ರಾಜಕೀಯ

ಎಲ್ಲಾ ಸಮುದಾಯಗಳು ತಮ್ಮ ನಾಯಕರು ಸಿಎಂ ಆಗಬೇಕು ಅಂತಾ ಬಯಸುತ್ತವೆ: ಸತೀಶ್ ಜಾರಕಿಹೊಳಿ

Nagaraja AB

ಬೆಂಗಳೂರು: ದಲಿತರು ಸೇರಿದಂತೆ ಎಲ್ಲ ಸಮುದಾಯದವರಿಂದ ತಮ್ಮ ನಾಯಕರೊಬ್ಬರು ಮುಖ್ಯಮಂತ್ರಿಯಾಗಬೇಕೆಂಬ ಬೇಡಿಕೆ ಇದೆ, ಆದರೆ ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಸೋಮವಾರ ಹೇಳಿದ್ದಾರೆ.

ವಾಲ್ಮೀಕಿ ಸಮುದಾಯದ ಸ್ವಾಮೀಜಿಯೊಬ್ಬರು ತಮ್ಮನ್ನು ಮುಖ್ಯಮಂತ್ರಿಯಾಗಿ ನೋಡಬೇಕೆಂಬ  ಹೇಳಿಕೆಗೆ ಅಷ್ಟಾಗಿ ಪ್ರಾಮುಖ್ಯತೆ ಕೊಡದಂತೆ ಪ್ರಯತ್ನಿಸಿದ ಸತೀಶ್ ಜಾರಕಿಹೊಳಿ, ಇದು ಹಳೆಯ ವಿಷಯ, ಈ ಹಿಂದೆಯೂ ವಿವಿಧ ಕಾರ್ಯಕ್ರಮಗಳು ಮತ್ತು ವೇದಿಕೆಗಳಲ್ಲಿ ಇಂತಹ ಬೇಡಿಕೆಯನ್ನು ಮಾಡಲಾಗಿದೆ ಎಂದು ಹೇಳಿದರು.

ಇದರಲ್ಲಿ ಹೊಸದೇನೂ ಇಲ್ಲ, 2013ರಲ್ಲಿಯೂ ದಲಿತ ಸಿಎಂ ಆಗ್ರಹ ಕೇಳಿಬಂದಿತ್ತು. ಈ ವಿಚಾರ ಪದೇ ಪದೇ ಪ್ರಸ್ತಾಪವಾಗಿ ಐದು ವರ್ಷಗಳ ಕಾಲ ಹಲವು ದಿನ ನಡೆದರೂ ಬೇಡಿಕೆ ಈಡೇರಲಿಲ್ಲ ಪರಿಸ್ಥಿತಿ ಹೀಗಿದೆ. ನಾವು ಕಾದು ನೋಡಬೇಕು ಅಷ್ಟೇ ಎಂದರು. 

2008 ರಲ್ಲಿ ಮಲ್ಲಿಕಾರ್ಜುನ ಖರ್ಗೆ ದಲಿತ ಸಿಎಂ ಆಗಬೇಕು ಎಂಬ ಬೇಡಿಕೆಯಿತ್ತು. ಆದರೆ, ಅವರು ಸಿಎಂ ಆಗಲಿಲ್ಲ. ಈಗ ಗೃಹ ಸಚಿವರಾಗಿರುವ, 8 ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿದ್ದ  ಡಾ.ಜಿ. ಪರಮೇಶ್ವರ್ ಅವರಿಗೂ ಸಿಎಂ ಆಗುವ ಅವಕಾಶ ಸಿಕಿಲ್ಲ  ಎಂದು ಹೇಳಿದರು.

ದಲಿತ ಸಮುದಾಯದವರಿಂದ ತಮ್ಮ ಸಮುದಾಯದ ನಾಯಕರೊಬ್ಬರು ಸಿಎಂ ಆಗಬೇಕು ಎಂಬ ಆಗ್ರಹ ಕೇಳಿ ಬರುತ್ತಿರುವುದನ್ನು ಗಮಿಸಿದ ಸಚಿವರು, ಈ ವಿಚಾರದಲ್ಲಿ ಪಕ್ಷದ ತೀರ್ಮಾನವೇ ಅಂತಿಮ ಎಂದರು. 

ಈ ಸರ್ಕಾರದ ಎರಡೂವರೆ ವರ್ಷಗಳ ನಂತರ ಇದು ಆಗಬಹುದೇ ಎಂಬ ಪ್ರಶ್ನೆಗೆ, "ಇದು ನಮ್ಮ ಕೈಯಲ್ಲಿಲ್ಲ. ಹೈಕಮಾಂಡ್, ಸಿಎಂ, ಡಿಸಿಎಂ ಮತ್ತು ಪಕ್ಷದ ಅಧ್ಯಕ್ಷರ ಮಟ್ಟದಲ್ಲಿ ನೀವು ಕೇಳಬೇಕು, ನಾನು ಹೇಳಲಾರೆ. ಅವರು ಅದರ ಬಗ್ಗೆ ಸ್ಪಷ್ಟತೆ ನೀಡಬಹುದು, ಕಾದು ನೋಡೋಣ ಎಂದರು. 

SCROLL FOR NEXT