ಧರ್ಮೇಂದ್ರ ಪ್ರಧಾನ್ 
ರಾಜಕೀಯ

ಸಾಮಾಜಿಕ ನ್ಯಾಯ ಬಿಜೆಪಿಗೆ ಗೆಲುವು ಖಚಿತಪಡಿಸಲಿದೆ: ಧರ್ಮೇಂದ್ರ ಪ್ರಧಾನ್ (ಸಂದರ್ಶನ)

ಈ ಬಾರಿ ಕಲ್ಪಿಸಲಾದ ಸಾಮಾಜಿಕ ನ್ಯಾಯದ ವಿಧಾನಗಳು ಬಿಜೆಪಿಗೆ ಹೆಚ್ಚುವರಿ ಸಾಮಾಜಿಕ ನೆಲೆಯನ್ನು ಸೃಷ್ಟಿಸುತ್ತದೆ ಮತ್ತು ಬಿಜೆಪಿ ಗೆಲುವನ್ನು ಖಾತರಿಪಡಿಸುತ್ತದೆ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್...

ಬೆಂಗಳೂರು: ಈ ಬಾರಿ ಕಲ್ಪಿಸಲಾದ ಸಾಮಾಜಿಕ ನ್ಯಾಯದ ವಿಧಾನಗಳು ಬಿಜೆಪಿಗೆ ಹೆಚ್ಚುವರಿ ಸಾಮಾಜಿಕ ನೆಲೆಯನ್ನು ಸೃಷ್ಟಿಸುತ್ತದೆ ಮತ್ತು ಬಿಜೆಪಿ ಗೆಲುವನ್ನು ಖಾತರಿಪಡಿಸುತ್ತದೆ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣೆಗೆ ಆರು ದಿನ ಬಾಕಿ ಇದೆ, ಪರಿಸ್ಥಿತಿ ಬಿಜೆಪಿಯ ಪರವಾಗಿದೆಯೇ?
ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಇತರ ಹಿರಿಯ ನಾಯಕರ ಮನವಿಯಂತೆ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸದಲ್ಲಿದೆ. ಕರ್ನಾಟಕದ ಜನತೆಯ ಆಶೀರ್ವಾದ ಸಿಗುವ ವಿಶ್ವಾಸವಿದೆ. ಬಿಜೆಪಿ ಮತ್ತು ಅದರ ನಾಯಕತ್ವದಲ್ಲಿ, ವಿಶೇಷವಾಗಿ ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಎಸ್ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಕರ್ನಾಟಕ ಸರ್ಕಾರ ಮಾಡಿದ ಉತ್ತಮ ಕೆಲಸಗಳ ಮೇಲೆ ಜನರು ವಿಶ್ವಾಸವಿಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಈ ಎಲ್ಲಾ ಒಳ್ಳೆಯ ಕೆಲಸಗಳು ಹೊಸ ಬಿಜೆಪಿ ಸರ್ಕಾರವನ್ನು ಮರು ಆಯ್ಕೆ ಮಾಡಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಆದರೆ ಹಲವು ಸಮೀಕ್ಷೆಗಳು ಕಾಂಗ್ರೆಸ್ ಪರ ಒಲವು ತೋರುತ್ತಿವೆ?
ಇದು ವಾಸ್ತವ ಎಂದು ನಾನು ಭಾವಿಸುವುದಿಲ್ಲ. ಕೆಲವು ಸಮೀಕ್ಷೆಗಳೂ ಬಿಜೆಪಿ ಪರ ಒಲವು ತೋರುತ್ತಿವೆ. ಯಾವ ಸಮೀಕ್ಷೆ ಏನನ್ನು ತೋರಿಸುತ್ತಿವೆ ಎಂಬ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ವಾಸ್ತವವೆಂದರೆ ಕಾಂಗ್ರೆಸ್‌ ಗೆ ಯಾವುದೇ ವಿಷಯ ಇಲ್ಲ. ಬಿಜೆಪಿ ಅಭಿವೃದ್ಧಿ ರಾಜಕಾರಣ ಮಾಡುತ್ತಿದೆ. ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಜನತೆ ನಂಬಿಕೆ ಇಡುತ್ತಾರೆ ಎಂಬ ವಿಶ್ವಾಸ ನನಗಿದೆ. ಕಳೆದ 75 ವರ್ಷಗಳಲ್ಲಿ ಕರ್ನಾಟಕದ ನಾಗರಿಕರು ಎಲ್ಲವನ್ನೂ ಅನುಭವಿಸಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಹಳ ಕಾಲ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಆ ದಿನಗಳಲ್ಲಿ ಅವರು ಕರ್ನಾಟಕಕ್ಕೆ ಏನು ಮಾಡಿದ್ದಾರೆ? 2013 ರಿಂದ 2018 ರವರೆಗೆ ಅಧಿಕಾರದಲ್ಲಿದ್ದಾಗ ಅವರು ಏನು ಮಾಡಿದರು?

