ಪ್ರಿಯಾಂಕ್ ಖರ್ಗೆ 
ರಾಜಕೀಯ

ಬಿಜೆಪಿ ನಾಯಕರು ತಮ್ಮ ನಾಲಿಗೆ ಮತ್ತು ಮೆದುಳಿನ ನಡುವಣ ಸಂಪರ್ಕವನ್ನು ಕಳೆದುಕೊಂಡಿದ್ದಾರೆ: ಪ್ರಿಯಾಂಕ್ ಖರ್ಗೆ

ಬಿಜೆಪಿ ನಾಯಕರು ತಮ್ಮ ನಾಲಿಗೆ ಹಾಗೂ ಮೆದುಳಿನ ನಡುವಿನ ಸಂಪರ್ಕವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಮಾತನಾಡುವ ಮೊದಲು ಅವರು ಯೋಚನೆ ಮಾಡುವುದಿಲ್ಲ. ಆದರೆ ಇನ್ನು ಮುಂದೆ ಮಾತನಾಡುವ ಮುನ್ನ ಬಿಜೆಪಿಯವರು ಬಹಳಷ್ಟು ಜಾಗೃತರಾಗಿರುವುದು ಅವಶ್ಯಕ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. 

ಬೆಂಗಳೂರು: ಬಿಜೆಪಿ ನಾಯಕರು ತಮ್ಮ ನಾಲಿಗೆ ಹಾಗೂ ಮೆದುಳಿನ ನಡುವಿನ ಸಂಪರ್ಕವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಮಾತನಾಡುವ ಮೊದಲು ಅವರು ಯೋಚನೆ ಮಾಡುವುದಿಲ್ಲ. ಆದರೆ ಇನ್ನು ಮುಂದೆ ಮಾತನಾಡುವ ಮುನ್ನ ಬಿಜೆಪಿಯವರು ಬಹಳಷ್ಟು ಜಾಗೃತರಾಗಿರುವುದು ಅವಶ್ಯಕ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. 

ಟಿಪ್ಪುವನ್ನು ಹೊಡೆದಾಕಿದಂಗೆ ಸಿದ್ದರಾಮಯ್ಯರನ್ನು ಹೊಡೆದಾಕಬೇಕು ಎಂದು ಹೇಳಿದ್ದ ಮಾಜಿ ಸಚಿವ, ಬಿಜೆಪಿ ಶಾಸಕ ಡಾ ಸಿಎನ್‌ ಅಶ್ವತ್ಥ ನಾರಾಯಣ ವಿರುದ್ಧ ಎಫ್‌ಐಆರ್‌ ದಾಖಲಾದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್‌ ಖರ್ಗೆ, ಬಿಜೆಪಿ ನಾಯಕರು ಮಾತನಾಡುವ ಮುನ್ನ ಯೋಚಿಸುವುದಿಲ್ಲ. ಏನೇನೋ ಮಾತನಾಡಿ ಅದರಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದ್ದಾರೆ ಎಂದರು.

