ಸುಮಲತಾ ಅಂಬರೀಷ್ 
ರಾಜಕೀಯ

ನಾನು ಮಂಡ್ಯ ಸೊಸೆ, ನಾನ್ಯಾಕೆ ಕ್ಷೇತ್ರ ಬಿಟ್ಕೊಡಲಿ: ಸಂಸದೆ ಸುಮಲತಾ ಅಂಬರೀಷ್

ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡಲ್ಲ. ಮುಂದೊಮ್ಮೆ ರಾಜಕಾರಣ ಬಿಡಬಹುದು ಆದರೆ  ಸ್ವಾಭಿಮಾನ, ಸಿದ್ದಾಂತ ಬಿಡಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪುನರುಚ್ಛರಿಸಿದ್ದಾರೆ. 

ಮಂಡ್ಯ: ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡಲ್ಲ. ಮುಂದೊಮ್ಮೆ ರಾಜಕಾರಣ ಬಿಡಬಹುದು ಆದರೆ  ಸ್ವಾಭಿಮಾನ, ಸಿದ್ದಾಂತ ಬಿಡಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪುನರುಚ್ಛರಿಸಿದ್ದಾರೆ. 

ಇಂದು ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಂಬರೀಶ್ ಕುಟುಂಬಕ್ಕೆ ಮಂಡ್ಯ ಜನರು ಸಾಕಷ್ಟು ಪ್ರೀತಿ ಕೊಟ್ಟು ಹರಸಿದ್ದಾರೆ, ಬೆಳೆಸಿದ್ದಾರೆ. ಹೀಗಾಗಿ ನಾನು ಮಂಡ್ಯ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ ಎಂದರು. 

ಜೆಡಿಎಸ್ ಬಿಜೆಪಿ ಮೈತ್ರಿ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ಜೆಡಿಎಸ್‌ ಬಿಜೆಪಿ ಮೈತ್ರಿ ಆಗಿದೆ ಆದರೆ ಕ್ಷೇತ್ರ ಹಂಚಿಕೆ ಇನ್ನೂ ಆಗಿಲ್ಲ. ಈಗ ಎದ್ದಿರುವ ಊಹಾಪೋಹಗಳಿಗೆ ಪ್ರತಿಕ್ರಿಯೆ ಕೊಡಲ್ಲ. ಈ ವಿಚಾರದಲ್ಲಿ ನಾನು ದುಡುಕಿನ ನಿರ್ಧಾರ ಮಾಡಲ್ಲ. ಮಂಡ್ಯ ಜನ ನನ್ನ ಜೊತೆ ಇದ್ದಾರೆ, ನನಗೆ ಆ ವಿಶ್ವಾಸ ಇದೆ. ಈ ಕ್ಷೇತ್ರ ಬೇಕು, ಆ ಕ್ಷೇತ್ರ ಬೇಕು ಎಂದು ಯಾವ ಪಕ್ಷವನ್ನು ಕೇಳಿಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆ ನನಗೆ ಯೋಚನೆ ಇಲ್ಲ. ಬೆಂಗಳೂರು ಉತ್ತರ ಆಫರ್  ಕಳೆದ ಚುನಾವಣೆಯಲ್ಲೇ ನಿರಾಕರಿಸಿದ್ದೆ. ನನಗೆ ಈ ಸ್ಥಾನಮಾನ ಕೊಟ್ಟಿದ್ದು ಮಂಡ್ಯ ಜನರು. ಬೇರೆ ಕ್ಷೇತ್ರದ ಆಫರ್ ಎಂದಿಗೂ ಒಪ್ಪಲ್ಲ. ಇದನ್ನು ನೂರಾರು ಬಾರಿ ಹೇಳಿದ್ದೇನೆ. ಇನ್ನು ರಕ್ತದಲ್ಲಿ ಬರೆದು ಕೊಡಬೇಕಾ? ಮಂಡ್ಯ ಜಿಲ್ಲೆ ರಾಜಕಾರಣ ಯಾವಾಗಲೂ ಚಾಲೆಂಜಿಂಗ್.ಚಾಲೆಂಜ್‌ಗೆ ಹೆದರುವ ಸ್ವಭಾವ ನನ್ನದ್ದಲ್ಲ ಎಂದರು.