ಕರ್ನಾಟಕದಲ್ಲಿ ಬಿಜೆಪಿಗೆ ಸಹಾಯ ಮಾಡುವ ಅಂಶಗಳು ಯಾವುವು?
ಹಲವಾರು ಅಂಶಗಳಿವೆ. ಬಿಜೆಪಿಯ ಯೋಜನೆ, ನೀತಿ ಮತ್ತು ನಾಯಕತ್ವದಲ್ಲಿ ಜನರಿಗೆ ನಂಬಿಕೆ ಇದೆ. ಅದಕ್ಕಾಗಿಯೇ ‘ಡಬಲ್ ಇಂಜಿನ್ ಸರ್ಕಾರ’ ಎಂಬ ಘೋಷಣೆ. 2013 ರಿಂದ 2018 ರವರೆಗೆ ಕಾಂಗ್ರೆಸ್ ಕರ್ನಾಟಕವನ್ನು ತಮ್ಮ ‘ಎಟಿಎಂ’ ಮಾಡಿಕೊಂಡಿತ್ತು ಎಂಬುದು ಜನರಿಗೆ ತಿಳಿದಿದೆ. ಈ ಬಾರಿ ನಮ್ಮ ಸರ್ಕಾರ ಕಲ್ಪಿಸಿದ ಸಾಮಾಜಿಕ ನ್ಯಾಯದ ವಿಧಾನಗಳು ಬಿಜೆಪಿ ಹೊಸ ಕ್ಷೇತ್ರಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಸಹಾಯ ಮಾಡಿದೆ. ಎಸ್ಸಿ ಸಮುದಾಯದ ಬಹುಕಾಲದ ಬೇಡಿಕೆಯಾದ ಒಳ ಮೀಸಲಾತಿಯನ್ನು ಜಾರಿಗೆ ತಂದಿದ್ದೇವೆ. ದೇಶದಲ್ಲಿ ಮೊದಲ ಬಾರಿಗೆ, ನಾವು ಎಸ್‌ಟಿಗಳ ಕೋಟಾವನ್ನು ಶೇ. 3 ರಿಂದ 7 ಕ್ಕೆ ಮತ್ತು ಎಸ್ ಸಿ ಗಳ ಮೀಸಲಾತಿಯನ್ನು ಶೇ. 15 ರಿಂದ 17ಕ್ಕೆ ಹೆಚ್ಚಿಸಿದ್ದೇವೆ. ನಾವು ಅಸಂವಿಧಾನಿಕ ಧರ್ಮಾಧಾರಿತ ಮೀಸಲಾತಿಯನ್ನು ರದ್ದುಪಡಿಸಿದ್ದೇವೆ ಮತ್ತು ಅದನ್ನು ಲಿಂಗಾಯತರು ಮತ್ತು ಒಕ್ಕಲಿಗರಲ್ಲಿ ಮರುಹಂಚಿಕೆ ಮಾಡಿದ್ದೇವೆ. ಈ ರೀತಿಯ ವಿಧಾನವು ಬಿಜೆಪಿಗೆ ಹೆಚ್ಚುವರಿ ಸಾಮಾಜಿಕ ನೆಲೆಯನ್ನು ಸೃಷ್ಟಿಸುತ್ತದೆ. ಸಾಮಾಜಿಕ ನ್ಯಾಯ ನಮಗೆ ಗೆಲವು ಖಾತರಿಪಡಿಸುತ್ತದೆ ಎಂದಿದ್ದಾರೆ.

ಲಿಂಗಾಯತರು ಬಿಜೆಪಿಯಿಂದ ದೂರವಾಗುತ್ತಿದ್ದಾರೆ ಎನ್ನುತ್ತಿದೆ ಕಾಂಗ್ರೆಸ್?
ಮೇ 13ರಂದು (ಚುನಾವಣಾ ಫಲಿತಾಂಶದ ದಿನ) ಎಲ್ಲವೂ ಸ್ಪಷ್ಟವಾಗಲಿದೆ. ಮಾಜಿ ಸಿಎಂ ವೀರೇಂದ್ರ ಪಾಟೀಲ್ ಅವರಿಗೆ ಕಾಂಗ್ರೆಸ್ ಮಾಡಿದ್ದನ್ನು ಕರ್ನಾಟಕದ ಜನರು, ವಿಶೇಷವಾಗಿ ಲಿಂಗಾಯತ ಸಮುದಾಯ ಮರೆತಿಲ್ಲ. ಲಿಂಗಾಯತ ಸಿಎಂಗಳೆಲ್ಲ ಭ್ರಷ್ಟರು ಎಂದು ಅವರ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಇಡೀ ಸಮುದಾಯದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

