ರಾಜಕೀಯ

ಸುಧಾಕರ್ ಸಿಎಜಿ ವರದಿ ಓದಿ ಅರ್ಥ ಮಾಡಿಕೊಳ್ಳಲಾಗದ ಪೆದ್ದ ಮತ್ತು ಸುಳ್ಳ: ಸಿದ್ದರಾಮಯ್ಯ

Lingaraj Badiger

ಬೆಂಗಳೂರು: ತಾವು ಮುಖ್ಯಮಂತ್ರಿಯಾಗಿದ್ದಾಗ 35 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿತ್ತು ಎಂದು ಆರೋಪಿಸಿರುವ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಸುಧಾಕರ್ ಸಿಎಜಿ ವರದಿ ಓದಿ ಅರ್ಥ ಮಾಡಿಕೊಳ್ಳಲಾಗದ ಪೆದ್ದ ಮತ್ತು ಸುಳ್ಳ ಎಂದು ತಿರುಗೇಟು ನೀಡಿದ್ದಾರೆ.
 
ಸರ್ಕಾರದ ಹಣಕಾಸು ವ್ಯವಹಾರದಲ್ಲಿ ರಿಕನ್ಸಿಲೇಶನ್ ಮತ್ತು ಅವ್ಯವಹಾರದ ನಡುವಿನ ವ್ಯತ್ಯಾಸ ಗೊತ್ತಿಲ್ಲದ ಪೆದ್ದರೆಲ್ಲ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವುದು ರಾಜ್ಯದ ದುರಂತ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

ಸುಧಾಕರ್ ಸಿಎಜಿ ವರದಿಯನ್ನು ಓದಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಸಿಎಜಿ ವರದಿಯಲ್ಲಿ ರಿಕನ್ಸಿಲೇಶನ್ ಇದೆ. ಜಮಾ, ಖರ್ಚು ಸೇರಿಸಿ ಆ ವರದಿಯನ್ನು ಕೊಟ್ಟಿರುತ್ತಾರೆ ಎಂದು ಮಾಜಿ ಸಿಎಂ ಹೇಳಿದ್ದಾರೆ.

ಆಲಿಬಾಬಾ ಮತ್ತು ಈ 40 ಕಳ್ಳರು ಇದ್ದಾರಲ್ಲ? ಹಾಗೇ ಈ ಬಿಜೆಪಿಯವರು. ಅದರಲ್ಲಿ ಈ ಸುಧಾಕರ್ ಕೂಡ ಒಬ್ಬ. ಕೊರೋನಾ ಸಂದರ್ಭದಲ್ಲಿ ಮೂರು ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಅದರ ಮಾಸ್ಟರ್ ಡಾ. ಕೆ ಸುಧಾಕರ್ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

SCROLL FOR NEXT