ರಾಜಕೀಯ

'ರಾಜಕೀಯದಿಂದ ನಿವೃತ್ತಿ ಬಯಸಿದ್ದೆ; ವರುಣಾದಿಂದ ಸ್ಪರ್ಧಿಸಿ ಎಂದು ಪ್ರಧಾನಿ ಹೇಳಿದಾಗ ಇಲ್ಲ ಎನ್ನಲಾಗಲಿಲ್ಲ'

Shilpa D

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ವರುಣಾದಲ್ಲಿ ಈ ಬಾರಿ ಸಿದ್ದರಾಮಯ್ಯ ಹಾಗೂ ಸೋಮಣ್ಣ ಸ್ಪರ್ಧೆ ಬಹು ಕೌತುಕದ ಸ್ಪರ್ಧೆಯಾಗಿದೆ. ಈ ನಿಟ್ಟಿನಲ್ಲಿ ಸಮೀಕ್ಷೆಗಳು ವರುಣಾದಲ್ಲಿ ಸಿದ್ದರಾಮಯ್ಯ ಗೆಲುತ್ತಾರೆ ಎಂದಿವೆ. ಆದರೆ ಬಿಜೆಪಿ ಈಗ ಹೊಸ ಆಟ ಶುರು ಮಾಡಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಗೆದ್ದಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ವಸತಿ ಸಚಿವ ವಿ ಸೋಮಣ್ಣ ಕಣಕ್ಕಿಳಿದಿದ್ದಾರೆ. ಇದೇ ನನ್ನ ಕೊನೆಯ ಚುನಾವಣೆ ಎಂದು ಮಾಜಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮೈಸೂರು ಜಿಲ್ಲೆಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಿ ಐದು ಬಾರಿ ಗೆದ್ದು ಶಾಸಕರಾಗಿದ್ದ ಸಿದ್ದರಾಮಯ್ಯ  ಎರಡು ಬಾರಿ ಸೋತಿದ್ದರು. ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಸ್ಪರ್ಧಿಸಿದ್ದರು. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಜಿ ಟಿ ದೇವೇಗೌಡ ವಿರುದ್ಧ ಸೋತರು ಆದರೆ ಬಾದಾಮಿಯಲ್ಲಿ ಬಿಜೆಪಿಯ ಬಿ ಶ್ರೀರಾಮುಲು ವಿರುದ್ಧ 1,696 ಮತಗಳ ಅಂತರದಿಂದ ಗೆದ್ದರು.

ಕೆಲ ದಿನಗಳ ಹಿಂದೆ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ, ನಾವು ವರುಣಾದಿಂದ ಸೋಮಣ್ಣ ಅವರನ್ನು ನಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ, ನೀವು (ಜನ) ಅವರನ್ನು ಶಾಸಕರನ್ನಾಗಿ ಮಾಡಿ ವಿಧಾನಸಭೆಗೆ ಕಳುಹಿಸಿ, ಬಿಜೆಪಿ ಅವರಿಗೆ ಉನ್ನತ ಹುದ್ದೆ ನೀಡುತ್ತದೆ ಎಂದು ಶಾ ಹೇಳಿದ್ದಾರೆ.

ಬೆಂಗಳೂರಿನ ಗೋವಿಂದರಾಜ ನಗರದಿಂದ ಶಾಸಕರಾಗಿದ್ದ 72 ವರ್ಷದ ಸೋಮಣ್ಣ ಅವರನ್ನು ವರುಣಾಗೆ ಶಿಫ್ಟ್ ಮಾಡಲಾಗಿದೆ , ಅವರ ಹಿಂದೆ ಸಂಘಪರಿವಾರ ತನ್ನೆಲ್ಲ ಶಕ್ತಿಯನ್ನು ಹಾಕಿದೆ. ಐದು ಬಾರಿ ಶಾಸಕರಾಗಿರುವ ಸೋಮಣ್ಣ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಿರಲಿಲ್ಲ, ರಾಜಕಾರಣದಿಂದ ಸೋಮಣ್ಣ ನಿವೃತ್ತಿ ಬಯಸಿದ್ದರು ಆದರೆ ಬಿಜೆಪಿಯ ಉನ್ನತ ನಾಯಕತ್ವವು ವರುಣಾ ಮತ್ತು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ  ಹೇಳಿದಾಗ ಬೇಡ ಎಂದು ಹೇಳಲು ಸಾಧ್ಯವಾಗಲಿಲ್ಲ ಎಂದು ಸೋಮಣ್ಣ ತಿಳಿಸಿದ್ದಾರೆ. ವರುಣಾದಿಂದ ಸ್ಪರ್ಧಿಸುವಂತೆ ಪ್ರಧಾನಿ ಹೇಳಿದಾಗ  ಬೇಡ ಎಂದು ಹೇಳಲು ಆಗಲಿಲ್ಲ, ಹಾಗಾಗಿ ಒಪ್ಪಿಕೊಂಡೆ.

ಎಂಟು ಬಾರಿ ಶಾಸಕರಾಗಿರುವ 75 ವರ್ಷ ವಯಸ್ಸಿನ ಸಿದ್ದರಾಮಯ್ಯ ಅವರು ತಮ್ಮ ಚುನಾವಣಾ ಭವಿಷ್ಯದ ಬಗ್ಗೆ ಉತ್ಸುಕರಾಗಿದ್ದಾರೆ. ‘ಮುಖ್ಯಮಂತ್ರಿಯಾಗಿ ಹಲವು ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದೇನೆ, ಇಲ್ಲಿ ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ, ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಇದಾದ ಬಳಿಕ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಲಿದ್ದೇನೆ’ ಎಂದು ತಿಳಿಸಿದ್ದಾರೆ.

SCROLL FOR NEXT