ಪ್ರಧಾನಿ ಮೋದಿಯವರ ರ್ಯಾಲಿಗಳು ಬಿಜೆಪಿ ಗೆಲುವಿಗೆ ಕಾರಣವಾಗಬಹುದೇ?
ನಿಸ್ಸಂಶಯವಾಗಿ, ಪ್ರಧಾನಿ ಮೋದಿ ನಮ್ಮ ಪ್ರಚಾರ ತಂತ್ರದ ಪ್ರಮುಖರು. ನಾವು ಮಾಡಿದ ಕೆಲಸಗಳು, ಈಡೇರಿಸಬೇಕಾದ ಆಶಯಗಳು, ಈಡೇರಿಸಿರುವ ಭರವಸೆಗಳನ್ನು ಮುಂದಿಟ್ಟುಕೊಂಡು ಜನರಿಗೆ ವಿವರಿಸುತ್ತಿದ್ದಾರೆ. ಪ್ರಧಾನಿ ಅವರೇ ಕರ್ನಾಟಕದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಅಲ್ಲದೆ ಸಿಎಂ ಬೊಮ್ಮಾಯಿ, ಹಿರಿಯ ನಾಯಕ ಯಡಿಯೂರಪ್ಪ, ರಾಷ್ಟ್ರೀಯ ನಾಯಕರಾದ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ನಾಯಕರೂ ಪ್ರಚಾರ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ತಾರತಮ್ಯ ಮಾಡುವುದಿಲ್ಲ ಎಂದು ಹೇಳುತ್ತದೆ, ಆದರೆ ನಿಮ್ಮ ಪ್ರಣಾಳಿಕೆಯು ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ಮಾತ್ರ ಉಚಿತ ಎಲ್‌ಪಿಜಿ ಸಿಲಿಂಡರ್‌ ನೀಡುತ್ತೇವೆ ಎಂದಿದ್ದು ಏಕೆ?
ಹಬ್ಬಗಳು ನಮ್ಮ ಸಮಾಜದ ಭಾಗವಾಗಿವೆ ಮತ್ತು ಅದನ್ನು ನಾವು ಪ್ರತಿಯೊಬ್ಬರಿಗೂ ನೀಡುತ್ತೇವೆ. ಯುಗಾದಿ ಎಲ್ಲರಿಗೂ ಹಬ್ಬ. ಇದು ಹೊಸ ವರ್ಷ. ತಾರತಮ್ಯದಿಂದ ಯಾವುದೇ ಪ್ರಯೋಜನವಿಲ್ಲ. ತಾರತಮ್ಯ ಎಲ್ಲಿದೆ? ನಾವು XYZ ಗೆ ಸಿಲಿಂಡರ್ಗಳನ್ನು ನೀಡುತ್ತೇವೆ ಅಥವಾ ABC ಗೆ ನೀಡುತ್ತೇವೆ ಎಂದು ಹೇಳಿದರೆ ಅದು ತಾರತಮ್ಯವಾಗಿದೆ ಎಂದರು.

ಇಷ್ಟೊಂದು ಅಭ್ಯರ್ಥಿಗಳನ್ನು ಬದಲಾಯಿಸುವುದರ ಹಿಂದಿನ ತರ್ಕವೇನು? ಇದು ಆಡಳಿತ ವಿರೋಧಿ ಅಲೆ ಸೋಲಿಸುವುದಕ್ಕಾಗಿಯೇ?
... ಇಲ್ಲದಿದ್ದರೆ ಹೊಸತನವಿಲ್ಲ ಎಂದು ಹೇಳುತ್ತಿದ್ದಿರಿ. ಸಮಾಜ ತಾಜಾತನ, ಹೊಸತನ ಮತ್ತು ಹೊಸ ಪೀಳಿಗೆ ಬದಲಾವಣೆಯನ್ನು ನಿರೀಕ್ಷಿಸುತ್ತದೆ. ಬಿಜೆಪಿ ಕ್ರಿಯಾತ್ಮಕ ಮತ್ತು ಅತ್ಯಂತ ಪ್ರಗತಿಪರ ಪಕ್ಷವಾಗಿದೆ. ವೈಜ್ಞಾನಿಕ ಮತ್ತು ಹೊಸ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಸಮಾಜ ಈ ವಿಧಾನವನ್ನು ಸ್ವಾಗತಿಸುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT