ರಾಜಕೀಯ

ಪಕ್ಷಗಳ ಪ್ರಣಾಳಿಕೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಭರಪೂರ ಭರವಸೆ, ಆದರೆ ವಿಶೇಷತೆಯಿಲ್ಲ: ತಜ್ಞರ ಅಭಿಮತ

Sumana Upadhyaya

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ನೀಡಿರುವ ಆರೋಗ್ಯ ಭರವಸೆಗಳು ಸಾಮಾನ್ಯವಾಗಿದ್ದು, ಕರ್ನಾಟಕದ ಆರೋಗ್ಯ ಸೂಚ್ಯಂಕವನ್ನು ಸುಧಾರಿಸುವಲ್ಲಿ ಕೊಡುಗೆ ನೀಡುವ ಸಾಧ್ಯತೆಗಳು ಕಡಿಮೆ, ಪ್ರಣಾಳಿಕೆಯಲ್ಲಿ ವಿಶೇಷತೆ ಕಂಡುಬರುತ್ತಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖ ನಾಲ್ಕು ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಎಎಪಿಯ ಹೆಚ್ಚಿನ ಭರವಸೆಗಳು ಸಾರ್ವತ್ರಿಕವಾಗಿವೆ ಮತ್ತು ಆರೋಗ್ಯ ಸಂಬಂಧಿ ನಿರ್ದಿಷ್ಟ ಕೇಂದ್ರೀಕೃತವಾಗಿಲ್ಲ. ಆರೋಗ್ಯ ವೆಚ್ಚವನ್ನು ಶೇಕಡಾ 5 ರಷ್ಟು ಹೆಚ್ಚಿಸುವ ಕಾಂಗ್ರೆಸ್‌ನ ಭರವಸೆಯು ಹಣವನ್ನು ನಿಖರವಾಗಿ ಎಲ್ಲಿ ಹೂಡಿಕೆ ಮಾಡಲಾಗುವುದು ಎಂಬುದನ್ನು ವ್ಯಾಖ್ಯಾನಿಸುವುದಿಲ್ಲ. ಪ್ರತಿ ವಾರ್ಡ್‌ನಲ್ಲಿ ನಮ್ಮ ಚಿಕಿತ್ಸಾಲಯಗಳನ್ನು ಸ್ಥಾಪಿಸುವುದಾಗಿ 2022 ರ ರಾಜ್ಯ ಬಜೆಟ್‌ನಲ್ಲಿ ಮಾಡಿರುವ ಘೋಷಣೆಯನ್ನು ಈಗಾಗಲೇ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಸತ್ವ ಸ್ಪೆಷಾಲಿಟಿ ಕ್ಲಿನಿಕ್ ಮತ್ತು ಪ್ರಿವೆಂಟಿವ್ ಕೇರ್‌ನ ಸಂಸ್ಥಾಪಕ ಡಾ ವಿಶ್ವನಾಥ್ ಬಿ ಎಲ್ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.

ಜಯದೇವದಂತಹ ಹೆಚ್ಚಿನ ಆಸ್ಪತ್ರೆಗಳನ್ನು ಸ್ಥಾಪಿಸುವುದು ಅಥವಾ ಮೊಹಲ್ಲಾ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಪಕ್ಷಗಳು ಪ್ರಣಾಳಿಕೆಯಲ್ಲಿ ಹೇಳಿರುವುದು ಕೆಲವು ಭರವಸೆಗಳು ಆಶಾದಾಯಕವಾಗಿ ಕಾಣುತ್ತಿಲ್ಲ. ಕರ್ನಾಟಕದ ಆರೋಗ್ಯ ಕ್ಷೇತ್ರದ ಪ್ರಸ್ತುತ ಸ್ಥಿತಿ ಅತ್ಯಂತ ಕಳಪೆಯಾಗಿದೆ, ಕರ್ನಾಟಕದ ಜನತೆಯನ್ನು ರಕ್ತಹೀನತೆ ಮುಕ್ತಗೊಳಿಸುವುದು ಮತ್ತು ಆಯುಷ್ಮಾನ್ ನ್ನು ಹೆಚ್ಚಿಸುವಂತಹ ಇತರ ಭರವಸೆಗಳನ್ನು ವೈದ್ಯರು ನೀಡಿದ್ದಾರೆ. ಭಾರತ್- ಆರೋಗ್ಯ ಕರ್ನಾಟಕ ವಿಮೆ ಕೂಡ ಹೆಚ್ಚಿನ ಸುಧಾರಣೆಯನ್ನು ಜನತೆಗೆ ತೋರಿಸುತ್ತಿಲ್ಲ. 

ಕರ್ನಾಟಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಪ್ರಸ್ತುತ ಸರ್ಕಾರದ ಪ್ರಯತ್ನಗಳನ್ನು ತ್ವರಿತಗೊಳಿಸಬೇಕೆಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಹೆಚ್ಚಿನ ಜಿಲ್ಲಾ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳು ಸ್ವಾಧೀನಪಡಿಸಿಕೊಳ್ಳುತ್ತಿದ್ದು, ಇದು ದೀರ್ಘಾವಧಿಯಲ್ಲಿ ಸೇವೆಗಳ ವೆಚ್ಚವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕಿ ಮತ್ತು ಸಾರ್ವಜನಿಕ ಆರೋಗ್ಯ ವೈದ್ಯೆ ಡಾ.ಸಿಲ್ವಿಯಾ ಕರ್ಪಗಮ್ ಹೇಳುತ್ತಾರೆ. 

ಡಾ.ಕರ್ಪಗಂ ಅವರು ನಮ್ಮ ಕ್ಲಿನಿಕ್ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿಲ್ಲ, ಬದಲಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಸೇವೆಗಳನ್ನು ಸುಧಾರಿಸಬೇಕು ಎಂದು ಹೇಳುತ್ತಾರೆ. ಕ್ಲಿನಿಕ್‌ಗಳು ನಿರ್ದಿಷ್ಟ ಸಮಯಕ್ಕೆ (ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ) ತೆರೆದಿರುವುದರಿಂದ, ಇದು ಬಹಳಷ್ಟು ಜನರಿಗೆ ಉಪಯೋಗವಾಗುವುದಿಲ್ಲ ಎಂಬುದು ಅವರ ಅಭಿಮತ. 

ಮೂಲಸೌಕರ್ಯ, ಮಾನವ ಸಂಪನ್ಮೂಲ, ಸಲಕರಣೆಗಳ ಗುಣಮಟ್ಟ ಮತ್ತು ಉದ್ಯೋಗಿಗಳ ಕೌಶಲ್ಯ ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುವ ಸಮಗ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ವೈದ್ಯರು ಹೇಳುತ್ತಾರೆ.

SCROLL FOR NEXT