ಪ್ರತಾಪ್ ಸಿಂಹ 
ರಾಜಕೀಯ

ಬಿಜೆಪಿಯವರು ತಪ್ಪು ಮಾಡಿದ್ದರೆ ಹಿಡಿದು ಜೈಲಿಗೆ ಹಾಕಿ; ನಮ್ಮ ಪಕ್ಷ ಸ್ವಚ್ಛವಾಗಲು ಅನುವು ಮಾಡಿಕೊಡಿ: ಪ್ರತಾಪ್ ಸಿಂಹ

ಪಿಎಸ್ಐ ಹಗರಣ, ಬಿಟ್ ಕಾಯಿನ್ , 40% ವಿಚಾರ, ಚಾಮರಾಜನಗರ ಆಕ್ಸಿಜನ್ ದುರಂತ ಎಲ್ಲ ಪ್ರಕರಣದ ಬಗ್ಗೆ ತನಿಖೆ ಮಾಡಿ. ತಪ್ಪಿತಸ್ಥರನ್ನು ಹಿಡಿದು ಜೈಲಿಗೆ ಹಾಕಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರು: ಪಿಎಸ್ಐ ಹಗರಣ, ಬಿಟ್ ಕಾಯಿನ್, 40% ವಿಚಾರ, ಚಾಮರಾಜನಗರ ಆಕ್ಸಿಜನ್ ದುರಂತ ಎಲ್ಲ ಪ್ರಕರಣದ ಬಗ್ಗೆ ತನಿಖೆ ಮಾಡಿ. ತಪ್ಪಿತಸ್ಥರನ್ನು ಹಿಡಿದು ಜೈಲಿಗೆ ಹಾಕಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಪ್ಪಿತಸ್ಥರನ್ನು ಹಿಡಿದು ಜೈಲಿಗೆ ಹಾಕಿ. ಕಾಂಗ್ರೆಸ್ ನವರು ಹೇಳಿದ್ದೇಲ್ಲ ಸತ್ಯ. ನೀವು ಸತ್ಯ ಸಂಧರು ಎಂಬುದನ್ನು ಸಾಬೀತು ಮಾಡಿ ಎಂದು ಸವಾಲು ಹಾಕಿದ್ದಾರೆ.

ನಮ್ಮ ಪಕ್ಷದಲ್ಲೇ ಬಿಜೆಪಿಯವರೇ ತಪ್ಪು ಮಾಡಿದರೆ ಅವರನ್ನು ಹಿಡಿದು ಜೈಲಿಗೆ ಹಾಕಿ. ಈ ಮೂಲಕ ನಮ್ಮ ಪಕ್ಷವನ್ನ ಸ್ವಚ್ಚ ಮಾಡಲು ಅನುವು ಮಾಡಿಕೊಡಿ. ನೀವು ಬಿಜೆಪಿ ಸರ್ಕಾರದ ಮೇಲೆ ಏನೇನು ಆರೋಪ ಮಾಡಿದ್ದೀರಾ ಆವೆಲ್ಲದರ ಬಗ್ಗೆಯೂ ತುರ್ತು ತನಿಖೆ ಮಾಡಿ. ನಿಮ್ಮ ಮೇಲೆ ಜನ ಅತೀವ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸವನ್ನ ಉಳಿಸಿಕೊಳ್ಳಿ ಎಂದು ಕಿಡಿಕಾರಿದ್ದಾರೆ.

ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗ ನೀವು ಯಾವ ಕಂಡಿಷನ್ ಹಾಕಿರಲಿಲ್ಲ. ಈಗಲೂ ಯಾವ ಕಂಡಿಷನ್ ಇಲ್ಲದೆ ಗ್ಯಾರಂಟಿ ಜಾರಿ ಮಾಡಿ. ನನಗು ಫ್ರೀ, ನಿನಗೂ ಎಲ್ಲರಿಗೂ ಫ್ರೀ ಎಂದವರು ಸಿದ್ದರಾಮಯ್ಯ ಅವರೇ, ಈಗ ಸಿದ್ದರಾಮಯ್ಯ ಅವರ ಮೇಲೆ ಅವರೇ ಹೇಳಿದ ಮಾತಿನಿಂದ ಒತ್ತಡವಿದೆ.

ಆ ಒತ್ತಡವನ್ನು ಅವರೇ ನಿಭಾಯಿಸಿಕೊಂಡು ಯಾವ ಷರತ್ತು ಇಲ್ಲದೆ ಗ್ಯಾರಂಟಿ ಜಾರಿ ಮಾಡಿ ಆಗ್ರಹಿಸಿದ್ದಾರೆ. ಘೋಷಣೆ ಮಾಡುವಾಗ ನೀವು ಯಾವ ಷರತ್ತು ಹಾಕಿರಲಿಲ್ಲ. ಈಗಲೂ ಯಾವ ಷರತ್ತು ಇಲ್ಲದೇ ಗ್ಯಾರಂಟಿ ಜಾರಿ ಮಾಡಿ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT