ರಾಜಕೀಯ

ಸಿಎಂ ಬೊಮ್ಮಾಯಿ ಬಜೆಟ್ ಬಗ್ಗೆ ಗಮನ ಹರಿಸುತ್ತಿಲ್ಲ: ವಿರೋಧ ಪಕ್ಷದ ನಾಯಕರು

Manjula VN

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 17 ರಂದು ಮಂಡಿಸಲಿದ್ದು, ರಾಜ್ಯ ಬಜೆಟ್‌ಗಾಗಿ ಉತ್ಸಾಹದಲ್ಲಿ ತಯಾರಿ ನಡೆಸುತ್ತಿಲ್ಲ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.

ವಿತ್ತ ಸಚಿವರೂ ಆಗಿರುವ ಬೊಮ್ಮಾಯಿ ಅವರು ‘ಎಲ್ಲಾ ಪ್ರಮುಖ ಬಜೆಟ್ ಪೂರ್ವ ಸಭೆ’ಗಳತ್ತ ಗಮನ ಹರಿಸುತ್ತಿಲ್ಲ, ಬಜೆಟ್ ಬದಲಿಗೆ ಚುನಾವಣೆಗೆ ಹೆಚ್ಚಿನ ತಯಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, 'ರಾಜ್ಯದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಇಲ್ಲದ ಬಿಜೆಪಿ ಸರ್ಕಾರದಿಂದ ಉತ್ತಮ ಮತ್ತು ಪ್ರಗತಿಪರ ಬಜೆಟ್ ನಿರೀಕ್ಷಿಸುವುದು ಅಸಾಧ್ಯ. ಭ್ರಷ್ಟಾಚಾರದಲ್ಲಿ ಮುಳುಗಿರುವ ಮುಖ್ಯಮಂತ್ರಿ ಮತ್ತು ಸಚಿವರಿಗೆ ಜನಹಿತಕ್ಕಿಂತ ಸ್ವಹಿತಾಸಕ್ತಿ ಮುಖ್ಯ. ಬಜೆಟ್ ಎನ್ನುವುದು ಕೇವಲ ಅಂಕಿ-ಅಂಶಗಳಲ್ಲ, ಅದು ಜನರ ಏಳಿಗೆಗೆ ಸಂಬಂಧಿಸಿದ್ದು. ಜನ ಸಾಮಾನ್ಯರ ಸುಧಾರಣೆಗೆ ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಪರಿಷತ್ತಿನ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಮಾತನಾಡಿ, “ನಾನು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ಪಿಸಿ ಚಿದಂಬರಂ ಮತ್ತು ದಿವಂಗತ ಡಾ ಪ್ರಣಬ್ ಮುಖರ್ಜಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ. ವಿವಿಧ ಹಿತಾಸಕ್ತಿಗಳೊಂದಿಗೆ ಬಜೆಟ್ ಅನ್ನು ಸಮತೋಲನಗೊಳಿಸಲು ಅಸಾಮಾನ್ಯ ಪ್ರಯತ್ನದ ಅಗತ್ಯವಿದೆ ಎಂದು ಹೇಳಿದ್ದಾರೆ.

ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ‘ಕಾಟಾಚಾರಕ್ಕೆ ಬಜೆಟ್ ಮಂಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಬಜೆಟ್ ಗಾಗಿ ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕು ಎಂದಿದ್ದಾರೆ.

ಬಿಜೆಪಿ ಎಂಎಲ್ಸಿ ಅಡಗೂರು ವಿಶ್ವನಾಥ್ ಮಾತನಾಡಿ, 'ಸರ್ಕಾರದಲ್ಲಿ 33-34 ಪ್ರಮುಖ ಇಲಾಖೆಗಳಿದ್ದು, ಅವುಗಳಲ್ಲಿ ಹಣಕಾಸು, ಡಿಪಿಆರ್ ಮತ್ತು ಕಾನೂನು ಅಗ್ರಸ್ಥಾನದಲ್ಲಿದೆ. ಆದರೆ, ಇದರಲ್ಲಿ ಎರಡು ಇಲಾಖೆಗಳು ಮುಖ್ಯಮಂತ್ರಿ ಬಳಿ ಇವೆ. ಸರ್ಕಾರದಲ್ಲಿ ವಿಶೇಷವಾದ ಹಣಕಾಸು ಸಚಿವರೇ ಇಲ್ಲ. ಸಮಯವಿಲ್ಲದಿದ್ದರೆ ಸಿಎಂ ಖಾತೆಯ ಜವಾಬ್ದಾರಿ ತೆಗೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ.

SCROLL FOR NEXT