ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ ತಂತ್ರಗಾರಿಕೆ ಜೋರಾಗಿದೆ. ಚುನಾವಣೆ ಎದುರಿಸಲು ಹೊಸ ತಂಡವನ್ನ ರಚಿಸಿದ್ದು, ಕಮಲ ನಾಯಕರ ಹೆಗಲಿಗೆ ಪ್ರಮುಖ ಜವಾಬ್ದಾರಿ ವಹಿಸಲಾಗಿದೆ.
ಕರ್ನಾಟಕ ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಮತ್ತು ಚುನಾವಣಾ ನಿರ್ವಹಣಾ ಸಮಿತಿಗೆ ಅಧ್ಯಕ್ಷರು, ಸಂಚಾಲಕರನ್ನ ನೇಮಿಸಲಾಗಿದೆ. ಪ್ರಚಾರ ಸಮಿತಿಗೆ 25 ಸದಸ್ಯರು, ಚುನಾವಣಾ ನಿರ್ವಹಣಾ ಸಮಿತಿಯಲ್ಲಿ 14 ಸದಸ್ಯರನ್ನ ನೇಮಕ ಮಾಡಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ. ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ನೇಮಿಸಲಾಗಿದೆ. ಪ್ರಚಾರ ಸಮಿತಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ಎರಡಲ್ಲೂ ಸಚಿವ ವಿ.ಸೋಮಣ್ಣರಿಗೆ ಸ್ಥಾನಮಾನ ಸಿಕ್ಕಿಲ್ಲ.
ಇದನ್ನೂ ಓದಿ: ನಾನು ಹಳ್ಳಿಯಿಂದ ಬಂದವನು, 45 ವರ್ಷಗಳಿಂದ ಮಣ್ಣು ಹೊರುತ್ತಿದ್ದೇನೆ; ಒಂದು ಸಣ್ಣ ಅವಮಾನವಾದರೂ ಸಹಿಸಲಾಗದು: ಸೋಮಣ್ಣ
ಸಚಿವ ವಿ. ಸೋಮಣ್ಣ ಬಿಜೆಪಿಗೆ ಕೈ ಕೊಟ್ಟು ಕಾಂಗ್ರೆಸ್ ಸೇರುತ್ತಾರೆ ಅನ್ನೋ ವಿಚಾರ ರಾಜ್ಯ ರಾಜಕೀಯ ವಲಯದಲ್ಲಿ ಕಳೆದ 15 ದಿನ ಗಳಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ಪಡಸಾಲೆಯಲ್ಲಿ ದೊಡ್ಡ ಮಟ್ಟದ ಚರ್ಚೆ ಎದುರಾಗಿದ್ದು, ಹೊಸ ಹೊಸ ಲೆಕ್ಕಾಚಾರಗಳು ಸಹ ಜೋರಾಗಿದೆ. ಸೋಮಣ್ಣ ಕೂಡ ಕೊಂಚ ಸೈಲೆಂಟಾಗಿ ಇದ್ದಾರೆ