮಾಯಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬುಧವಾರ ಚಿಕ್ಕೋಡಿಯಲ್ಲಿ ನಡೆದ ಕಾಂಗ್ರೆಸ್‌ ಪ್ರಜಾಧ್ವನಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಣದುಬ್ಬರದಿಂದ ತತ್ತರಿಸಿರುವ ರಾಜ್ಯದ ಜನರ ಬದುಕಿಗೆ ಬೆಳಕು ನೀಡಲು ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ನೀಡಲಿದೆ ಎಂದು ಹೇಳಿದ್ದರು.

'ಸುಳ್ಳು ಭರವಸೆ ನೀಡಿ ಚುನಾವಾಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಬಯಸುತ್ತಿದೆ ಎಂದ ಬೊಮ್ಮಾಯಿ, ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಆಡಳಿತ ನಡೆಸಿದ ಪಕ್ಷಕ್ಕೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಸಲ್ಲದು' ಎಂದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೊಸ (ರಾಜಕೀಯಕ್ಕೆ) ಅದೇ ಹೇಳಿಕೆ ನೀಡಿದ್ದರೆ ಅದು ಸ್ವೀಕಾರಾರ್ಹವಾಗಿರುತ್ತಿತ್ತು. ಕಾಂಗ್ರೆಸ್ ಸರ್ಕಾರವು ಆರು ಗಂಟೆಗಳ ಕಾಲ (ದಿನಕ್ಕೆ) ನಿರಂತರ ವಿದ್ಯುತ್ ಪೂರೈಕೆ ಮಾಡಲು ಕೂಡ ವಿಫಲವಾಗಿರುವಾಗ, ಅವರು ಹೇಗೆ ಉಚಿತ ವಿದ್ಯುತ್ ನೀಡುತ್ತಾರೆ? ಎಂದು ಮುಖ್ಯಮಂತ್ರಿ ಹೇಳಿದರು.

SCROLL FOR NEXT