ರಾಜಕೀಯ

ಹಿರಿಯ ನಾಯಕನನ್ನು ಈ ರೀತಿ ಟಿಶ್ಯೂ ಪೇಪರ್ ನ ಹಾಗೆ ಬಳಸಿ ಎಸೆಯುವುದು ಸ್ವಾಭಿಮಾನಿ ಕನ್ನಡಿಗರಿಗೆ ಅವಮಾನವಲ್ಲವೇ: ಬಿಜೆಪಿ ಟೀಕೆ

Sumana Upadhyaya

ಬೆಂಗಳೂರು: ಕರ್ನಾಟಕ ಮೂಲದ ಹಿರಿಯ ರಾಜಕಾರಣಿ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ನಾಮಕಾವಸ್ತೆ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲಾಗಿದೆ, ಗಾಂಧಿ ಕುಟುಂಬವೇ ಅಧಿಕಾರ ಚಲಾಯಿಸುತ್ತದೆ ಎಂದು ಬಿಜೆಪಿ ನಾಯಕರು ಆಗಾಗ ಟೀಕಿಸುವುದುಂಟು.

ಇದೀಗ ವಿಡಿಯೊವೊಂದನ್ನು ಹರಿಬಿಟ್ಟು ಮಲ್ಲಿಕಾರ್ಜುನ ಖರ್ಗೆಯವರನ್ನು ಟಿಶ್ಯೂ ಪೇಪರಂತೆ ಬಳಸಲಾಗುತ್ತದೆ, ಇದು ಸ್ವಾಭಿಮಾನಿ ಕನ್ನಡಿಗರಿಗೆ ಅವಮಾನವಲ್ಲವೇ ಎಂದು ವಿಧಾನಸಭೆ ಚುನಾವಣೆ ಹೊತ್ತಲ್ಲಿ ಟೀಕಿಸಿದೆ.

ಯುವರಾಜ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಿಗೆ ನೀಡುತ್ತಿರುವ ಗೌರವ ಮರ್ಯಾದೆಯನ್ನೊಮ್ಮೆ ನೋಡಿ ಎಂದು ಬಿಜೆಪಿ ಕರ್ನಾಟಕ ಟ್ವಿಟ್ಟರ್ ಪೇಜ್ ನಲ್ಲಿ ವಿಡಿಯೊ ಹರಿಬಿಡಲಾಗಿದೆ.

SCROLL FOR NEXT