ಎಂಪಿ ಚುನಾವಣೆ ಸಂಬಂಧ ನಾನು ಯಾವುದೇ ಸಿದ್ದತೆ ಮಾಡಿಕೊಂಡಿಲ್ಲ. ಸರಿಯಾದ ಸಮಯ ಸಂದರ್ಭ ನೋಡಿ, ಎಲ್ಲವೂ ಅಂತಿಮವಾದಾಗ ಹೇಳುತ್ತೇನೆ. ಈಗ ನಾನು ಚುನಾವಣೆ ಸಂಬಂಧ ಮಾತಾಡಲ್ಲ. ಮಂಡ್ಯದಲ್ಲಿ ಚುನಾವಣೆ ನಿಲ್ಲಲ್ಲ, ನಿಲ್ಲುತ್ತೇನೆ ಎಂಬುದರ ಬಗೆಗೆ ಈಗಾಗಲೇ ಹಲವು ಬಾರಿ ಮಾತಾಡಿದ್ದೇನೆ. ಬಿಜೆಪಿ-ಜೆಡಿಎಎಸ್ ಮೈತ್ರಿಯಾದರೂ ಸೀಟು ಹಂಚಿಕೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಅಂತಿಮವಾಗದೆ ನಾನು ಮಾತಾಡುವುದು ಸರಿಯಲ್ಲ. ಮಂಡ್ಯದ ಜನ ನನ್ನ ಜೊತೆಗೆ ಇದ್ದಾರೆ. ಅಂಬರೀಶ್ ಅಭಿಮಾನಿಗಳು, ನನ್ನ ಫಾಲೋವರ್ಸ್​​ಗಳು ನನ್ನ ಜೊತೆ ಇದ್ದಾರೆ. ನಾನು ಯಾರ ಬಳಿಯೂ ಹೋಗಿ ಟಿಕೆಟ್ ಕೇಳಿಲ್ಲ. ಈಗಲೂ ಅಷ್ಟೇ ಯಾರನ್ನೂ ಕೇಳಲ್ಲ. ನಾನು ಎಂಪಿ ಸ್ಥಾನ ಇಲ್ಲದೇ ಇರುವಾಗಲೇ ಪಕ್ಷಗಳ ಆಫರ್ ನಾನು ಸ್ವೀಕರಿಸಿಲ್ಲ. ಸದ್ಯ ಎಂಪಿ ಆಗಿದ್ದೀನಿ. ನಾನ್ಯಾಕೆ ಕ್ಷೇತ್ರ ಬಿಟ್ಟುಕೊಡಲಿ? ರಾಜಕಾರಣಕ್ಕಾಗಿ ಇಲ್ಲಿಗೆ ಬಂದಿಲ್ಲ. ಮಂಡ್ಯದ ಜನರಿಗಾಗಿ ಇಲ್ಲಿಗೆ ಬಂದಿರುವುದು ಎಂದರು.

ಇನ್ನು ಸಿಎಂ ಬದಲಾವಣೆ ಚರ್ಚೆ ವಿಚಾರ ಅದು  ಅವರವರ ಪಕ್ಷದ ಆಂತರಿಕ ವಿಚಾರ. ಆ ಬಗ್ಗೆ ನಾನು ಕಮೆಂಟ್ ಮಾಡಲ್ಲ. ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಹಾಗೂ ನೀರಿನ ಸಮಸ್ಯೆ ಇದೆ. ಅನುದಾನ ಸಿಗದ ಬಗ್ಗೆ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫ್ರೀ ಗ್ಯಾರಂಟಿ ಕೊಟ್ಟರೆ ಅಭಿವೃದ್ಧಿ ಕೆಲಸ ಆಗಲ್ಲ ಎಂದು ಮೊದಲೇ ಹೇಳಿದ್ದೆವು. ಈಗ ಅದೇ ಆಗುತ್ತಿದೆ. ಚುನಾವಣೆ ಗೆಲ್ಲುವ ಉದ್ದೇಶದಿಂದ ಬರೀ ಫ್ರೀ ಫ್ರೀ ಎಂದು ಕೊಟ್ಟರೆ ತೊಂದರೆ ಆಗುತ್ತದೆ. ಅಭಿವೃದ್ಧಿ ಕೆಲಸಗಳಿಗೆ ದುಡ್ಡು ಎಲ್ಲಿಂದ ತರ್ತೀರಾ? ಫಂಡ್ಸ್ ಹುಟ್ಸೋಕೆ ಆಗಲ್ಲ, ಇರೋದರಲ್ಲೇ ಅಭಿವೃದ್ಧಿ ಮಾಡಬೇಕು. ನೀವು ಉಚಿತ ಕೊಡುತ್ತಿರುವ ಯೋಜನೆಗಳಿಂದ ಜನರಿಗೆ ತೊಂದರೆ ಆಗುತ್ತದೆ. ಕಾಂಗ್ರೆಸ್ ಸರ್ಕಾರ ಕೂಡ ಗ್ಯಾರಂಟಿ‌ಗಳ ಚಾಲೆಂಜ್ ಫೇಸ್ ಮಾಡುತ್ತಿದೆ. ಕಾಂಗ್ರೆಸ್ ಉಚಿತ ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯಗಳಲ್ಲಿ ತೊಂದರೆ ಆಗಿರುವುದು ನಿಜ ಎಂದು ಸರ್ಕಾರವನ್ನು ಟೀಕಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT