ಸಂಗ್ರಹ ಚಿತ್ರ 
ರಾಜಕೀಯ

'ಕಾಂಗ್ರೆಸ್ ಗ್ಯಾರಂಟಿ ಸೈಡ್ ಎಫೆಕ್ಟ್'; ಬೆಲೆ ಏರಿಕೆ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಒಂದೆಡೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ 5 ಗ್ಯಾರಂಟಿ ಯೋಜನೆ ಬಿಡುಗಡೆಯಲ್ಲಿ ತಲ್ಲೀನವಾಗಿದ್ದರೆ ಇತ್ತ ಬಿಜೆಪಿ ಸೈಲೆಂಟ್ ಆಗಿಯೇ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಪಟ್ಟಿ ಬಿಡುಗಡೆ ಮಾಡಿದೆ.

ಬೆಂಗಳೂರು: ಒಂದೆಡೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ 5 ಗ್ಯಾರಂಟಿ ಯೋಜನೆ ಬಿಡುಗಡೆಯಲ್ಲಿ ತಲ್ಲೀನವಾಗಿದ್ದರೆ ಇತ್ತ ಬಿಜೆಪಿ ಸೈಲೆಂಟ್ ಆಗಿಯೇ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಪಟ್ಟಿ ಬಿಡುಗಡೆ ಮಾಡಿದೆ.

ಹೌದು.. ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುತ್ತಲೇ ತಾವು ನೀಡಿದ್ದ 5 ಗ್ಯಾರಂಟಿಗಳನ್ನು (Guarantee) ಅನುಷ್ಠಾನಗೊಳಿಸುವಲ್ಲಿ ನಿರತವಾಗಿದೆ. ಆದರೆ ಇದರ ಬೆನ್ನಲ್ಲೇ ಮದ್ಯ ಹಾಗೂ ವಿದ್ಯುತ್ ದರದಲ್ಲಿ ಏರಿಕೆಯಾಗುವಂತಹ ಮಾತುಗಳು ಕೇಳಿಬಂದಿರುವ ಹಿನ್ನಲೆ ಇದೀಗ ಬಿಜೆಪಿ (BJP) ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಬೆಲೆ ಏರಿಕೆ (Price rise) ಪಟ್ಟಿ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಇವೆಲ್ಲದರ ಬೆಲೆ ಹೆಚ್ಚಾಗಲಿದ್ದು, ಕಾಂಗ್ರೆಸ್‌ನ ಗ್ಯಾರಂಟಿಗಳ ಸೈಡ್ ಎಫೆಕ್ಟ್ ಎಂದು ಕಾಲೆಳೆದಿದೆ. 

ಇಷ್ಟಕ್ಕೂ ಬಿಜೆಪಿ ಟ್ವೀಟ್ ನಲ್ಲೇನಿದೆ?
ರಾಜ್ಯದಲ್ಲಿ ಎಟಿಎಂ ಸರ್ಕಾರದಿಂದ ವರದಿ ಬಿಡುಗಡೆಯಾಗಿದ್ದು, ಅದರಲ್ಲಿ ಇಂದಿನ ಬೆಲೆ ಏರಿಕೆಗಳೆಂದರೆ, ನೀರು- ವಿದ್ಯುತ್ ದರ ಏರಿಕೆ ಬೆನ್ನಲ್ಲೇ ನೀರಿನ ದರ ಹೆಚ್ಚಳ. ಮದ್ಯ – 10 ರಿಂದ 20 ರೂ. ಏರಿಕೆ ಎಂದು ಟ್ವೀಟ್ ಮಾಡಿದೆ. ಅಲ್ಲದೆ ಮುಂದಿನ ಬೆಲೆ ಏರಿಕೆಗಳೆಂದರೆ, ಹಾಲು – ಪ್ರತಿ ಲೀಟರ್‌ಗೆ 5 ರೂ. ಏರಿಕೆ (ಗ್ಯಾರಂಟಿ). ಬಿಎಂಟಿಸಿ – 18% ರಿಂದ 20% ರಷ್ಟು ಏರಿಕೆ (ಖಚಿತ). ಕೆಎಸ್‌ಆರ್‌ಟಿಸಿ – ಸಾಮಾನ್ಯ ಬಸ್ ಕನಿಷ್ಠ 15% ಏರಿಕೆ (ನಿಶ್ಚಿತ). ಪೆಟ್ರೋಲ್/ಡೀಸೆಲ್ – ರಾಜ್ಯದ ತೆರಿಗೆ 5% ರಷ್ಟು ಹೆಚ್ಚಳ (ಖಂಡಿತ) ಎಂದು ಟೀಕಿಸಿದೆ. 

ಗ್ಯಾರಂಟಿಗಳ ಹೊರೆಯನ್ನು ಸಮತೋಲನ ಮಾಡೋ ಪ್ರಯತ್ನದಲ್ಲಿ ಬೆಲೆ ಏರಿಕೆಗಳನ್ನು ಮಾಡುತ್ತದೆ. ಇದು ಕಾಂಗ್ರೆಸ್ ಗ್ಯಾರಂಟಿಗಳ ಸೈಡ್ ಎಫೆಕ್ಟ್ ಎಂದು ಕಿಡಿಕಾರಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು: ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್, ಫ್ಲೈಓವರ್'ಗಳು ಬಂದ್

ಮೇ ತಿಂಗಳ ಭಾರತ-ಪಾಕಿಸ್ತಾನ ಸಂಘರ್ಷ ವೇಳೆ ಮಧ್ಯಸ್ಥಿಕೆ ವಹಿಸಿದ್ದು ನಾವೇ: ಚೀನಾ

ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಪುನರ್ವಸತಿ: BJP ಆರೋಪ "ರಾಜಕೀಯ ಹೇಳಿಕೆ"

ಭಾರತೀಯ ರೈಲ್ವೆ ಇತಿಹಾಸದಲ್ಲಿ ಮಹತ್ತರ ಸಾಧನೆ: ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್ ; ವಿಡಿಯೋ ಹಂಚಿಕೊಂಡ ಅಶ್ವಿನಿ ವೈಷ್ಣವ್

New Year ಗೆ ಆನ್ ಲೈನ್ ಫುಡ್ ಆರ್ಡರ್ ಗೆ ಸಮಸ್ಯೆ: ಒಕ್ಕೂಟಗಳಿಂದ ಇಂದು ಮೆಗಾ ಪ್ರತಿಭಟನೆ, 1.5 ಲಕ್ಷ ಕಾರ್ಮಿಕರು ಭಾಗಿ

SCROLL FOR NEXT