ರಾಜಕೀಯ

ಬಿಜೆಪಿ ಪ್ರಣಾಳಿಕೆಯು ಭಗವದ್ಗೀತೆಯಷ್ಟೇ ಪವಿತ್ರ, ಪೂರೈಸಬಹುದಾದ ಭರವಸೆಗಳನ್ನಷ್ಟೇ ನಾವು ನೀಡುತ್ತೇವೆ: ಡಾ. ಕೆ.ಸುಧಾಕರ್

Manjula VN

ಬೆಂಗಳೂರು: ಬಿಜೆಪಿ ಪಾಲಿಗೆ ಚುನಾವಣಾ ಪ್ರಣಾಳಿಕೆ ಪವಿತ್ರ ಭಗವದ್ಗೀತೆ ಇದ್ದಂತೆ. ಅಧಿಕಾರಕ್ಕೆ ಬಂದ ನಂತರ ನಾವು ನೀಡಬಹುದಾದ ಭರವಸೆಗಳನ್ನು ಮಾತ್ರ ನೀಡುತ್ತೇವೆ. ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸೋಮವಾರ ಹೇಳಿದರು..

ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದ ಪ್ರಣಾಳಿಕೆ ಕರಡು ರೂಪಿಸಲು ಆರೋಗ್ಯ, ವೈದ್ಯಕೀಯ ಶಿಕ್ಷಣ, ಫಾರ್ಮಾ, ನರ್ಸಿಂಗ್ ಮತ್ತು ಸಂಬಂಧಿತ ವಿಜ್ಞಾನಗಳ ತಜ್ಞರಿಂದ ಸಲಹೆಗಳನ್ನು ಪಡೆಯಲು ಸೋಮವಾರ ನಗರದಲ್ಲಿ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಅವರು, ನಾವು ಅನೇಕ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇವೆ. ರಾಜ್ಯದಾದ್ಯಂತ ಜನರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಬಿಜೆಪಿಯಲ್ಲಿ ಪ್ರತಿಯೊಬ್ಬರ ಆಲೋಚನೆಗಳು ಮತ್ತು ಕನಸುಗಳಿಗೆ ನಾವು ಜಾಗವಿದೆ ಎಂದು ಹೇಳಿದರು.

ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ಉತ್ತರ ಪ್ರದೇಶದ ನಂತರ ಕರ್ನಾಟಕ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 67 ಕಾಲೇಜುಗಳಿದ್ದು, 11,000 ಎಂಬಿಬಿಎಸ್ ಮತ್ತು 5,000 ಪಿಜಿ ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ವೈದ್ಯರ ಕೊರತೆ ಇಲ್ಲ. ಆದರೆ, ಕೆಲವು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಬೇಕಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮಾತನಾಡಿ, ನೀಡಿದ ಭರವಸೆಗಳನ್ನು ಈಡೇರಿಸಲು ಅಸಾಧ್ಯವಾದ ಉಚಿತ ಕೊಡುಗೆಗಳನ್ನು ಘೋಷಿಸುವ ಕಾಂಗ್ರೆಸ್ ಪ್ರಣಾಳಿಕೆಗಿಂತ ಬಿಜೆಪಿ ಪ್ರಣಾಳಿಕೆ ಭಿನ್ನವಾಗಿದೆ. ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಬದ್ಧತೆ ಇದೆ ಎಂದು ಹೇಳಿದರು.

SCROLL FOR NEXT