ರಾಜಕೀಯ

‘ಮೋದಿ ಜಾಕೆಟ್’ ಮಾತ್ರ ಫೇಮಸ್ ಎಂದ ಖರ್ಗೆ!

Nagaraja AB

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಜಾಕೆಟ್ ಮಾತ್ರ ಪ್ರಸಿದ್ಧವಾಗಿದೆ ಮತ್ತು ಅದನ್ನು ದಿನಕ್ಕೆ ನಾಲ್ಕು ಬಾರಿ ಬದಲಾಯಿಸುತ್ತಾರೆ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೊಡುಗೆ ವಿಷಯ ಪ್ರಸ್ತಾಪಿಸಿದ  ಖರ್ಗೆ, ಕಾಂಗ್ರೆಸ್‌ನವರು ತಮ್ಮ ಪ್ರಾಣ  ತ್ಯಾಗ ಮಾಡುತ್ತಿದ್ದಾಗ, ಆರ್‌ಎಸ್‌ಎಸ್ ನಾಯಕರು ಪ್ಲಮ್ ಸರ್ಕಾರಿ ಹುದ್ದೆ ಪಡೆಯುವಲ್ಲಿ ನಿರತರಾಗಿದ್ದರು ಎಂದು ಪ್ರತಿಪಾದಿಸಿದರು.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಮೋದಿ ಕೇಳುತ್ತಲೇ  ಇದ್ದಾರೆ, ಅರೆ ಭಾಯಿ, 70 ವರ್ಷಗಳಲ್ಲಿ ನಾವು ಏನನ್ನೂ ಮಾಡದಿದ್ದರೆ ನೀವು ಈ ದೇಶದ ಪ್ರಧಾನಿಯಾಗುತ್ತಿರಲಿಲ್ಲ. ನಾವು ಸ್ವಾತಂತ್ರ್ಯ ತಂದಿದ್ದೇವೆ. ಮಹಾತ್ಮಾ ಗಾಂಧಿಯವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದರು. 

ಮಹಾತ್ಮ ಗಾಂಧಿಯಿಂದ “ಗಾಂಧಿ ಟೋಪಿ’ ಖ್ಯಾತಿ ಪಡೆಯಿತು. ನೆಹರೂ ಅಂಗಿ ನೆಹರೂ ಅವರಿಂದಾಗಿ ಪ್ರಸಿದ್ಧವಾಯಿತು. ಮೋದಿ ಜಾಕೆಟ್ ಮಾತ್ರ ಪ್ರಸಿದ್ಧವಾಗಿದೆ. ಅವರು ಪ್ರತಿದಿನ ನಾಲ್ಕು ಜಾಕೆಟ್‌ಗಳನ್ನು ಧರಿಸುತ್ತಾರೆ.  ಕೆಂಪು, ಹಳದಿ, ನೀಲಿ ಮತ್ತು ಕೇಸರಿ. ಈಗ ಅದು ‘ಮೋದಿ ಜಾಕೆಟ್’ ಎಂದೇ ಫೇಮಸ್ ಆಗುತ್ತಿದೆ. ಕಾಂಗ್ರೆಸ್ ನಿಂದನೆಯಿಂದ ದೇಶ ಪ್ರಗತಿಯಾಗುತ್ತದೆಯೇ? ಎಂದು ಖರ್ಗೆ ಪ್ರಶ್ನಿಸಿದರು. 

ಭಾರತೀಯ ಸಂವಿಧಾನ ಬರೆಯಲು ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಕೇಳಿದ್ದೆ ಕಾಂಗ್ರೆಸ್, ಸಂವಿಧಾನ ಮತದಾನದ ಹಕ್ಕು ಸೇರಿದಂತೆ ಜನರಿಗೆ ಸಮಾನ ಹಕ್ಕುಗಳನ್ನು ನೀಡಿದೆ. ದಲಿತರು, ಆದಿವಾಸಿಗಳು ಹಾಗೂ ಇತರೆ ಹಿಂದುಳಿದ ಸಮುದಾಯದವರು ಪಂಚಾಯಿತಿ ಅಧ್ಯಕ್ಷರು, ಶಾಸಕರು, ಸಂಸದರು, ಮಂತ್ರಿಗಳಾಗುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ದೇಶಕ್ಕೆ ನೀಡಿದ ಸಂವಿಧಾನವೇ ಕಾರಣ  ಖರ್ಗೆ ಹೇಳಿದರು. 

ಆರ್‌ಎಸ್‌ಎಸ್ ಅಥವಾ ಬಿಜೆಪಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ. ಅದಕ್ಕಾಗಿ ನೀವ್ಯಾರೂ (ಬಿಜೆಪಿ/ಆರ್‌ಎಸ್‌ಎಸ್) ಜೈಲಿಗೆ ಹೋಗಿಲ್ಲ, ನಿಮ್ಮ ಪಕ್ಷದವರು ಯಾರೂ ಗಲ್ಲು ಶಿಕ್ಷೆಗೆ ಹೋಗಿಲ್ಲ ಎಂದು ಆರೋಪಿಸಿದ ಖರ್ಗೆ,ಕರ್ನಾಟಕದಿಂದ ಆಯ್ಕೆಯಾದ ಸಂಸದರು ಪ್ರಧಾನಿಯನ್ನು ಭೇಟಿ ಮಾಡಲು ಅವಕಾಶ ಸಿಗದ ಕಾರಣ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಪ್ರಧಾನಿ ಬಳಿ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು. 

SCROLL FOR NEXT