ಎಚ್.ಡಿ. ಕುಮಾರಸ್ವಾಮಿ 
ರಾಜಕೀಯ

ಕುಮಾರಸ್ವಾಮಿಗಳೇ, ಬಿಡದಿ ಮನೆ, ಜೆ ಪಿ ನಗರದ ಮನೆ ಆ ಮನೆ, ಈ ಮನೆ... ಎಲ್ಲೆಲ್ಲಿ ಮನೆಗಳಿವೆ? ಕಾಂಗ್ರೆಸ್ ಪ್ರಶ್ನೆ

ಕರೆಂಟ್ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಸಮರ್ಥನೆ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಬೆಂಗಳೂರು: ಕರೆಂಟ್ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಸಮರ್ಥನೆ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ. ದಂಡ ಕಟ್ಟುತ್ತೇನೆ. ಇದನ್ನೇ ದೊಡ್ಡದು ಮಾಡಿ ಪ್ರಚಾರ ಗಿಟ್ಟಿಸುವ ಕೆಲಸ ಮಾಡುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆ  ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಹೌದೌದು ಕುಮಾರಸ್ವಾಮಿಗಳೇ, ಬಿಡದಿ ಮನೆ, ಜೆ ಪಿ ನಗರದ ಮನೆ ಆ ಮನೆ, ಈ ಮನೆ. ಎಲ್ಲೆಲ್ಲಿ ಮನೆಗಳಿವೆ, ಯಾವ್ಯಾವ ಮನೆಯಲ್ಲಿ ಏನೇನಾಗುತ್ತಿದೆ ಎಂಬುದು ನಿಮಗೇ ತಿಳಿದಿರುವುದಿಲ್ಲ ಪಾಪ! ಎಂದು ಲೇವಡಿ ಮಾಡಿದೆ. 

ಕುಮಾರಸ್ವಾಮಿ ಅವರೇ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ತಾವು ಕರೆಂಟ್ ಕಳ್ಳತನವನ್ನು ಕ್ಷುಲ್ಲುಕ ವಿಚಾರ ಎಂದು ತಿಪ್ಪೆ ಸಾರಿಸುತ್ತಿರುವುದಕ್ಕೆ ನಾಚಿಕೆಯಾಗಬೇಕು. ಹೀಗೆಯೇ ಇನ್ನೆಷ್ಟು ರಾಜ್ಯದ ಲೂಟಿಯನ್ನು "ಕ್ಷುಲ್ಲುಕ ವಿಚಾರ"ವೆಂದು ಸಮರ್ಥಿಸಿಕೊಳ್ಳುವಿರೋ ಏನೋ! ತಮ್ಮ ತಪ್ಪನ್ನು ಕೆಲಸದವರ ಮೇಲೆ ಹಾಕಿ ತಪ್ಪಿಸಿಕೊಳ್ಳುವ ಕುಟೀಲ ಪ್ರಯತ್ನ ತಮ್ಮದು, ಹಿಟ್ ಅಂಡ್ ರನ್ ನಿಮ್ಮ ಕಾಯಕ ಆಗಿದ್ದು ನಿಮ್ಮ ಪಲಾಯನವಾದದ ಭಾಗವಲ್ಲವೇ?ಎಂದು ಪ್ರಶ್ನಿಸಿದೆ. 

ಮುಖ್ಯಮಂತ್ರಿಗಳ ಗೃಹ ಕಚೇರಿಯ 1.9 ಲಕ್ಷದ ಪೀಠೋಪಕರಣಗಳಿಗೆ 1.9 ಕೋಟಿ ಎಂದು ತಾವು ಸುಳ್ಳು ಆರೋಪ ಮಾಡಿದಾಗ ತಮ್ಮದು ಕ್ಷುಲ್ಲುಕ ಬುದ್ಧಿಯಾಗಿತ್ತೇ? ಗ್ಯಾರಂಟಿಗಳ ಬಗ್ಗೆ ರಾಜ್ಯದ ಜನತೆಗೆ ಸುಳ್ಳು ಸಂದೇಶ ಕೊಡುತ್ತಿದ್ದೀರಲ್ಲ, ಅದು ನಿಮ್ಮ ಕ್ಷುಲ್ಲುಕ ಬುದ್ಧಿಯೋ, ಪ್ರಚಾರ ಗಿಟ್ಟಿಸಿಕೊಳ್ಳುವ ಹಪಹಪಿಯೋ? ಎಂದು ಕಿಡಿಕಾರಿದೆ.

ಅಂದಹಾಗೆ ತಾವು ಅಕ್ರಮ ಸಂಪರ್ಕ ಪಡೆದಾಗ ಕರ್ನಾಟಕ ಕತ್ತಲೆಯಲ್ಲಿ ಇರಲಿಲ್ಲ ಅಲ್ಲವೇ, ತಮ್ಮ ದೀಪಾಲಂಕಾರಕ್ಕೆ ಯಾವುದೇ ತೊಂದರೆಯಾಗಲಿಲ್ಲ ಅಲ್ಲವೇ? ದೀಪಾಲಂಕಾರದ ಅದ್ದೂರಿತನ ತೋರುವಾಗ ರಾಜ್ಯದ ಬರ ನೆನಪಾಗಲಿಲ್ಲವೇ? ತಮಗೆ ಯಾವುದಕ್ಕೂ "ಬರ" ಇಲ್ಲವೆಂದು ದಾಡಸಿತನವೇ? ಎಂದು ಸರಣಿ ಪ್ರಶ್ನೆ ಮೂಲಕ ಕಾಂಗ್ರೆಸ ವಾಗ್ದಾಳಿ ನಡೆಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!