ಇನ್ನು ಮುಂದೆ ಕರ್ನಾಟಕದಲ್ಲಿ ಆ ರೀತಿ ಆಗಲು ನಾವು ಬಿಡುವುದಿಲ್ಲ. ಅವರು ಏನು ಮಾತನಾಡುತ್ತಾರೆ ಎಂಬುದರ ಬಗ್ಗೆ ಬಹಳಷ್ಟು ಎಚ್ಚರಿಕೆ ವಹಿಸುವುದು ಅಗತ್ಯ ಎಂದರು. ಬಿಜೆಪಿ ನಾಯಕರು ಮಾತನಾಡುವುದು ಮಾತನಾಡಿದರೆ ನಮಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ನೀವು ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಕಚೇರಿಯನ್ನು ಕೀಳಾಗಿಸಿ ಮಾತನಾಡಿದರೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಪಿಎಫ್‌ಐ ಮತ್ತು ಬಜರಂಗದಳದ ಮೇಲೆ ನಿಷೇಧ ಹೇರಿರುವ ಕಾಂಗ್ರೆಸ್‌ ನಿಲುವಿನ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಬಗ್ಗೆ ಕೇಳಿದಾಗ, ಯಾವುದೇ ಧಾರ್ಮಿಕ, ರಾಜಕೀಯ ಅಥವಾ ಸಾಮಾಜಿಕ ಸಂಘಟನೆಗಳು ಅಸಮಾಧಾನ ಮತ್ತು ಅಸಂಗತತೆಯ ಬೀಜಗಳನ್ನು ಬಿತ್ತಲು ಹೊರಟಿವೆ. ಕರ್ನಾಟಕದಲ್ಲಿ ಸಹಿಸುವುದಿಲ್ಲ, ನಾವು ಅವರನ್ನು ಕಾನೂನಾತ್ಮಕವಾಗಿ ಮತ್ತು ಸಾಂವಿಧಾನಿಕವಾಗಿ ಎದುರಿಸುತ್ತೇವೆ - ಅದು ಬಜರಂಗದಳ, ಪಿಎಫ್‌ಐ ಅಥವಾ ಇನ್ನಾವುದೇ ಸಂಘಟನೆಯಾಗಿರಲಿ, ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದರೆ ನಾವು ಅವರನ್ನು ನಿಷೇಧಿಸಲು ಹಿಂಜರಿಯುವುದಿಲ್ಲ ಎಂದರು. 

ಆಮ್ನೆಸ್ಟಿ ಇಂಡಿಯಾ ಕರ್ನಾಟಕದಲ್ಲಿ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿರುವ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ, ನಮ್ಮ ನಿಲುವಿನ ಬಗ್ಗೆ ನಾವು ಸ್ಪಷ್ಟವಾಗಿದ್ದೇವೆ, ಕಾರ್ಯಕಾರಿ ಆದೇಶವನ್ನು ನಾವು ಪರಿಶೀಲಿಸುತ್ತೇವೆ, ಆರ್ಥಿಕ ನೀತಿಗಳಿಗೆ ಹಿನ್ನಡೆಯಾಗುವ ಯಾವುದೇ ಮಸೂದೆಯನ್ನು ನಾವು ಪರಿಶೀಲಿಸುತ್ತೇವೆ. ಕರ್ನಾಟಕ, ರಾಜ್ಯಕ್ಕೆ ಕೆಟ್ಟ ಹೆಸರು ತರುವ ಯಾವುದೇ ಮಸೂದೆ, ಆರ್ಥಿಕ ಚಟುವಟಿಕೆಗಳಿಗೆ ಬಳಕೆಯಾಗದ ಯಾವುದೇ ಮಸೂದೆ, ಉದ್ಯೋಗ ಸೃಷ್ಟಿಸದ ಯಾವುದೇ ಮಸೂದೆ, ವ್ಯಕ್ತಿಯ ಹಕ್ಕುಗಳನ್ನು ಉಲ್ಲಂಘಿಸುವ ಯಾವುದೇ ಮಸೂದೆ, ಸಂವಿಧಾನ ಬಾಹಿರವಾದ ಯಾವುದೇ ಮಸೂದೆಯನ್ನು ಪರಿಶೀಲಿಸಲಾಗುವುದು ಮತ್ತು ಅಗತ್ಯವಿದ್ದರೆ, ತಿರಸ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

19 ವರ್ಷಗಳ ಹಳೆಯ ದಾಖಲೆ ಉಡೀಸ್: ಅಭಿಷೇಕ್, ಪಾಂಡ್ಯ ಅಬ್ಬರ; ಜಿಂಬಾಬ್ವೆಗೆ 257 ರನ್‌ ಬೃಹತ್ ಮೊತ್ತದ ಗುರಿ ನೀಡಿದ ಭಾರತ!

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT